ಬೆಂಗಳೂರು, ಫೆಬ್ರುವರಿ 15: ಈ ವಾರ ಸಾಕಷ್ಟು ಏರಿಳಿತಗಳನ್ನು ಕಂಡಿರುವ ಚಿನ್ನದ ಬೆಲೆ (ಚಿನ್ನದ ದರಗಳು) ವಾರಾಂತ್ಯದಲ್ಲಿ ತುಸು ಏರಿಕೆ ಆಗಿದೆ. ಚಿನ್ನದ ಬೆಲೆ ಗ್ರಾಮಕ್ಕೆ 180 ರೂನಿಂದ 200 ರೂವರೆಗೂ ಏರಿದೆ. ವಿದೇಶಗಳಲ್ಲಿ ಇದರ ಬೆಲೆಯಲ್ಲಿ ಏರಿಳಿತ. ಕೆಲವೆಡೆ ಬೆಲೆ ಏರಿಕೆಯಾದರೆ, ಇನ್ನೂ ಕೆಲವೆಡೆ ಇಳಿಕೆ ಕಂಡು ಬಂದಿದೆ. ಅತ್ತ, ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಭಾರತದ ಕೆಲವೆಡೆ ಗ್ರಾಮಕ್ಕೆ 5 ರೂ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,44,600 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,57,750 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 27,500 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,44,600 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 27,500 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 15ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,775 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,460 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,831 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,775 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,460 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಬೆಂಗಳೂರು: 14,460 ರೂ
- ಬೆಲೆ: 14,560 ರೂ
- ಮುಂಬೈ: 14,460 ರೂ
- ದೆಹಲಿ: 14,475 ರೂ
- ಕೋಲ್ಕತಾ: 14,460 ರೂ
- ಕೇರಳ: 14,460 ರೂ
- ಅಹ್ಮದಾಬಾದ್: 14,465 ರೂ
- ಜೈಪುರ: 14,475 ರೂ
- ಲಕ್ನೋ: 14,475 ರೂ
- ಭುವನೇಶ್ವರ್: 14,460 ರೂ
ಇದನ್ನೂ ಓದಿ: ಎಐ ಕಲಿಯಿರಿ, ಇಲ್ಲವಾ ಕೆಲಸ ಬಿಟ್ಟುಹೋಗಿ; ಉದ್ಯೋಗಿಗಳಿಗೆ ಗೂಗಲ್‌ನಿಂದ ವಾಲಂಟರಿ ಎಕ್ಸಿಟ್ ಪ್ಯಾಕೇಜ್‌ಗಳ ಆಫರ್
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಮಲೇಷ್ಯಾ: 595 ರಿಂಗಿಟ್ (13,856 ರೂಪಾಯಿ)
- ದುಬೈ: 560 ಡಿರಾಮ್ (13,806 ರೂಪಾಯಿ)
- ಅಮೆರಿಕ: 155.50 ಡಾಲರ್ (14,081 ರೂಪಾಯಿ)
- ಸಿಂಗಾಪುರ: 195.90 ಸಿಂಗಾಪುರ ಡಾಲರ್ (14,054 ರೂಪಾಯಿ)
- ಕತಾರ್: 553.50 ಕತಾರಿ ರಿಯಾಲ್ (13,752 ರೂ)
- ಸೌದಿ ಅರೇಬಿಯಾ: 568 ಸೌದಿ ರಿಯಾಲ್ (13,715 ರೂಪಾಯಿ)
- ಓಮನ್: 59.20 ಒಮಾನಿ ರಿಯಾಲ್ (13,925 ರೂಪಾಯಿ)
- ಕುವೇತ್: 45.85 ಕುವೇತಿ ದಿನಾರ್ (13,606 ರೂಪಾಯಿ)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)
- ಬೆಂಗಳೂರು: 275 ರೂ
- ಬೆಲೆ: 280 ರೂ
- ಮುಂಬೈ: 275 ರೂ
- ದೆಹಲಿ: 275 ರೂ
- ಕೋಲ್ಕತಾ: 275 ರೂ
- ಕೇರಳ: 280 ರೂ
- ಅಹ್ಮದಾಬಾದ್: 275 ರೂ
- ಜೈಪುರ: 275 ರೂ
- ಲಕ್ನೋ: 275 ರೂ
- ಭುವನೇಶ್ವರ್: 280 ರೂ
- ಪುಣೆ: 275
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ