ಕಾರವಾರ, ಡಿಸೆಂಬರ್ 20: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ದೇಗುಲಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಶುಕ್ರವಾರ ಪೂಜೆ ಸಲ್ಲಿಸಿದರು. ಆ ಸಂದರ್ಭದಲ್ಲಿ ಗೋಕರ್ಣ ಮಹಾಗಣಪತಿ ದೇವಾಲಯದಲ್ಲಿ ಡಿಕೆ ಶಿವಕುಮಾರ್ ಪರ ಶುಭ ಸೂಚನೆ ಸಿಕ್ಕಿದೆ. ಡಿಕೆಶಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿ ಎಂಬ ಆಶಯದೊಂದಿಗೆ ವಿಶೇಷ ಪೂಜೆ ನೆರವೇರಿಸಿದ ವೇಳೆ, ಮಹಾಗಣಪತಿಗೆ ತಲೆಯ ಮೇಲೆ ಹೂ ಇಟ್ಟು ಪ್ರಾರ್ಥನೆ ಸಲ್ಲಿಸಲಾಯಿತು. ಪೂಜೆ ವೇಳೆ ಮಹಾಗಣಪತಿ ಬಲಗಡೆಯಿಂದ ಹೂ ನೀಡಿದ್ದು, ಇದು ಭವಿಷ್ಯದ ಉತ್ತಮ ಬೆಳವಣಿಗೆಯ ಸಂಕೇತವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಆಂಡ್ಲೇ ಗ್ರಾಮದಲ್ಲಿರುವ ಪ್ರಸಿದ್ಧ ದೇವತೆ ಜಗದೀಶ್ವರಿ ದೇವಸ್ಥಾನವೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಜಗದೀಶ್ವರಿ ದೇವಿಗೆ ಐದು ಬಾರಿ ಬೇಡಿಕೆ ಇಟ್ಟಾಗಲೂ ಪ್ರತಿಬಾರಿಯೂ ಒಳ್ಳೆಯ ಮುನ್ಸೂಚನೆ ದೊರೆತಿದೆ ಎಂದು ದೇವಸ್ಥಾನದ ಅರ್ಚಕರು.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ