Headlines

ವಿಶೇಷ ಅಧಿವೇಶನದಲ್ಲೂ ಚರ್ಚೆ ಆಯ್ತು ಗಿಲ್ಲಿ ನಟನ ಹೆಸರು; ಪ್ರಸ್ತಾಪಿಸಿದ್ದು ಯಾರು? ಕಾರಣವೇನು?

ವಿಶೇಷ ಅಧಿವೇಶನದಲ್ಲೂ ಚರ್ಚೆ ಆಯ್ತು ಗಿಲ್ಲಿ ನಟನ ಹೆಸರು; ಪ್ರಸ್ತಾಪಿಸಿದ್ದು ಯಾರು? ಕಾರಣವೇನು?


‘ಬಿಗ್ ಬಾಸ್ ಕನ್ನಡ ಸೀಸನ್ 12’ರ (ಬಿಬಿಕೆ 12) ವಿನ್ನರ ಗಿಲ್ಲಿ ನಟ ಅವರ ಹೆಸರು ಎಲ್ಲೆಲ್ಲೂ ಚರ್ಚೆ ಆಗುತ್ತಿದೆ. ಅವರು ಗೆದ್ದು ಎರಡು ವಾರ ಪೂರ್ಣಗೊಳ್ಳುತ್ತಾ ಬಂದರೂ ಅವರ ಹವಾ ನಿಂತಿಲ್ಲ. ಹೋದಲ್ಲಿ ಬಂದಲ್ಲಿ ಗಿಲ್ಲಿ ಹೆಸರು ಚರ್ಚೆಯಲ್ಲಿದೆ. ನಾನಾ ಉತ್ಸವಗಳಿಗೆ ತೆರಳಿ ಅವರು ಮನರಂಜನೆ ನೀಡುತ್ತಿದ್ದಾರೆ. ಈಗ ಗಿಲ್ಲಿ ನಟನ ಹೆಸರು ರಾಜ್ಯದ ವಿಶೇಷ ಆವೃತ್ತಿಯಲ್ಲಿಯೂ ಚರ್ಚೆಯಾಗಿದೆ. ಈ ಹೆಸರನ್ನು ಪ್ರಸ್ತಾಪಿಸಿದ್ದು ಶಾಸಕ ಪ್ರದೀಪ್ ಈಶ್ವರ್.

ಗಿಲ್ಲಿ ನಟ ಅವರು ಹಾಸ್ಯದ ಮೂಲಕ ಗಮನ ಸೆಳೆದವರು. ಅವರ ಮಾತಿನ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಒಂದು ಲಕ್ಷ ಇದ್ದ ಅವರ ಹಿಂಬಾಲಕರ ಸಂಖ್ಯೆ ಈಗ 20 ಲಕ್ಷ ತಲುಪಿದೆ. ಇದು ಅವರ ಜನಪ್ರಿಯತೆಗೆ ಸಾಕ್ಷಿ. ಅಧಿವೇಶನದಲ್ಲಿ ಗಿಲ್ಲಿ ಹೆಸರು ಚರ್ಚೆ ಆಗಿದ್ದು ಅವರ ಜನಪ್ರಿಯತೆ ಕಾರಣಕ್ಕೆ, ಬದಲಿಗೆ ಕೇಂದ್ರ ಸರ್ಕಾರ ವಿಧಿಸುತ್ತಿರುವ ಟ್ಯಾಕ್ಸ್ ಕಾರಣಕ್ಕೆ.

ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಶೋ ಕಡೆಯಿಂದ 50 ಕೋಟಿ ರೂಪಾಯಿ ಸಿಕ್ಕಿದೆ. ಆದರೆ, ಇದರಲ್ಲಿ ಸಂಪೂರ್ಣ ಹಣ ಗಿಲ್ಲಿಗೆ ಸೇರೋದಿಲ್ಲ. ಈ ವಿಷಯವನ್ನು ಪ್ರದೀಪ್ ಈಶ್ವರ್ ಪ್ರಸ್ತಾಪಿಸಿದ್ದಾರೆ. ‘ಎಲ್ಲರೂ ಬಿಗ್ ಬಾಸ್ ವಿನ್ನರ್ ಗಿಲ್ಲಿ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದಾರೆ. ಆದರೆ, ಶೋನ ವಿನ್ನರ್ ಅವರಲ್ಲ, ನಿರ್ಮಲಾ ಸೀತಾರಾಮನ್. ಕೊಟ್ಟಿರೋ 50 ಲಕ್ಷ ರೂಪಾಯಿಗೆ 18 ಪರ್ಸೆಂಟ್ ಜಿಎಸ್ಟಿ, 13 ಇನ್ ಕಮ್ ಟ್ಯಾಕ್ಸ್, 4 ಪರ್ಸೆಂಟ್ ಸೆಸ್. ಎಲ್ಲಾ ಸೇರಿ 52 ಪರ್ಸೆಂಟ್ ನಿರ್ಮಲಾ ಅವರಿಗೆ ಹೋಗುತ್ತದೆ. ನಿಜವಾದ ಬಿಗ್ ಬಾಸ್ ವಿನ್ನರ್ ನಿರ್ಮಲಾ’ ಅವರು.

ಇದನ್ನೂ ಓದಿ: ಬಿಗ್ ಬಾಸ್ ಸತೀಶ್ ಗೆ ಕೊಲೆ ಬೆದರಿಕೆ ಹಾಕಿದ ಗಿಲ್ಲಿ ಫ್ಯಾನ್ಸ್ ಬಂಧನ: 80 ಜನರ ಮೇಲಿನ ಕೇಸ್

ಗಿಲ್ಲಿ ನಟ ಅವರಿಗೆ 50 ಲಕ್ಷದಲ್ಲಿ 35 ಲಕ್ಷ ರೂಪಾಯಿ ಸಿಗುತ್ತಿದೆ ಎಂಬುದು ನಿಜವಾದ ಲೆಕ್ಕ. ಪ್ರದೀಪ್ ಅವರು ಇದನ್ನು ಸ್ವಲ್ಪ ಎಗ್ಸಾಗರೇಷನ್ ಮಾಡಿದರೇ ಎಂಬ ಪ್ರಶ್ನೆ ಮೂಡಿದೆ. 50 ಲಕ್ಷದ ಜೊತೆ ಗಿಲ್ಲಿ ನಟನಿಗೆ ಸುದೀಪ್ ಕಡೆಯಿಂದ 10 ಲಕ್ಷ ರೂಪಾಯಿ, ಮಾರುತು ಸುಜುಕಿ ಕಡೆಯಿಂದ ವಿಕ್ಟೋರಿಸ್ ಕಾರು ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *