Gold Rates: ಚಿನ್ನದ ಬೆಲೆ ಗ್ರಾಮ್​ಗೆ 140 ರೂ ಏರಿಕೆ; ಇಲ್ಲಿದೆ ದರಪಟ್ಟಿ

Gold Rates: ಚಿನ್ನದ ಬೆಲೆ ಗ್ರಾಮ್​ಗೆ 140 ರೂ ಏರಿಕೆ; ಇಲ್ಲಿದೆ ದರಪಟ್ಟಿ


ಚಿನ್ನದ ದರಗಳು: ಚಿನ್ನದ ಬೆಲೆ ಗ್ರಾಮಕ್ಕೆ 140 ರೂ ಏರಿಕೆ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಏಪ್ರಿಲ್ 10: ಚಿನ್ನ, ಬೆಳ್ಳಿ ಬೆಲೆಗಳು ಏರಿಳಿತದ ಟ್ರೆಂಡ್ ಮುಂದುವರಿಯುತ್ತಿದೆ. ಚಿನ್ನದ ಬೆಲೆ (Gold Rates) ಮೊನ್ನೆ ಏರಿತ್ತು, ನಿನ್ನೆ ಕುಸಿದಿತ್ತು, ಇವತ್ತು ಮತ್ತೆ ಏರಿದೆ. ಶುಕ್ರವಾರ ಇದರ ಬೆಲೆ ಗ್ರಾಮಕ್ಕೆ 140 ರೂ ಹೆಚ್ಚಿದೆ. ವಿದೇಶದಲ್ಲಿ ಇದರ ಬೆಲೆಯಲ್ಲಿ ಅಲ್ಪ ಏರಿಳಿತ ಪ್ರದರ್ಶನ. ಬೆಳ್ಳಿ ಬೆಲೆಯಲ್ಲೂ ಇದೇ ಟ್ರೆಂಡ್ ಇದೆ. ನಿನ್ನೆ ಇಳಿದಿದ್ದ ಬೆಳ್ಳಿ ಬೆಲೆ ಇವತ್ತು 5 ರೂ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,40,250 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,53,000 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 26,000 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,40,250 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 26,000 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 10ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,300 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,025 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,475 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,300 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,025 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 14,025 ರೂ
  • ಬೆಲೆ: 14,125 ರೂ
  • ಮುಂಬೈ: 14,025 ರೂ
  • ದೆಹಲಿ: 14,040 ರೂ
  • ಕೋಲ್ಕತಾ: 14,025 ರೂ
  • ಕೇರಳ: 14,025 ರೂ
  • ಅಹ್ಮದಾಬಾದ್: 14,030 ರೂ
  • ಜೈಪುರ: 14,040 ರೂ
  • ಲಕ್ನೋ: 14,040 ರೂ
  • ಭುವನೇಶ್ವರ್: 14,025 ರೂ

ಇದನ್ನೂ ಓದಿ: ಸ್ಮಾರ್ಟ್ ಆಗಿ ಯೋಜನೆ ಮಾಡಿ; ಈ 4 ಹಣಕಾಸು ತಪ್ಪುಗಳನ್ನು ಮಾಡದಿರಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 583 ರಿಂಗಿಟ್ (13,586 ರೂಪಾಯಿ)
  • ದುಬೈ: 534.50 ಡಿರಾಮ್ (13,485 ರೂಪಾಯಿ)
  • ಅಮೆರಿಕ: 149 ಡಾಲರ್ (13,807 ರೂಪಾಯಿ)
  • ಸಿಂಗಾಪುರ: 188.50 ಸಿಂಗಾಪುರ ಡಾಲರ್ (13,711 ರೂಪಾಯಿ)
  • ಕತಾರ್: 531.50 ಕತಾರಿ ರಿಯಾಲ್ (13,512 ರೂ)
  • ಸೌದಿ ಅರೇಬಿಯಾ: 545 ಸೌದಿ ರಿಯಾಲ್ (13,460 ರೂಪಾಯಿ)
  • ಓಮನ್: 56.65 ಒಮಾನಿ ರಿಯಾಲ್ (13,638 ರೂಪಾಯಿ)
  • ಕುವೇತ್: 43.90 ಕುವೇತಿ ದಿನಾರ್ (13,275 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 260 ರೂ
  • ಬೆಲೆ: 265 ರೂ
  • ಮುಂಬೈ: 260 ರೂ
  • ದೆಹಲಿ: 260 ರೂ
  • ಕೋಲ್ಕತಾ: 260 ರೂ
  • ಕೇರಳ: 265 ರೂ
  • ಅಹ್ಮದಾಬಾದ್: 260 ರೂ
  • ಜೈಪುರ: 260 ರೂ
  • ಲಕ್ನೋ: 260 ರೂ
  • ಭುವನೇಶ್ವರ್: 265 ರೂ
  • ಪುಣೆ: 260

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *