Headlines

Gold Rate Today Bangalore: ಮೈಝುಮ್ಮೆನಿಸುವಷ್ಟು ಜಿಗಿದ ಚಿನ್ನ, ಬೆಳ್ಳಿ ಬೆಲೆ

Gold Rate Today Bangalore: ಮೈಝುಮ್ಮೆನಿಸುವಷ್ಟು ಜಿಗಿದ ಚಿನ್ನ, ಬೆಳ್ಳಿ ಬೆಲೆ


ಬೆಂಗಳೂರು, ಡಿಸೆಂಬರ್ 27: ಚಿನ್ನ, ಬೆಳ್ಳಿ ಬೆಲೆಗಳು ಸತತವಾಗಿ ಮುಂದುವರಿಯುತ್ತಲೇ ಇದೆ. ಶನಿವಾರ ಚಿನ್ನದ ಬೆಲೆ (ಚಿನ್ನದ ದರ) 110 ರೂ ಹೆಚ್ಚಿದೆ. ಆಭರಣ ಚಿನ್ನದ ಬೆಲೆಯಲ್ಲಿ 13,000 ರೂ ಗಡಿ ಮುಟ್ಟಿದೆ. ವಿದೇಶದಲ್ಲಿ ಚಿನ್ನದ ಬೆಲೆ ಇಂದು ಏರಿದೆ. ಬೆಳ್ಳಿ ಬೆಲೆಯಂತೂ ಜಿಗಿಜಿಗಿದು ಓಡುವುದು ಮುಂದುವರಿದಿದೆ. ಶನಿವಾರ ಒಂದು ಗ್ರಾಮ್ ಬೆಳ್ಳಿ ಬೆಲೆ 11 ರೂ ಹೆಚ್ಚಳಗೊಂಡು 251 ರೂ ಮುಟ್ಟಿದೆ. ಬೆಲೆಯಲ್ಲಂತೂ ಇದರ ಬೆಲೆ 274 ರೂಗೆ ಏರಿದೆ. ವರ್ಷದ ಹಿಂದೆ ನೂರು ರೂ ಒಳಗಿದ್ದ ಇದರ ಬೆಲೆ ಈಗ ಮೈಝುಮ್ಮೆನಿಸುವಷ್ಟು ಏರಿರುವುದು ಕುತೂಹಲ ಮೂಡಿಸಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,29,450 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,41,220 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 25,100 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,29,450 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 25,100 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 27,400 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 27ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,122 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,945 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,592 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 251 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,122 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,945 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 251 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 12,945 ರೂ
  • ಬೆಲೆ: 13,000 ರೂ
  • ಮುಂಬೈ: 12,945 ರೂ
  • ದೆಹಲಿ: 12,960 ರೂ
  • ಕೋಲ್ಕತಾ: 12,945 ರೂ
  • ಕೇರಳ: 12,945 ರೂ
  • ಅಹ್ಮದಾಬಾದ್: 12,950 ರೂ
  • ಜೈಪುರ: 12,960 ರೂ
  • ಲಕ್ನೋ: 12,960 ರೂ
  • ಭುವನೇಶ್ವರ್: 12,945 ರೂ

ಇದನ್ನೂ ಓದಿ: 2025ರಲ್ಲಿ ಭಾರತದ ಬಿಲಿಯನೇರ್ಗಳ ಪಟ್ಟಿ; ಯಾರು ಅತಿ ಶ್ರೀಮಂತರು, ಯಾರ ಶ್ರೀಮಂತಿಕೆ ಹೆಚ್ಚು ಏರಿದ್ದು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 575 ರಿಂಗಿಟ್ (12,754 ರೂಪಾಯಿ)
  • ದುಬೈ: 505 ಡಿರಾಮ್ (12,223 ರೂಪಾಯಿ)
  • ಅಮೆರಿಕ: 141.50 ಡಾಲರ್ (12,706 ರೂಪಾಯಿ)
  • ಸಿಂಗಾಪುರ: 180.30 ಸಿಂಗಾಪುರ ಡಾಲರ್ (12,604 ರೂಪಾಯಿ)
  • ಕತಾರ್: 504 ಕತಾರಿ ರಿಯಾಲ್ (12,418 ರೂ)
  • ಸೌದಿ ಅರೇಬಿಯಾ: 515 ಸೌದಿ ರಿಯಾಲ್ (12,330 ರೂಪಾಯಿ)
  • ಓಮನ್: 53.65 ಒಮಾನಿ ರಿಯಾಲ್ (12,514 ರೂಪಾಯಿ)
  • ಕುವೇತ್: 41.04 ಕುವೇತಿ ದಿನಾರ್ (11,993 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 251 ರೂ
  • ಬೆಲೆ: 274 ರೂ
  • ಮುಂಬೈ: 251 ರೂ
  • ದೆಹಲಿ: 251 ರೂ
  • ಕೋಲ್ಕತಾ: 251 ರೂ
  • ಕೇರಳ: 274 ರೂ
  • ಅಹ್ಮದಾಬಾದ್: 251 ರೂ
  • ಜೈಪುರ: 251 ರೂ
  • ಲಕ್ನೋ: 251 ರೂ
  • ಭುವನೇಶ್ವರ್: 274 ರೂ
  • ಪುಣೆ: 251

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *