Video: ಗೋವಾದಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿದ ವಿದೇಶಿ ಮಹಿಳೆ, ಆ ರಾತ್ರಿ ನಡೆದಿದ್ದೇನು?

Video: ಗೋವಾದಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿದ ವಿದೇಶಿ ಮಹಿಳೆ, ಆ ರಾತ್ರಿ ನಡೆದಿದ್ದೇನು?


ಗೋವಾ, ಜನವರಿ 13: ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದ ವಿದೇಶಿ ಮಹಿಳೆ ಅಕ್ಷರಶಃ ಭಯಭೀತರಾಗಿದ್ದಾರೆ. ಗೋವಾದಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿದ್ದರು. ಆಗ ರಾತ್ರಿ ಹತ್ತು ಗಂಟೆ ಮಾಡಿದ್ದು, ಎಲ್ಲಿಗೆ ಹೋಗುವುದು, ಏನು ಎಂದು ಅರಿಯದೆ ನಿಂತಲ್ಲೇ ನಿಂತಿದ್ದರು. ಆಗ ಸಹಾಯಕ್ಕೆ ಬಂದಿದ್ದೇ ರ್ಯಾಪಿಡೊ ಚಾಲಕಿ ಸಿಂಧು ಕುಮಾರಿ. ಅವರು ತಮ್ಮ ವಾಹನವನ್ನು ನಿಲ್ಲಿಸಿ ಆ ಮಹಿಳೆಗೆ ಧೈರ್ಯ ತುಂಬಿ, ಸುರಕ್ಷಿತವಾಗಿ ಹೋಟೆಲ್ ಕೊಕೊನಟ್‌ಗೆ ಇಳಿಸಿ, ಅವರ ಭಯವನ್ನು ನಗುವಾಗಿ ಪರಿವರ್ತಿಸಿದ್ದಾರೆ. ಈ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *