Gold Rate Today Bangalore: ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ

Gold Rate Today Bangalore: ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ


ಬೆಂಗಳೂರು, ಜನವರಿ 22: ನಿನ್ನೆ ಭರ್ಜರಿ ಕಂಡಿದ್ದ ಚಿನ್ನದ ಬೆಲೆ ಇವತ್ತು ಸ್ವಲ್ಪ ಇಳಿದಿದೆ. ಗ್ರಾಮಕ್ಕೆ 45 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆಯೂ ಐದು ರೂ ಕಡಿಮೆ ಆಗಿದೆ. ಭಾರತದಲ್ಲಿ ಚಿನ್ನದ ಬೆಲೆ (ಚಿನ್ನದ ದರಗಳು) ತಗ್ಗಿರುವ ಹೊತ್ತಲ್ಲೇ ವಿದೇಶಗಳಲ್ಲಿ ಹೆಚ್ಚಿನ ಕಡೆ ಅದರ ಬೆಲೆಯಲ್ಲಿ ಏರಿಕೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,41,450 ರೂಪಾಯಿ ಇದೆ. 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 1,54,310 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 32,500 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,41,450 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 32,500 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 34,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 22ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,431 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,145 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,573 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 325 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,431 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,145 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 325 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 14,145 ರೂ
  • ಬೆಲೆ: 14,200 ರೂ
  • ಮುಂಬೈ: 14,145 ರೂ
  • ದೆಹಲಿ: 14,160 ರೂ
  • ಕೋಲ್ಕತಾ: 14,145 ರೂ
  • ಕೇರಳ: 14,145 ರೂ
  • ಅಹ್ಮದಾಬಾದ್: 14,150 ರೂ
  • ಜೈಪುರ: 14,160 ರೂ
  • ಲಕ್ನೋ: 14,160 ರೂ
  • ಭುವನೇಶ್ವರ್: 14,145 ರೂ

ಇದನ್ನೂ ಓದಿ: ಗ್ರಾಚ್ಯುಟಿ ಎಂದರೇನು? ಕೆಲಸ ಬಿಟ್ಟರೆ ಎಷ್ಟು ಹಣ ಸಿಗಬಹುದು? ಇಲ್ಲಿದೆ ಲೆಕ್ಕಾಚಾರ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 600 ರಿಂಗಿಟ್ (13,576 ರೂಪಾಯಿ)
  • ದುಬೈ: 537.50 ಡಿರಾಮ್ (13,397 ರೂಪಾಯಿ)
  • ಅಮೆರಿಕ: 151 ಡಾಲರ್ (13,826 ರೂಪಾಯಿ)
  • ಸಿಂಗಾಪುರ: 191.50 ಸಿಂಗಾಪುರ ಡಾಲರ್ (13,655 ರೂಪಾಯಿ)
  • ಕತಾರ್: 538 ಕತಾರಿ ರಿಯಾಲ್ (13,513 ರೂ)
  • ಸೌದಿ ಅರೇಬಿಯಾ: 550 ಸೌದಿ ರಿಯಾಲ್ (13,427 ರೂಪಾಯಿ)
  • ಓಮನ್: 57.55 ಒಮಾನಿ ರಿಯಾಲ್ (13,684 ರೂಪಾಯಿ)
  • ಕುವೇತ್: 43.88 ಕುವೇತಿ ದಿನಾರ್ (13,147 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 325 ರೂ
  • ಬೆಲೆ: 340 ರೂ
  • ಮುಂಬೈ: 325 ರೂ
  • ದೆಹಲಿ: 325 ರೂ
  • ಕೋಲ್ಕತಾ: 325 ರೂ
  • ಕೇರಳ: 340 ರೂ
  • ಅಹ್ಮದಾಬಾದ್: 325 ರೂ
  • ಜೈಪುರ: 325 ರೂ
  • ಲಕ್ನೋ: 325 ರೂ
  • ಭುವನೇಶ್ವರ್: 340 ರೂ
  • ಪುಣೆ: 325

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *