
ಬೆಂಗಳೂರು, ಏಪ್ರಿಲ್ 7: ಚಿನ್ನದ ಬೆಲೆ ಅಕ್ಷರಶಃ ಪ್ರಕ್ಷುಬ್ದತೆಯ ಸ್ವಭಾವ ಪಡೆದಿದೆ. ದಿನವೂ ಏರಿಳಿತಗಳನ್ನು ಕಾಣುತ್ತಿದೆ. ಒಂದೇ ದಿನದಲ್ಲಿ ಬೆಲೆಯಲ್ಲಿ (ಚಿನ್ನದ ದರಗಳು) ಬದಲಾವಣೆ ಆಗುತ್ತಿದೆ. ನಿನ್ನೆ ಬೆಳಗ್ಗೆ 165 ರೂ ಇಳಿದಿದ್ದ ಚಿನ್ನದ ಬೆಲೆ ಸಂಜೆ ಸುಮಾರು 150 ರೂಗಳಷ್ಟು ಏರಿತ್ತು. ಇವತ್ತು ಮಂಗಳವಾರ ಬೆಳಗ್ಗೆ ಬೆಲೆ 75 ರೂನಷ್ಟು ಕಡಿಮೆಯಾಗಿದೆ. ವಿದೇಶದಲ್ಲಿ ಇದೆ ರೀತಿ ಏರಿಳಿತದ ಆಟ ನಡೆದಿದೆ. ಈ ಮಧ್ಯೆ ಬೆಳ್ಳಿ ಬೆಲೆಯ ಸ್ಥಿರತೆ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,37,350 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,49,840 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 25,000 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,37,350 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 25,000 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 7ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,984 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,735 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,238 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,984 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,735 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಬೆಂಗಳೂರು: 13,735 ರೂ
- ಬೆಲೆ: 13,860 ರೂ
- ಮುಂಬೈ: 13,735 ರೂ
- ದೆಹಲಿ: 13,750 ರೂ
- ಕೋಲ್ಕತಾ: 13,735 ರೂ
- ಕೇರಳ: 13,735 ರೂ
- ಅಹ್ಮದಾಬಾದ್: 13,740 ರೂ
- ಜೈಪುರ: 13,750 ರೂ
- ಲಕ್ನೋ: 13,750 ರೂ
- ಭುವನೇಶ್ವರ್: 13,735 ರೂ
ಇದನ್ನೂ ಓದಿ: ಗೋಲ್ಡ್ ಓಡಿ, ಇದು ಒಡವೆ ಸಾಲಕ್ಕಿಂತ ಎಷ್ಟು ಭಿನ್ನ, ಎಷ್ಟು ಉಪಯುಕ್ತ? ಇಲ್ಲಿದೆ ಮಾಹಿತಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಮಲೇಷ್ಯಾ: 579 ರಿಂಗಿಟ್ (13,335 ರೂಪಾಯಿ)
- ದುಬೈ: 519.50 ಡಿರಾಮ್ (13,149 ರೂಪಾಯಿ)
- ಅಮೆರಿಕ: 146 ಡಾಲರ್ (13,573 ರೂಪಾಯಿ)
- ಸಿಂಗಾಪುರ: 185.50 ಸಿಂಗಾಪುರ ಡಾಲರ್ (13,414 ರೂಪಾಯಿ)
- ಕತಾರ್: 518.50 ಕತಾರಿ ರಿಯಾಲ್ (13,225 ರೂ)
- ಸೌದಿ ಅರೇಬಿಯಾ: 530 ಸೌದಿ ರಿಯಾಲ್ (13,123 ರೂಪಾಯಿ)
- ಓಮನ್: 55.25 ಒಮಾನಿ ರಿಯಾಲ್ (13,342 ರೂಪಾಯಿ)
- ಕುವೇತ್: 42.77 ಕುವೇತಿ ದಿನಾರ್ (12,955 ರೂಪಾಯಿ)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)
- ಬೆಂಗಳೂರು: 250 ರೂ
- ಬೆಲೆ: 255 ರೂ
- ಮುಂಬೈ: 250 ರೂ
- ದೆಹಲಿ: 250 ರೂ
- ಕೋಲ್ಕತಾ: 250 ರೂ
- ಕೇರಳ: 255 ರೂ
- ಅಹ್ಮದಾಬಾದ್: 250 ರೂ
- ಜೈಪುರ: 250 ರೂ
- ಲಕ್ನೋ: 250 ರೂ
- ಭುವನೇಶ್ವರ್: 255 ರೂ
- ಪುಣೆ: 250
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ