ಗಲ್ಫ್ ಇಂಧನ ಘಟಕ ಮೇಲೆ ಇರಾನ್ ದಾಳಿಯಿಂದ ಕಚ್ಚಾ ತೈಲ ಬೆಲೆ 112 ಡಾಲರ್ಗೆ ಏರಿಕೆ, ಗ್ಯಾಸ್ ಬೆಲೆಯಲ್ಲೂ ಶೇಕಡಾ 5ರಷ್ಟು ಏರಿಕೆಯಾಗಿದೆ. ಇರಾನ್ ನಡೆಸಿದ ಮಿಸೈಲ್ ದಾಳಿಯಿಂದ ಇದೀಗ ಭಾರತದಲ್ಲೂ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗುತ್ತಾ?

ಅಮೆರಿಕ ಹಾಗೂ ಇಸ್ರೇಲ್ ಮೇಲೆ ದಾಳಿ ಮಾಡಲು ಸಾಧ್ಯವಾಗದ ಇರಾನ್ ಅರಬ್ ರಾಷ್ಟ್ರಗಳ ಮೇಲೆ ಸತತ ದಾಳಿ ಮಾಡುತ್ತಿದೆ. ನಿನ್ನೆ ರಾತ್ರಿಯಿಂದ ಇರಾನ್ ಗಲ್ಫ್ ರಾಷ್ಟ್ರಗಳ ಇಂಧನ ಘಟಕ ಗುರಿಯಾಗಿಸಿ ದಾಳಿ ಮಾಡಿದೆ. ಈ ಪೈಕಿ ಖತಾರ್ನಲ್ಲಿರುವ ರಾಸ ಲಫಾನ್ ವಿಶ್ವದ ಅತೀ ಜೊಡ್ಡ ಎಲ್ಎನ್ಜಿ ಗ್ಯಾಸ್ ಘಟಕ ಸೇರಿದಂತೆ ಐದು ಇಂಧನ ಘಟಗಳ ಮೇಲೆ ಇರಾನ್ ದಾಳಿ ನಡೆಸಿದೆ. ಇತ್ತ ಸೌದಿ ಅರೆಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳ ಮೇಲಿನ ಇಂಧನ ಘಟಕಗಳ ದಾಳಿಯಿಂದ ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 112 ಅಮೆರಿಕನ್ ಡಾಲರ್ಗೆ ಏರಿಕೆಯಾಗಿದೆ.

ಇರಾನ್ ನಿನ್ನೆ ರಾತ್ರಿಯಿಂದ ನಡೆಸಿದ ಸತತ ದಾಳಿ ಪರಿಣಾಮ ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇಕಡಾ 4ರಷ್ಟು ಏರಿಕೆಯಾಗಿದೆ. ಯುದ್ಧ ಆರಂಭಗೊಂಡ ದಿನ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 120 ಡಾಲರ್ಗೆ ಏರಿಕೆಯಾಗಿತ್ತು. ಬಳಿಕ ನಿಧಾನವಾಗಿ ಸಹಜಸ್ಥಿತಿಗೆ ಮರಳಿತ್ತು. ಆದರೆ ದಾಳಿಯಿಂದ ಇದೀಗ ಇಂಧನ ಘಟಕಗಳು ಸ್ಥಗಿತಕೊಂಡಿರುವ ಕಾರಣ ಮತ್ತೆ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದೆ.

ಖತಾರ್ನ ರಾಸ್ ಲಫಾನ್ ಗ್ಯಾಸ್ ಘಟಕದ ಮೇಲಿನ ದಾಳಿಯಿಂದ ತೈಲ ಹಾಗೂ ಗ್ಯಾಸ್ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಗ್ಯಾಸ್ ಪೂರೈಕೆ ಮಾಡುತ್ತಿದ್ದ ರಾಸ್ ಲಫಾನ್ ಘಟಕ ದಾಳಿಗೆ ತುತ್ತಾಗಿದೆ. ಇದರ ಬೆನ್ನಲ್ಲೇ ಗ್ಯಾಸ್ ಬೆಲೆಯಲ್ಲಿ ಶೇಕಡಾ 5ರಷ್ಟು ಏರಿಕೆಯಾಗಿದೆ.

ಇರಾನ್ ಅತೀ ದೊಡ್ಡ ಗ್ಯಾಸ್ ಘಟಕ ದಕ್ಷಿಣ ಪಾರ್ಸ್ ಮೇಲೆ ದಾಳಿಯಾಗಿದೆ. ಇದಕ್ಕೆ ಪ್ರತಿಯಾಗಿ ಗಲ್ಫ್ ರಾಷ್ಟ್ರದ ಇಂಧನ ಘಟಕಗಳ ಮೇಲೆ ದಾಳ ಮಾಡಲಾಗಿದೆ ಎಂದು ಇರಾನ್ ಹೇಳಿದೆ. ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಯನ್ನು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಖಂಡಿಸಿದ್ದಾರೆ. ಇದೇ ವೇಳೆ ಇರಾನ್ ದಕ್ಷಿಣ ಪಾರ್ಸ್ ಮೇಲೆ ದಾಳಿ ಸಂಪೂರ್ಣ ಸೀಝ್ ಮಾಡುವುದಾಗಿ ಎಚ್ಚರಿಸಿದ್ದಾರೆ.

ಭಾರತದಲ್ಲಿ ಈಗಾಗಲೇ ಗ್ಯಾಸ್ ಕೊರತೆ ಕಾಡುತ್ತಿದೆ. ಇದೀಗ ಹಲವು ಇಂಧನ ಘಟಕಗಳ ಮೇಲೆ ದಾಳಿಯಾಗಿರುವ ಕಾರಣ ಸ್ಥಗಿತಗೊಂಡಿದೆ. ಪೂರೈಕೆಯಲ್ಲಿನ ವ್ಯತ್ಯಯಗಳಿಂದ ಇದೀಗ ಭಾರತದ ಮೇಲೂ ಬೆಲೆ ಏರಿಕೆ ಆತಂಕ ಎದುರಾಗಿದೆ. ಸದ್ಯ ಏರಿಕೆಯಾಗುವ ಸಾಧ್ಯತೆ ಇಲ್ಲ. ಆದರೆ ಸ್ಥಗಿತ ಮುಂದುವರಿದರೆ, ಪೂರೈಕೆಯಲ್ಲಿ ವ್ಯತ್ಯಯ ಹೆಚ್ಚಾದರೆ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಯಾಗಲಿದೆ.

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಾ

Source link
ಗಲ್ಫ್ ಇಂಧನ ಘಟಕ ಮೇಲೆ ಇರಾನ್ ದಾಳಿಯಿಂದ ಕಚ್ಚಾ ತೈಲ ಬೆಲೆ 112 ಡಾಲರ್ಗೆ ಏರಿಕೆ