Headlines

Gold Rate Today Bangalore: ಗುರುವಾರವೂ ಹೆಚ್ಚಿದ ಚಿನ್ನ, ಬೆಳ್ಳಿ ಬೆಲೆ

Gold Rate Today Bangalore: ಗುರುವಾರವೂ ಹೆಚ್ಚಿದ ಚಿನ್ನ, ಬೆಳ್ಳಿ ಬೆಲೆ


ಬೆಂಗಳೂರು, ಡಿಸೆಂಬರ್ 25: ಅಮೂಲ್ಯ ಲೋಹಗಳಿಗೆ ಬೇಡಿಕೆ ಏರುವುದು ನಿಂತಿಲ್ಲ. ಚಿನ್ನ, ಬೆಳ್ಳಿ ಬೆಲೆಗಳ ಏರಿಕೆಗೆ ವಿಶ್ರಾಂತಿ ಸಿಕ್ಕಂತಿಲ್ಲ. ಇಂದು ಗುರುವಾರ ಇವೆರಡೂ ಬೆಲೆಗಳು ಅಲ್ಪ ಪ್ರಮಾಣದಲ್ಲಿ ಏರಿವೆ. ನಿನ್ನೆ ಗ್ರಾಮಕ್ಕೆ 30 ರೂ ಏರಿದ್ದ ಚಿನ್ನದ ಬೆಲೆ (ಚಿನ್ನದ ದರ) ಇವತ್ತೂ ಕೂಡ ಅಷ್ಟೇ ಪ್ರಮಾಣದಲ್ಲಿ ಆಗಿದೆ. ಬೆಳ್ಳಿ ಬೆಲೆ ನಿನ್ನೆ 10 ರೂ ಜಿಗಿತ್ತು. ಇವತ್ತು ಒಂದು ರೂ ಹೆಚ್ಚಿದೆ. ವಿದೇಶದಲ್ಲಿ ಹೆಚ್ಚಿನ ಚಿನ್ನದ ಬೆಲೆ ಸ್ವಲ್ಪ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,27,650 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,39,250 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 23,400 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,27,650 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 23,400 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 25ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,925 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,765 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,444 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 234 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,925 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,765 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 234 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 12,765 ರೂ
  • ಬೆಲೆ: 12,820 ರೂ
  • ಮುಂಬೈ: 12,765 ರೂ
  • ದೆಹಲಿ: 12,780 ರೂ
  • ಕೋಲ್ಕತಾ: 12,765 ರೂ
  • ಕೇರಳ: 12,765 ರೂ
  • ಅಹ್ಮದಾಬಾದ್: 12,770 ರೂ
  • ಜೈಪುರ: 12,780 ರೂ
  • ಲಕ್ನೋ: 12,780 ರೂ
  • ಭುವನೇಶ್ವರ್: 12,765 ರೂ

ಇದನ್ನೂ ಓದಿ: ಅಂತಿಮ ಡೆಡ್ಲೈನ್; ಆಧಾರ್‌ಗೆ ಲಿಂಕ್ ಆಗದ ಪ್ಯಾನ್ ಜನವರಿ 1 ರಿಂದ ಡೆಡ್; ಹಣಕಾಸು ತೊಂದರೆಯಾಗಬಹುದೇ?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 573 ರಿಂಗಿಟ್ (12,723 ರೂಪಾಯಿ)
  • ದುಬೈ: 497.50 ಡಿರಾಮ್ (12,166 ರೂಪಾಯಿ)
  • ಅಮೆರಿಕ: 139 ಡಾಲರ್ (12,484 ರೂಪಾಯಿ)
  • ಸಿಂಗಾಪುರ: 179.90 ಸಿಂಗಾಪುರ ಡಾಲರ್ (12,584 ರೂಪಾಯಿ)
  • ಕತಾರ್: 496 ಕತಾರಿ ರಿಯಾಲ್ (12,221 ರೂ)
  • ಸೌದಿ ಅರೇಬಿಯಾ: 506 ಸೌದಿ ರಿಯಾಲ್ (12,117 ರುಪಾಯಿ)
  • ಓಮನ್: 53.20 ಒಮಾನಿ ರಿಯಾಲ್ (12,411 ರೂಪಾಯಿ)
  • ಕುವೇತ್: 40.69 ಕುವೇತಿ ದಿನಾರ್ (11,896 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 234 ರೂ
  • ಬೆಲೆ: 245 ರೂ
  • ಮುಂಬೈ: 234 ರೂ
  • ದೆಹಲಿ: 234 ರೂ
  • ಕೋಲ್ಕತಾ: 234 ರೂ
  • ಕೇರಳ: 245 ರೂ
  • ಅಹ್ಮದಾಬಾದ್: 234 ರೂ
  • ಜೈಪುರ: 234 ರೂ
  • ಲಕ್ನೋ: 234 ರೂ
  • ಭುವನೇಶ್ವರ್: 245 ರೂ
  • ಪುಣೆ: 234

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *