ಖರಾತ್ ಕರಾಮತ್ತು, ಅತ್ಯಾ**ರಕ್ಕೂ ಮುನ್ನ ಮಹಿಳೆಯರಿಗೆ ಉಪ್ಪು ನೀರು ಕುಡಿಸುತ್ತಿದ್ದ ನಕಲಿ ಗುರೂಜಿ

ಖರಾತ್ ಕರಾಮತ್ತು, ಅತ್ಯಾ**ರಕ್ಕೂ ಮುನ್ನ ಮಹಿಳೆಯರಿಗೆ ಉಪ್ಪು ನೀರು ಕುಡಿಸುತ್ತಿದ್ದ ನಕಲಿ ಗುರೂಜಿ

ಖರಾತ್ ಕರಾಮತ್ತು, ಅತ್ಯಾ**ರಕ್ಕೂ ಮುನ್ನ ಮಹಿಳೆಯರಿಗೆ ಉಪ್ಪು ನೀರು ಕುಡಿಸುತ್ತಿದ್ದ ನಕಲಿ ಗುರೂಜಿ

ಖರಾತ್ ಕರಾಮತ್ತು, ಅತ್ಯಾ**ರಕ್ಕೂ ಮುನ್ನ ಮಹಿಳೆಯರಿಗೆ ಉಪ್ಪು ನೀರು ಕುಡಿಸುತ್ತಿದ್ದ ನಕಲಿ ಗುರೂಜಿ, 100ಕ್ಕೂ ಹೆಚ್ಚು ಮಹಿಳೆಯರನ್ನು ಈತ ಬಳಸಿಕೊಂಡಿದ್ದಾನೆ. ಪೂಜೆ ಹೆಸರಿನಲ್ಲಿ ಈತ ಮಾಡಿದ ಒಂದೊಂದೆ ಕತೆ ಬಹಿರಂಗವಾಗಿದೆ.

ನಾಸಿಕ್‌ನಲ್ಲಿ ದೇವಮಾನವ ಎಂದೇ ಗುರುತಿಸಿಕೊಂಡಿದ್ದ ನಕಲಿ ಗುರೂಜಿ ಅಶೋಕ್ ಖಾರತ್ ವಿಚಾರಣೆಯಲ್ಲಿ ಕೆಲ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. 100ಕ್ಕೂ ಹೆಚ್ಚು ಮಹಿಳೆಯನ್ನು ಈತ ಬಳಸಿಕೊಂಡಿದ್ದಾನೆ. ಅತ್ಯಾ**ರ ಎಸಗಿದ್ದಾನೆ. ಗುರೂಜಿ ಸಲಹೆ, ಮಾರ್ಗದರ್ಶನ ಪಡೆಯಲು ಬರುತ್ತಿದ್ದ ಮಹಿಳೆಯರ ಮೇಲೆ ಈತ ಕ್ರೌರ್ಯ ಮೆರೆದಿದ್ದಾನೆ. ಇದೀಗ ಈತ ಮಹಿಳೆಯನ್ನು ಬಳಸಿಕೊಳ್ಳುವ ಮೊದಲು ವಿಶೇಷ ನೀರನ್ನು ಕುಡಿಸುತ್ತಿದ್ದ ಎಂಬ ಮಾಹಿತಿಯೂ ಬಯಲಾಗಿದೆ.

ಈ ಖರಾಬು ಬಾಬ ತನ್ನ ಮೂತ್ರ ಕುಡಿಸಿ ಮಹಿಳೆಯರನ್ನು ಬಳಸಿಕೊಳ್ಳುತ್ತಿರುವ ವಿಡಿಯೋಗಳು ಬಹಿರಂಗವಾಗಿತ್ತು. ಇದೀಗ ತನಿಖೆಯಲ್ಲಿ ಉಪ್ಪು ನೀರು ಹಾಗೂ ಕಹಿ ನೀರನ್ನು ಕುಡಿಸುತ್ತಿದ್ದ ಅನ್ನೋ ಮಾಹಿತಿಯೂ ಬಹಿರಂಗವಾಗಿದೆ. ಈ ನೀರು ಕುಡಿಸಿದ ಬಳಿಕ ಮಹಿಳೆಯರಿಗೆ ತಲೆ ಸುತ್ತು ಬರುತ್ತಿತ್ತು. ಬಳಿಕ ಅವರನ್ನು ಬಳಸಿಕೊಳ್ಳುತಿದ್ದ ಅನ್ನೋ ಮಾಹಿತಿಯೂ ಬಯಲಾಗಿದೆ.

ಸರ್ಕಾರಿ ವಕೀಲರ ಪ್ರಕಾರ, ಈ ನಕಲಿ ಗುರೂಜಿ ಖರತ್, ಸಂತ್ರಸ್ತೆಗೆ ಕುಡಿಯಲು "ಉಪ್ಪು ಮತ್ತು ಕಹಿ ನೀರು" ಕೊಟ್ಟಿದ್ದ. ಈ ನೀರು ಕುಡಿದ ನಂತರ ಸಂತ್ರಸ್ತೆಗೆ ತಲೆಸುತ್ತು ಬಂದಿತ್ತು. ಇದಾದ ಬಳಿಕ ಆರೋಪಿ ಆಕೆಯ ಮೇಲೆ ಅತ್ಯಾ**ರ ಎಸಗಿದ್ದಾನೆ. ಇದೀಗ ಎಸ್‌ಐಟಿ, ಆ ನೀರಿನಲ್ಲಿ ಅಂತಹದ್ದೇನಿತ್ತು ಮತ್ತು ಅದನ್ನು ಎಲ್ಲಿಂದ ತರಲಾಗಿತ್ತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದೆ.

ಸಹಾಯಕ ಸರ್ಕಾರಿ ವಕೀಲ ಶೈಲೇಂದ್ರ ಬಾಗಡೆ ಅವರು ಕೋರ್ಟ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಎಸ್‌ಐಟಿ ಹಲವು ಪ್ರಮುಖ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ, ಆದರೆ ಆರೋಪಿ ಅಶೋಕ್ ಖರಾತ್ ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ಖರಾತ್ ತನ್ನ ಪ್ರಮುಖ ಸಂಪರ್ಕಗಳ ನಂಬರ್‌ಗಳನ್ನು ಬೇರೆ ಹೆಸರು ಅಥವಾ ಸರ್‌ನೇಮ್ ಬಳಸಿ ಸೇವ್ ಮಾಡಿರುವ ಸಾಧ್ಯತೆ ಇದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ತನಿಖಾ ಸಂಸ್ಥೆಗಳು ಖರಾತ್‌ನ ಸ್ಥಿರ ಮತ್ತು ಚರ ಆಸ್ತಿಗಳ ಬಗ್ಗೆಯೂ ತನಿಖೆ ನಡೆಸುತ್ತಿವೆ. ಆತ ತನ್ನ ಹೆಸರಲ್ಲಿ ಅಥವಾ ಬೇರೆಯವರ ಹೆಸರಲ್ಲಿ ಸಾಕಷ್ಟು ಬೇನಾಮಿ ಆಸ್ತಿ ಮಾಡಿರುವ ಬಗ್ಗೆ ಅಧಿಕಾರಿಗಳಿಗೆ ಅನುಮಾನವಿದೆ. ಇದೇ ವೇಳೆ, ಅಶೋಕ್ ಖರಾತ್ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದರ ಜೊತೆಗೆ, ಹಲವು ಉದ್ಯಮಿಗಳಿಗೂ ವಂಚಿಸಿದ್ದಾನೆ ಎಂಬುದು ಗೊತ್ತಾಗಿದೆ.

ಅಷ್ಟೇ ಅಲ್ಲ, 100ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಲ್ಲಿ ಅಶೋಕ್ ಖರಾತ್‌ನ ಹೆಸರು ನಾಮಿನಿಯಾಗಿ ದಾಖಲಾಗಿದೆ. ಇದರಿಂದ ಜನರ ಹಣಕಾಸಿನ ವ್ಯವಹಾರಗಳಲ್ಲಿ ಆತ ಎಷ್ಟರಮಟ್ಟಿಗೆ ಹಸ್ತಕ್ಷೇಪ ಮಾಡುತ್ತಿದ್ದ ಎಂಬುದು ಸ್ಪಷ್ಟವಾಗುತ್ತದೆ. ಇದೇ ಪ್ರಕರಣದಲ್ಲಿ ರಾಜೀನಾಮೆ ನೀಡಿದ ಮಹಾರಾಷ್ಟ್ರ ಮಹಿಳಾ ಆಯೋಗ ಮುಖ್ಯಸ್ಥೆ ರೂಪಾಲಿ ಚಾಕಣಕರ್ ಅವರ ಸಹೋದರಿಯ ಹೆಸರಿನಲ್ಲೂ ಖರಾತ್ ಒಂದು ಬ್ಯಾಂಕ್ ಖಾತೆ ಹೊಂದಿದ್ದಾನೆ ಅನ್ನೋ ಮಾಹಿತಿ ಬಯಲಾಗಿದೆ.

100ಕ್ಕೂ ಖಾತೆಗಳಲ್ಲಿ ನಾಮಿನಿ

Source link

Leave a Reply

Your email address will not be published. Required fields are marked *