ಬೆಂಗಳೂರು, ಜನವರಿ 23: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಿಕ್ಕಾಪಟ್ಟೆ ಏರಿವೆ. 10 ಗ್ರಾಂ ಚಿನ್ನದ ಬೆಲೆ 4,950 ರೂನಿಂದ 5,400 ರೂ ಏರಿಕೆಯಾಗಿದೆ. ಅಪರಂಜಿ ಚಿನ್ನದ ಬೆಲೆ (ಚಿನ್ನದ ದರ) ಗ್ರಾಮಕ್ಕೆ 16,000 ರೂ ಗಡಿ ಸಮೀಪ ಹೋಗಿದೆ. 18 ಕ್ಯಾರಟ್ ಚಿನ್ನದ ಬೆಲೆ 12,000 ರೂ ಸಮೀಪದಲ್ಲಿದೆ. ತಿಂಗಳ ಹಿಂದೆ 22 ಕ್ಯಾರಟ್ ಚಿನ್ನಕ್ಕೆ ಇದ್ದ ಬೆಲೆ ಈಗ 18 ಕ್ಯಾರಟ್ ಚಿನ್ನಕ್ಕೆ ಬಂದಿದೆ. ಬೆಳ್ಳಿ ಬೆಲೆಯಂತೂ ಇನ್ನೂ ಭರ್ಜರಿಯಾಗಿ ಏರಿದೆ. ಒಂದು ಕಿಲೋ ಬೆಳ್ಳಿಗೆ 3,40,000 ರೂ ಬೆಲೆಯಾಗಿದೆ. ಬೆಲೆಯಲ್ಲಂತೂ ಇದರ ಬೆಲೆ 3.6 ಲಕ್ಷ ರೂ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,46,400 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,59,710 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 34,000 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,46,400 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 34,000 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 36,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 23ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,971 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,640 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,978 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 340 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,971 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,640 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 340 ರೂ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಬೆಂಗಳೂರು: 14,640 ರೂ
- ಬೆಲೆ: 14,650 ರೂ
- ಮುಂಬೈ: 14,640 ರೂ
- ದೆಹಲಿ: 14,655 ರೂ
- ಕೋಲ್ಕತಾ: 14,640 ರೂ
- ಕೇರಳ: 14,640 ರೂ
- ಅಹ್ಮದಾಬಾದ್: 14,645 ರೂ
- ಜೈಪುರ: 14,655 ರೂ
- ಲಕ್ನೋ: 14,655 ರೂ
- ಭುವನೇಶ್ವರ್: 14,640 ರೂ
ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆಗೆ 11 ವರ್ಷ; ಈವರೆಗೆ ಶುರುವಾಗಿದ್ದು ನಾಲ್ಕೂವರೆ ಕೋಟಿ ಅಕೌಂಟ್; ಸ್ಕೀಮ್ ಲಾಭಗಳೇನು?
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಮಲೇಷ್ಯಾ: 600 ರಿಂಗಿಟ್ (13,732 ರೂಪಾಯಿ)
- ದುಬೈ: 544.75 ಡಿರಾಮ್ (13,590 ರೂಪಾಯಿ)
- ಅಮೆರಿಕ: 151.50 ಡಾಲರ್ (13,881 ರೂಪಾಯಿ)
- ಸಿಂಗಾಪುರ: 197.20 ಸಿಂಗಾಪುರ ಡಾಲರ್ (14,122 ರೂಪಾಯಿ)
- ಕತಾರ್: 539 ಕತಾರಿ ರಿಯಾಲ್ (13,550 ರೂ)
- ಸೌದಿ ಅರೇಬಿಯಾ: 551 ಸೌದಿ ರಿಯಾಲ್ (13,493 ರುಪಾಯಿ)
- ಓಮನ್: 58.05 ಒಮಾನಿ ರಿಯಾಲ್ (13,815 ರೂಪಾಯಿ)
- ಕುವೇತ್: 44.65 ಕುವೇತಿ ದಿನಾರ್ (13,385 ರೂಪಾಯಿ)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)
- ಬೆಂಗಳೂರು: 340 ರೂ
- ಬೆಲೆ: 360 ರೂ
- ಮುಂಬೈ: 340 ರೂ
- ದೆಹಲಿ: 340 ರೂ
- ಕೋಲ್ಕತಾ: 340 ರೂ
- ಕೇರಳ: 360 ರೂ
- ಅಹ್ಮದಾಬಾದ್: 340 ರೂ
- ಜೈಪುರ: 340 ರೂ
- ಲಕ್ನೋ: 340 ರೂ
- ಭುವನೇಶ್ವರ್: 360 ರೂ
- ಪುಣೆ: 340
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ