ಲೂತ್ರಾ ಸಹೋದರರನ್ನು ಕರೆತರುತ್ತಿರುವುದು
ನವದೆಹಲಿ, ಡಿಸೆಂಬರ್ 16: ಗೋವಾ(ಗೋವಾ)ದ ಬಿರ್ಚ್ ಬೈ ರೋಮಿಯೋ ನೈಟ್ ಕ್ಲಬ್ ದೆಹಲಿಯಾದ ಸೌರಭ್ ಹಾಗೂ ಗೌರವ್ ಲೂತ್ರಾರನ್ನು ಪೊಲೀಸರು ಥೈಲ್ಯಾಂಡ್ ನಿಂದ ಕರೆತಂದಿದ್ದಾರೆ. ನೈಟ್‌ಕ್ಲಬ್‌ನಲ್ಲಿ ಅಗ್ನಿ ದುರಂತ ಸಂಭವಿಸಿ 25 ಮಂದಿ ಪ್ರಾಣ ಕಳೆದುಕೊಂಡಿದ್ದರು. ನಂತರ ಇಬ್ಬರು ಥೈಲ್ಯಾಂಡ್‌ಗೆ ಪಲಾಯನ ಮಾಡಿದ್ದರು. ವಿಮಾನ ನಿಲ್ದಾಣಕ್ಕೆ ಬಂದ ತಕ್ಷಣ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ.
ಕ್ಲಬ್ ಒಳಗೆ ಬಳಸಿದ ಪಟಾಕಿಗಳು ಬೆಂಕಿಗೆ ಕಾರಣವಾಗಿರಬಹುದು ಎಂದು ಸೂಚಿಸುತ್ತಾರೆ. ಹೆಚ್ಚಿನ ಜನರು ಒಳಗೆ ಸಿಲುಕಿಕೊಂಡ ನಂತರ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಗಳು. ಲೂತ್ರಾ ಸಹೋದರರನ್ನು (ಥೈಲ್ಯಾಂಡ್‌ನಲ್ಲಿ ಬಂಧಿಸಲಾಗಿದೆ. ವಿದೇಶಾಂಗ ಸಚಿವಾಲಯಕ್ಕೆ ಕ್ರಮ ಕೈಗೊಳ್ಳುವಂತೆ ಗೋವಾ ಸರ್ಕಾರ ವಿನಂತಿಸಿದ ಬಳಿಕ ಲೂತ್ರಾ ಸಹೋದರರ ಪಾಸ್‌ಪೋರ್ಟ್ ರದ್ದುಗೊಳಿಸಲಾಗಿದೆ.
ಈ ಪ್ರಕರಣದಲ್ಲಿ ಆರು ಜನರನ್ನು ಬಂಧಿಸಲಾಗಿದೆ, ಗೋವಾ ಸರ್ಕಾರದ ಆದೇಶದಂತೆ ಲೂತ್ರಾ ಸಹೋದರರ ಒಡೆತನದಲ್ಲಿದ್ದ ಇನ್ನೊಂದು ನೈಟ್‌ಕ್ಲಬ್‌ನ್ನು ನೆಲಸಮಗೊಳಿಸಲಾಗಿದೆ. ಈ ಸಂಬಂಧ ಮೂವರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಿ, ಗೋವಾ ಸಿಎಂ ಆದೇಶಹೊರಡಿಸಿದ್ದಾರೆ.
ಮತ್ತಷ್ಟು ಓದಿ: ಗೋವಾ ನೈಟ್ಕ್ಲಬ್ ಅಗ್ನಿ ದುರಂತ: ಲೂತ್ರಾ ಸಹೋದರರ ಒಡೆತನದ ಕಟ್ಟಡ ನೆಲಸಮ
ರದ್ದತಿ ಮತ್ತು ವಿಳಂಬದಿಂದಾಗಿ ದೇಶಾದ್ಯಂತ ವಿಮಾನಯಾನ ಸಂಸ್ಥೆ ಸಂಕಷ್ಟಕ್ಕೆ ಸಿಲುಕಿದ್ದಾಗ ಇಂಡಿಗೋ ವಿಮಾನದಲ್ಲಿ ಅವರು ಪರಾರಿಯಾಗಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಡಿಸೆಂಬರ್ 7 ರಂದು ಬೆಳಗಿನ ಜಾವ 1.17 ಕ್ಕೆ ಸಹೋದರರು ಥೈಲ್ಯಾಂಡ್ಗೆ ವಿಮಾನ ಟಿಕೆಟ್ಗಳನ್ನು ಬುಕ್ ಮಾಡಿದ್ದರು.
ಲೂತ್ರಾ ಸಹೋದರರನ್ನು ಕರೆತರುತ್ತಿರುವುದು
#ವೀಕ್ಷಿಸಿ | ಬ್ಯಾಂಕಾಕ್, ಥೈಲ್ಯಾಂಡ್ | ಗೋವಾದ ಅರ್ಪೋರಾದಲ್ಲಿರುವ ಬರ್ಚ್ ಬೈ ರೋಮಿಯೋ ಲೇನ್ ನೈಟ್ಕ್ಲಬ್ನ ಮಾಲೀಕರಾದ ಲುಥ್ರಾ ಸಹೋದರರು-ಗೌರವ್ ಮತ್ತು ಸೌರಭ್ ಅವರನ್ನು ಇಂದು ಥಾಯ್ಲೆಂಡ್ನಿಂದ ಗಡೀಪಾರು ಮಾಡಲಾಗುತ್ತಿದೆ.
ಇಬ್ಬರು ಸಹೋದರರನ್ನು ದೆಹಲಿಗೆ ಕರೆತರಲಾಗುತ್ತಿದೆ, ಅಲ್ಲಿ ಅವರು… pic.twitter.com/acedxyRkxJ
– ANI (@ANI) ಡಿಸೆಂಬರ್ 16, 2025
ಆ ಸಮಯದಲ್ಲಿ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ತಮ್ಮ ನೈಟ್ಕ್ಲಬ್ನಲ್ಲಿ ಬೆಂಕಿಯನ್ನು ನಂದಿಸಲು ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದರು. ಬಂಧನಕ್ಕೆ ಹೆದರಿ ಸಹೋದರರು ಭಾರತಕ್ಕೆ ಮರಳಲು ನಿರಾಕರಿಸಿದ್ದರು ಮತ್ತು ಬಂಧನ ಪೂರ್ವ ಜಾಮೀನು ಕೋರಿ ದೆಹಲಿಯ ರೋಹಿಣಿ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ