Headlines

ಮುಂದುವರೆದ ಚಿನ್ನದ ಬೆಲೆಯಲ್ಲಿ ಏರಿಳಿತ; ಶುಕ್ರವಾರ ಕೊಂಚ ಕುಸಿದ ಬಂಗಾರದ ಬೆಲೆ! ಇವತ್ತಿನ ರೇಟ್ ಎಷ್ಟು?

ಮುಂದುವರೆದ ಚಿನ್ನದ ಬೆಲೆಯಲ್ಲಿ ಏರಿಳಿತ; ಶುಕ್ರವಾರ ಕೊಂಚ ಕುಸಿದ ಬಂಗಾರದ ಬೆಲೆ! ಇವತ್ತಿನ ರೇಟ್ ಎಷ್ಟು?

ಮುಂದುವರೆದ ಚಿನ್ನದ ಬೆಲೆಯಲ್ಲಿ ಏರಿಳಿತ; ಶುಕ್ರವಾರ ಕೊಂಚ ಕುಸಿದ ಬಂಗಾರದ ಬೆಲೆ! ಇವತ್ತಿನ ರೇಟ್ ಎಷ್ಟು?

ಬೆಂಗಳೂರು: ಮದುವೆ ಸೇರಿದಂತೆ ಶುಭ ಸಮಾರಂಭಗಳು ಹತ್ತಿರವಾಗುತ್ತಿದ್ದಂತೆಯೇ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಏರಿಳಿತಗಳು ಉಂಟಾಗುತ್ತಿದೆ. ಇವತ್ತಿನ ಚಿನ್ನ-ಬೆಳ್ಳಿ ದರ ಎಷ್ಟಿದೆ ನೋಡೋಣ.

ಬೆಂಗಳೂರಿನಲ್ಲಿ ಗುರುವಾರ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಶುಕ್ರವಾರ ಅಂದರೆ ಫೆಬ್ರವರಿ 20ರಂದು ಕೊಂಚ ಇಳಿಕೆ ಕಂಡಿದೆ.

ಚಿನ್ನ ಹಾಗೂ ಬೆಳ್ಳಿ ಖರೀದಿಸುವವರಿಗೆ ಗುರುವಾರವಾದ ನಿನ್ನೆ ಕೊಂಚ ಬೆಲೆ ಏರಿಕೆ ಬಿಸಿ ತಟ್ಟಿತ್ತು. ಫೆಬ್ರವರಿ 19ರಂದು ಒಂದೇ ದಿನ 24 ಕ್ಯಾರಟ್ ಹತ್ತು ಗ್ರಾಮ್ ಚಿನ್ನಕ್ಕೆ ಬರೋಬ್ಬರಿ 2290 ರುಪಾಯಿ ಏರಿಕೆ ಕಂಡಿತ್ತು. ಅದೇ ರೀತಿ 22 ಕ್ಯಾರಟ್ ಹತ್ತು ಗ್ರಾಮ್ ಚಿನ್ನದ ಬೆಲೆಯಲ್ಲಿ 2100 ರುಪಾಯಿ ಏರಿಕೆ ಕಂಡಿದ್ದು ನೋಡಿ ಗ್ರಾಹಕರು ಕೊಂಚ ಆತಂಕಕ್ಕೆ ಒಳಗಾಗಿದ್ದರು.

ಇದೀಗ ಶುಕ್ರವಾರ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಶುಕ್ರವಾರವಾದ ಇಂದು 10 ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 320 ರುಪಾಯಿ ಇಳಿಕೆ ಕಂಡಿದೆ. ಅಲ್ಲಿಗೆ 100 ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 3200 ರುಪಾಯಿ ಇಳಿಕೆ ಕಂಡಿದೆ. ಇಂದು 24 ಕ್ಯಾರಟ್ ಪ್ರತಿ ಗ್ರಾಮ್ ಚಿನ್ನಕ್ಕೆ 15,617 ರುಪಾಯಿಗಳಾಗಿವೆ.

ಇನ್ನು ಇದೇ ವೇಳೆ 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಕೊಂಚ ಇಳಿಕೆ ಕಂಡಿರುವುದು ಗ್ರಾಹಕರು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಆಭರಣ ಚಿನ್ನವಾಗಿರುವ 22 ಕ್ಯಾರಟ್ 10 ಗ್ರಾಮ್ ಮೇಲೆ ಬರೋಬ್ಬರಿ 300 ರುಪಾಯಿ ಇಳಿಕೆ ಕಂಡಿದೆ. ಇಂದು 22 ಕ್ಯಾರಟ್ ಪ್ರತಿ ಗ್ರಾಮ್ ಚಿನ್ನಕ್ಕೆ 14,315 ರುಪಾಯಿಗಳಾಗಿವೆ.

ಗುರುವಾರ ಪ್ರತಿ 10 ಗ್ರಾಮ್ ಚಿನ್ನಕ್ಕೆ ಎರಡು ಸಾವಿರಕ್ಕೂ ಹೆಚ್ಚು ಏರಿಕೆ ಕಂಡಿದ್ದ ಚಿನ್ನದ ಬೆಲೆಯು ವಾರಾಂತ್ಯವಾಗುತ್ತಿದ್ದಂತೆಯೇ ಕೊಂಚ ಇಳಿಕೆ ಕಂಡಿರುವುದು ಚಿನ್ನ ಖರೀದಿಸುವವರ ಮುಖದಲ್ಲಿ ಕೊಂಚ ಸಮಾಧಾನ ತರಿಸಿದೆ.

ಇನ್ನು ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಪ್ರತಿ ಕೆಜಿ ಬೆಳ್ಳಿಗೆ ಬರೋಬ್ಬರಿ 2.70 ಲಕ್ಷ ರುಪಾಯಿನಲ್ಲಿಯೇ ಮಾರಾಟವಾಗುತ್ತಿದೆ. ನಿನ್ನೆಯೂ ಇದೇ ಬೆಲೆಗೆ ಬೆಳ್ಳಿ ಮಾರಾಟವಾಗಿತ್ತು.

Source link

Leave a Reply

Your email address will not be published. Required fields are marked *