Headlines

ಗಿಲ್ಲಿ ಜೊತೆ ಒಂದು ಸಿನಿಮಾ ಮಾಡ್ತೀನಿ; ಶಿವರಾಜ್​ಕುಮಾರ್ ಹೀಗೆ ಹೇಳಿದ್ರು

ಗಿಲ್ಲಿ ಜೊತೆ ಒಂದು ಸಿನಿಮಾ ಮಾಡ್ತೀನಿ; ಶಿವರಾಜ್​ಕುಮಾರ್ ಹೀಗೆ ಹೇಳಿದ್ರು


ಬಿಗ್ ಬಾಸ್ ಮನೆಯಲ್ಲಿರುವ ಗಿಲ್ಲಿ ನಟ ಅವರ ಖ್ಯಾತಿಯ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ‘ಡೆವಿಲ್’ ಸಿನಿಮಾದಲ್ಲಿ ಅವರ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದರು. ಗಿಲ್ಲಿಗೆ ಶಿವರಾಜ್ ಕುಮಾರ್ ಅವರನ್ನು ಕಂಡರೆ ತುಂಬಾನೇ ಅಭಿಮಾನ. ಗಿಲ್ಲಿ ಜೊತೆ ಸಿನಿಮಾ ಮಾಡೋದಾಗಿ ಶಿವರಾಜ್ ಕುಮಾರ್ ಅವರು ಈ ಮೊದಲು ಹೇಳಿದ್ದರು. ಆ ಸಂದರ್ಭದ ವಿಡಿಯೋ ಈಗ ವೈರಲ್ ಆಗುತ್ತಿದೆ. ಗಿಲ್ಲಿ ಅಭಿಮಾನಿಗಳು ಇದನ್ನು ವೈರಲ್ ಮಾಡಿದ್ದಾರೆ.

ಗಿಲ್ಲಿ ನಟ ಅವರು ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದವರು. ಅವರು ಈ ಮೊದಲು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸರ್’ನಲ್ಲಿ ನಾನ್ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದರು. ಈ ಶೋಗೆ ಶಿವರಾಜ್ ಕುಮಾರ್ ಅವರು ಜಡ್ಜ್ ಸ್ಥಾನದಲ್ಲಿದ್ದಾರೆ. ಶಿವರಾಜ್ ಕುಮಾರ್ ಅವರಿಗೆ ಗಿಲ್ಲಿಯ ಕಾಮಿಡಿ ಇಷ್ಟವಾಗಿದೆ. ಈ ವೇಳೆ ಶಿವಣ್ಣ ಅವರು ಹೇಳಿದ ಒಂದು ಮಾತು ಗಮನ ಸೆಳೆದಿತ್ತು

ಶಿವರಾಜ್ಕುಮಾರ್ ಅವರು ಗಿಲ್ಲಿಯನ್ನು ಬಹುವಾಗಿ ಮೆಚ್ಚಿಕೊಂಡರು. ಇದಕ್ಕೆ ಕಾರಣ ಅವರು ನಡೆದುಕೊಳ್ಳುತ್ತಿದ್ದ ರೀತಿ. ಕಾಮಿಡಿ ಟೈಮಿಂಗ್ ನೋಡಿ ಶಿವಣ್ಣ ಕಂಗಾಲಾಗಿದ್ದರು. ಆಗ ಅವರು ಒಂದು ಮಾತನ್ನು ಹೇಳಿದ್ದರು. ‘ನಿಜವಾಗಲೂ ಇವರನ್ನು ಹಾಕಿಕೊಂಡು ಸಿನಿಮಾ ಮಾಡಬೇಕು. ಗಿಲ್ಲಿ ನೋಡಿದಾಗಲೆಲ್ಲಾ ತಮಿಳಿನ ಹಾಸ್ಯ ನಟ ಚಂದ್ರಬಾಬುನ ನೆನಪಾಗುತ್ತಾರೆ. ಅವರು ಅದ್ಭುತ ಕಾಮಿಡಿಯನ್. ಇವರನ್ನು ಹಾಕಿಕೊಂಡು ಒಂದು ಸಿನಿಮಾ ಮಾಡುತ್ತೇನೆ’ ಎಂದು ಶಿವಣ್ಣ ಹೇಳಿದ್ದರು.ಆ ಬಳಿಕ ಅಲ್ಲಿಗೆ ಆಗಮಿಸಿದ್ದ ದಿನಕರ್ ತುಗುದೀಪ್ ಕೂಡ ಗಿಲ್ಲಿಯನ್ನು ಕಂಡು ಇಷ್ಟಪಟ್ಟಿದ್ದರು. ಅವರ ಡ್ಯಾನ್ಸ್ ಅಲ್ಲ ಬದಲಾಗಿ, ಡ್ಯಾನ್ಸ್ ಬಳಿಕ ಅವರು ಮಾತನಾಡುತ್ತಾ ಇದ್ದ ರೀತಿಗೆ.

ಗಿಲ್ಲಿ ನಟ ಅವರಿಗೆ ಸಾಕಷ್ಟು ಸಿನಿಮಾ ಆಫರ್‌ಗಳು ಬರುತ್ತಿವೆ. ಈಗ ಬಿಗ್ ಬಾಸ್ ಅಲ್ಲಿ ಅವರ ಟೈಮಿಂಗ್ ಡೈಲಾಗ್ ಡೆಲಿವರಿ ಎಲ್ಲವೂ ಇಷ್ಟ ಆಗಿದೆ. ಹೀಗಾಗಿ, ಅವರಿಗೆ ಬರೋ ಆಫರ್ ಮತ್ತಷ್ಟು ಹೆಚ್ಚಾಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ಡೆವಿಲ್ ಸಿನಿಮಾದಲ್ಲಿ ಅವರು ನಟಿಸಿದ್ದು, ಕಾಮಿಡಿ ಮೂಲಕ ಗಮನ ಸೆಳೆದಿದ್ದಾರೆ. ಇದು ಕೂಡ ಅವರ ವೃತ್ತಿ ಜೀವನಕ್ಕೆ ಸಹಕಾರಿ ಆಗಬಹುದು.

ಇದನ್ನೂ ಓದಿ: ಎರಡನೇ ದಿನವೂ ಕೋಟಿಗಳಲ್ಲಿ ಗಳಿಸಿದ ‘ಡೆವಿಲ್’; ಮುಂದುವರಿದ ದರ್ಶನ್ ಅಬ್ಬರ

ಡೆವಿಲ್ ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಯಿತು. ಈ ಸಿನಿಮಾದಲ್ಲಿ ದರ್ಶನ್ ಹಾಗೂ ಗಿಲ್ಲಿ ಮಧ್ಯೆ ನೇರವಾಗಿ ಯಾವುದೇ ಕಾಂಬಿನೇಷನ್ ಇಲ್ಲವಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *