Headlines

ಶಕ್ತಿದೇವತೆ ಹುಲಿಗೆಮ್ಮ ದೇವಿ ಹುಂಡಿಯಲ್ಲಿ ಅಪಾರ ಹಣ, ಚಿನ್ನಾಭರಣ ಸಂಗ್ರಹ

ಶಕ್ತಿದೇವತೆ ಹುಲಿಗೆಮ್ಮ ದೇವಿ ಹುಂಡಿಯಲ್ಲಿ ಅಪಾರ ಹಣ, ಚಿನ್ನಾಭರಣ ಸಂಗ್ರಹ


ಕೊಪ್ಪಳ, ಅಕ್ಟೋಬರ್ 17: ಇತಿಹಾಸ ಪ್ರಸಿದ್ಧ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನದ ಹುಂಡಿ ಏಣಿಕೆಯನ್ನು ಗುರುವಾರ (ಅ.16) ನಡೆಸಲಾಯಿತು. ಸತತ ಮೂರು ದಿನಗಳ ಕಾಲ ಮುಜರಾಯಿ ಇಲಾಖೆ ಸಿಬ್ಬಂದಿ ಹುಂಡಿ ಏಣಿಕೆ ಮಾಡಿದ್ದಾರೆ. ದೇವಸ್ಥಾನದ ಹುಂಡಿಯಲ್ಲಿ ಅಪಾರ ಹಣ, ಚಿನ್ನಾಭರಣ ಸಂಗ್ರಹವಾಗಿದೆ. 43 ದಿನಗಳಲ್ಲಿ ಒಟ್ಟು 95.02 ಲಕ್ಷ ಹಣ ಸಂಗ್ರಹವಾಗಿದೆ. ಅಷ್ಟೇ ಅಲ್ಲದೆ 60 ಗ್ರಾಂ ಬಂಗಾರ, 7 ಕೆಜಿ ಬೆಳ್ಳಿ ಸಹ ಸಮಗ್ರವಾಗಿದೆ. ಸೆಪ್ಟೆಂಬರ್ 3 ರಂದು ಹುಂಡಿಯಲ್ಲಿದ್ದ ಹಣ ಎಣಿಕೆ ವೇಳೆ ಒಟ್ಟು 40 ದಿನದಲ್ಲಿ 1.17 ಕೋಟಿ ರೂಪಾಯಿ ಜೊತೆಗೆ 130 ಗ್ರಾಂ ಬಂಗಾರ, 10 ಕೆಜಿ ಬೆಳ್ಳಿ ಆಭರಣ ಸಂಗ್ರಹವಾಗಿತ್ತು. ಈಗ ಗುರುವಾರ ಭಾರೀ ಪ್ರಮಾಣದಲ್ಲಿ ನಗದು ಮತ್ತು ಬೆಳ್ಳಿ ಬಂಗಾರ ಕಂಡುಬಂದಿದೆ. ದೇವಸ್ಥಾನದಲ್ಲಿ ಬಿಗಿ ಕಣ್ಗಾವಲಿನಲ್ಲಿ ಹುಂಡಿ ಏಣಿಕೆ ಕಾರ್ಯ ನೆರವೇರಿದ್ದು, ಹುಂಡಿ ಏಣಿಕೆ ಮುಜರಾಯಿ ಇಲಾಖೆ ಸಿಬ್ಬಂದಿಯನ್ನು ಗ್ರಾಮಸ್ಥರು ಸನ್ಮಾನಿಸಿದರು.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *