‘ತುಂಬಾ ಗೊಂದಲ್ಲಿದ್ದೇನೆ’; ಮುಂದಿನ ಪ್ಲ್ಯಾನ್ ಬಗ್ಗೆ ಕನ್​​ಫ್ಯೂಸ್ ಆದ ಗಿಲ್ಲಿ ನಟ

‘ತುಂಬಾ ಗೊಂದಲ್ಲಿದ್ದೇನೆ’; ಮುಂದಿನ ಪ್ಲ್ಯಾನ್ ಬಗ್ಗೆ ಕನ್​​ಫ್ಯೂಸ್ ಆದ ಗಿಲ್ಲಿ ನಟ


ಗಿಲ್ಲಿ ನಟ ಅವರಿಗೆ ಬಿಗ್ ಬಾಸ್ (ಬಿಗ್ ಬಾಸ್) ಅಲ್ಲಿ ಅಭೂತಪೂರ್ವ ಗೆಲುವು ಸಿಕ್ಕಿದೆ. 45 ಕೋಟಿಗೂ ಅಧಿಕ ಮತಗಳನ್ನು ಪಡೆದು ಗೆಲುವು ಕಂಡಿದ್ದಾರೆ. ಎರಡನೇ ಸ್ಥಾನಕ್ಕೂ ಇವರಿಗೂ ಅಜಗಜಾಂತರ ವ್ಯತ್ಯಾಸವಿದೆ ಎನ್ನಲಾಗುತ್ತಿದೆ. ಈಗ ಅವರು ಮುಂದಿನ ಪ್ಲ್ಯಾನ್ ಬಗ್ಗೆ ಮಾತನಾಡಿದ್ದಾರೆ. ಅವರು ಸಖತ್ ಗೊಂತಾರಂತೆ. ಆ ಬಗ್ಗೆ ವಿವರಿಸಿದ್ದಾರೆ.

ಗಿಲ್ಲಿ ನಟ ಅವರು ಗೊಂದಲದಲ್ಲೇ ಬಿಗ್ ಬಾಸ್ ಗೆ ಬಂದರು. ಇರೋ ಅಭಿಮಾನಿಗಳನ್ನು ಕಾಪಾಡಿಕೊಂಡು ಹೋದರೆ ಸಾಕು ಅವರ ಆಲೋಚನೆಗಳು. ಅವರು ಬಿಗ್ ಬಾಸ್‌ಗೆ ಹೋಗುವಾಗ ಇನ್ಸ್ಟಾಗ್ರಾಮ್ ಅಲ್ಲಿ ಅವರಿಗೆ ಇದ್ದಿದ್ದು ಕೇವಲ ಒಂದು ಲಕ್ಷದಷ್ಟು ಹಿಂಬಾಲಕರು. ಆದರೆ, ಈ ಸಂಖ್ಯೆ ಈಗ 2 ಮಿಲಿಯನ್ ಅಂದರೆ 20 ಲಕ್ಷಕ್ಕೆ ಏರಿದೆ. ಇದೆಲ್ಲವೂ ಗಿಲ್ಲಿಗೆ ಶಾಕ್ ತಂದಿದೆ.

ಗಿಲ್ಲಿ ನಟ ಅವರಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ತಿಳಿಯುತ್ತಿಲ್ಲ. ಕೆಲವರು ಗಿಲ್ಲಿಯ ಹಚ್ಚೆ ಹಾಕಿಸಿಕೊಂಡಿದ್ದಾರೆ. ರೋಡ್‌ಶೋನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದಾರೆ. ಇದೆಲ್ಲ ಗಿಲ್ಲಿಗೆ ಅಚ್ಚರಿ ತಂದಿದೆ. ಮುಂದೆ ಯಾವ ರೀತಿಯ ಹೆಜ್ಜೆ ಇಡಬೇಕು ಎಂಬ ಗೊಂದಲ ಅವರನ್ನು ಬಹುವಾಗಿ ಕಾಡುತ್ತಿದೆ.

‘ತುಂಬಾ ಗೊಂದಲದಲ್ಲಿ ಇದ್ದೇನೆ. ಏನು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಸಾಮಾನ್ಯ ಊಟವನ್ನು ಮಾಡಬಹುದು. ಆದರೆ, ಮೃಷ್ಟಾನ್ನನ ಇಟ್ಟಿದ್ದಾರೆ. ಅದನ್ನು ತಿಂದು ಹೇಗೆ ಅರಗಿಸಿಕೊಳ್ಳಬೇಕು ಎಂಬುದೇ ಕನ್ಫ್ಯೂಷನ್. ನನಗೆ ಅಷ್ಟು ಅನುಭವವಿಲ್ಲ. ವಯಸ್ಸು ಕೂಡ ಸಣ್ಣದು. ಇದನ್ನು ಹೇಗೆ ಹ್ಯಾಂಡಲ್ ಮಾಡಬೇಕು ಗೊತ್ತಾಗುತ್ತಾ ಇಲ್ಲ’ ಎಂದು ಗಿಲ್ಲಿ ನಟ.

ಇದನ್ನೂ ಓದಿ: ‘ಹೊಸ ದಾರಿ ಕಡೆ ಮುಖ ಮಾಡೋ ಹೊತ್ತು’; ದೊಡ್ಡ ಘೋಷಣೆ ಮಾಡಿದ ಗಿಲ್ಲಿ ನಟ

ಗಿಲ್ಲಿ ನಟ ಅವರಿಗೆ ಹೆಜ್ಜೆ ಇಡುವಂತೆ ಸುದೀಪ್ ಅವರು ಸೂಚಿಸಿದ್ದಾರೆ. ಇದನ್ನು ಪಾಲಿಸೋದಾಗಿ ಅವರು ಹೇಳಿದ್ದಾರೆ. ‘ನಾನು ಇನ್ನೂ ಶಾಕ್ ನಿಂದ ಹೊರ ಬಂದಿಲ್ಲ’ ಎನ್ನುತ್ತಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *