Headlines

Gold Rate Today Bangalore: ಚಿನ್ನ, ಬೆಳ್ಳಿ ಬೆಲೆಗಳೆರಡೂ ಏರಿಕೆ; ಇಲ್ಲಿದೆ ದರಪಟ್ಟಿ

Gold Rate Today Bangalore: ಚಿನ್ನ, ಬೆಳ್ಳಿ ಬೆಲೆಗಳೆರಡೂ ಏರಿಕೆ; ಇಲ್ಲಿದೆ ದರಪಟ್ಟಿ


ಬೆಂಗಳೂರು, ಡಿಸೆಂಬರ್ 12: ಅಮೆರಿಕದ ಬಾಟಲ್ ರಿಸರ್ವ್ ಬಡ್ಡಿದರ (ಫೆಡ್ ದರಗಳು) ಕಡಿತಗೊಳಿಸಿದ ಬೆನ್ನಲ್ಲೇ ನಿರೀಕ್ಷೆಯಂತೆ ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆಯಿದೆ. ಈ ಎರಡೂ ಲೋಹಗಳ ಬೆಲೆ ಗಣನೀಯವಾಗಿ ಹೆಚ್ಚಿದೆ. ಚಿನ್ನದ ಬೆಲೆ ಗ್ರಾಮಕ್ಕೆ 225-250 ರೂ ಏರಿಕೆ ಕಂಡಿದೆ. ಬೆಳ್ಳಿ ಬೆಲೆ 4 ರೂನಿಂದ 6 ರೂವರೆಗೂ ಏರಿದೆ. ಬೆಳ್ಳಿ ಬೆಲೆ ಮತ್ತೆ ಹೊಸ ದಾಖಲೆ ಬರೆದಿದೆ. ಪ್ರಧಾನ ಮಾರುಕಟ್ಟೆಗಳಲ್ಲಿ ಮೊದಲ ಬಾರಿಗೆ ಅದರ ಬೆಲೆ 204 ರೂ ಮುಟ್ಟಿದೆ. ಬೆಲೆಯಂತಹ ನಗರಗಳಲ್ಲಿ 215 ರೂಗೆ ಏರಿದೆ. ಚಿನ್ನದ ಬೆಲೆ ಇಂದು ಶುಕ್ರವಾರ ಏರಿಕೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,21,600 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,32,660 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 20,400 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,21,600 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 20,400 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 21,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 12ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,266 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,160 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,949 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 204 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,266 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,160 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 204 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 12,160 ರೂ
  • ಬೆಲೆ: 12,250 ರೂ
  • ಮುಂಬೈ: 12,160 ರೂ
  • ದೆಹಲಿ: 12,175 ರೂ
  • ಕೋಲ್ಕತಾ: 12,160 ರೂ
  • ಕೇರಳ: 12,160 ರೂ
  • ಅಹ್ಮದಾಬಾದ್: 12,165 ರೂ
  • ಜೈಪುರ: 12,175 ರೂ
  • ಲಕ್ನೋ: 12,175 ರೂ
  • ಭುವನೇಶ್ವರ್: 12,160 ರೂ

ಇದನ್ನೂ ಓದಿ: ಅಮೆರಿಕದ ಬಡ್ಡಿದರ ಇಳಿಕೆ; ಚಿನ್ನ, ಬೆಳ್ಳಿ ಬೆಲೆಗಳು ಮೇಲೇರುತ್ವಾ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 542 ರಿಂಗಿಟ್ (11,958 ರೂಪಾಯಿ)
  • ದುಬೈ: 477.50 ಡಿರಾಮ್ (11,761 ರೂಪಾಯಿ)
  • ಅಮೆರಿಕ: 132.50 ಡಾಲರ್ (11,989 ರೂಪಾಯಿ)
  • ಸಿಂಗಾಪುರ: 170.50 ಸಿಂಗಾಪುರ ಡಾಲರ್ (11,942 ರೂಪಾಯಿ)
  • ಕತಾರ್: 471 ಕತಾರಿ ರಿಯಾಲ್ (11,704 ರೂ)
  • ಸೌದಿ ಅರೇಬಿಯಾ: 483 ಸೌದಿ ರಿಯಾಲ್ (11,646 ರುಪಾಯಿ)
  • ಓಮನ್: 49.95 ಒಮಾನಿ ರಿಯಾಲ್ (11,740 ರೂಪಾಯಿ)
  • ಕುವೇತ್: 38.97 ಕುವೇತಿ ದಿನಾರ್ (11,495 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 204 ರೂ
  • ಬೆಲೆ: 215 ರೂ
  • ಮುಂಬೈ: 204 ರೂ
  • ದೆಹಲಿ: 204 ರೂ
  • ಕೋಲ್ಕತಾ: 204 ರೂ
  • ಕೇರಳ: 215 ರೂ
  • ಅಹ್ಮದಾಬಾದ್: 204 ರೂ
  • ಜೈಪುರ: 204 ರೂ
  • ಲಕ್ನೋ: 204 ರೂ
  • ಭುವನೇಶ್ವರ್: 215 ರೂ
  • ಪುಣೆ: 204

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *