Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಮತ್ತೆ ಕುಸಿತ; 10 ದಿನಗಳಿಂದ ನಿರಂತರ ಇಳಿಕೆ

Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಮತ್ತೆ ಕುಸಿತ; 10 ದಿನಗಳಿಂದ ನಿರಂತರ ಇಳಿಕೆ


ಬೆಂಗಳೂರು, ಅಕ್ಟೋಬರ್ 28: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಕುಸಿತ ಮುಂದುವರಿದಿದೆ. ಕಳೆದ ಹತ್ತು ದಿನದಲ್ಲಿ ಈ ಎರಡೂ ಬೆಲೆಗಳು ಸಿಕ್ಕಾಪಟ್ಟೆ ಕುಸಿದಿವೆ. ಆಭರಣ ಚಿನ್ನದ ಬೆಲೆ (ಚಿನ್ನದ ದರ12,170 ರೂ ಇದ್ದದ್ದು 11,225 ರೂಗೆ ಇಳಿದಿದೆ. ಹತ್ತು ದಿನದಲ್ಲಿ ಶೇ. 7-8ರಷ್ಟು ಬೆಲೆ ಕುಸಿತವಾಗಿದೆ. ಬೆಳ್ಳಿ ಬೆಲೆಯಂತೂ ಇನ್ನೂ ಭಯಂಕರ ಕುಸಿತ ಕಂಡಿದೆ. ಅತಿರೇಕವಾಗಿ ಏರುತ್ತಿರುವ ಬೆಳ್ಳಿ ಬೆಲೆ ಅಷ್ಟೇ ಅತಿರೇಕವಾಗಿ ಕುಸಿಯುತ್ತಿದೆ. ಹತ್ತು ದಿನಗಳ ಹಿಂದೆ 190 ರೂಗಳ ಗರಿಷ್ಠ ಮಟ್ಟಕ್ಕೆ ಹೋಗಿದೆ ಅದರ ಬೆಲೆ ಶೇ. 20ರಷ್ಟು ಕುಸಿದು 151 ರೂ ಮುಟ್ಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,12,250 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,22,460 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 15,100 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,12,250 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 15,200 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 16,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 28ಕ್ಕೆ)

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,246 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,225 ರೂ
  • 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,184 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 151 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,246 ರೂ
  • 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,225 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 152 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಬೆಂಗಳೂರು: 11,225 ರೂ
  • ಬೆಲೆ: 11,300 ರೂ
  • ಮುಂಬೈ: 11,225 ರೂ
  • ದೆಹಲಿ: 11,240 ರೂ
  • ಕೋಲ್ಕತಾ: 11,225 ರೂ
  • ಕೇರಳ: 11,225 ರೂ
  • ಅಹ್ಮದಾಬಾದ್: 11,230 ರೂ
  • ಜೈಪುರ: 11,240 ರೂ
  • ಲಕ್ನೋ: 11,240 ರೂ
  • ಭುವನೇಶ್ವರ್: 11,225 ರೂ

ಇದನ್ನೂ ಓದಿ: ದಾಖಲೆ ಇಲ್ಲದೆ ಒಬ್ಬ ವ್ಯಕ್ತಿ ಎಷ್ಟು ಚಿನ್ನ ಹೊಂದಿರಲು ಅವಕಾಶ? ಆಭರಣ ಖರೀದಿಸುವ ಮುನ್ನ ಇದು ತಿಳಿದಿರುತ್ತದೆ…

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)

  • ಮಲೇಷ್ಯಾ: 527 ರಿಂಗಿಟ್ (11,083 ರೂಪಾಯಿ)
  • ದುಬೈ: 445.50 ಡಿರಾಮ್ (10,707 ರೂಪಾಯಿ)
  • ಅಮೆರಿಕ: 124 ಡಾಲರ್ (10,956 ರೂಪಾಯಿ)
  • ಸಿಂಗಾಪುರ: 161.30 ಸಿಂಗಾಪುರ ಡಾಲರ್ (11,006 ರೂಪಾಯಿ)
  • ಕತಾರ್: 445.50 ಕತಾರಿ ರಿಯಾಲ್ (10,799 ರೂ)
  • ಸೌದಿ ಅರೇಬಿಯಾ: 453 ಸೌದಿ ರಿಯಾಲ್ (10,673 ರುಪಾಯಿ)
  • ಓಮನ್: 47 ಒಮಾನಿ ರಿಯಾಲ್ (10,787 ರೂಪಾಯಿ)
  • ಕುವೇತ್: 36.66 ಕುವೇತಿ ದಿನಾರ್ (10,569 ರೂಪಾಯಿ)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)

  • ಬೆಂಗಳೂರು: 152 ರೂ
  • ಬೆಲೆ: 165 ರೂ
  • ಮುಂಬೈ: 151 ರೂ
  • ದೆಹಲಿ: 151 ರೂ
  • ಕೋಲ್ಕತಾ: 151 ರೂ
  • ಕೇರಳ: 165 ರೂ
  • ಅಹ್ಮದಾಬಾದ್: 151 ರೂ
  • ಜೈಪುರ: 151 ರೂ
  • ಲಕ್ನೋ: 151 ರೂ
  • ಭುವನೇಶ್ವರ್: 165 ರೂ
  • ಪುಣೆ: 151

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *