Headlines

ಒಂದೇ ದಿನ 2,340 ರುಪಾಯಿ ಕುಸಿದ ಚಿನ್ನದ ಬೆಲೆ! ಕರ್ನಾಟಕದಲ್ಲಿಂದು ಗೋಲ್ಡ್ ರೇಟ್ ಎಷ್ಟು?

ಒಂದೇ ದಿನ 2,340 ರುಪಾಯಿ ಕುಸಿದ ಚಿನ್ನದ ಬೆಲೆ! ಕರ್ನಾಟಕದಲ್ಲಿಂದು ಗೋಲ್ಡ್ ರೇಟ್ ಎಷ್ಟು?

ಒಂದೇ ದಿನ 2,340 ರುಪಾಯಿ ಕುಸಿದ ಚಿನ್ನದ ಬೆಲೆ! ಕರ್ನಾಟಕದಲ್ಲಿಂದು ಗೋಲ್ಡ್ ರೇಟ್ ಎಷ್ಟು?

ಬೆಂಗಳೂರು: ಇಂದು ಅಸ್ಸಾಂ, ಪುದುಚೆರಿ ಹಾಗೂ ಕೇರಳದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ನಮ್ಮ ರಾಜ್ಯದ ಎರಡು ಕ್ಷೇತ್ರಗಳಲ್ಲೂ ಉಪ ಚುನಾವಣೆ ನಡೆಯುತ್ತಿದೆ. ಹೀಗಿರುವಾಗಲೇ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿ ಕಂಡಿದೆ. ಇಂದು ನಮ್ಮ ರಾಜ್ಯದಲ್ಲಿ ಚಿನ್ನದ ರೇಟ್ ಎಷ್ಟು ನೋಡೋಣ ಬನ್ನಿ.

ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಕೇರಳ, ಅಸ್ಸಾಂ ಹಾಗೂ ಪುದುಚೆರಿಯಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಇದಷ್ಟೇ ಅಲ್ಲದೇ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಇಂದು ಉಪಚುನಾವಣೆ ನಡೆಯುತ್ತಿದೆ. ಹೀಗಿರುವಾಗಲೇ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದೆ.

ಏಪ್ರಿಲ್ 08ರ ನಿನ್ನೆ ಒಂದೇ ದಿನ 24 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ ಬರೋಬ್ಬರಿ 398 ರುಪಾಯಿ ಏರಿಕೆ ಕಂಡಿತ್ತು. ಇರಾನ್-ಅಮೆರಿಕ ಕದನ ವಿರಾಮ ಘೋಷಣೆಯ ಬೆನ್ನಲ್ಲೇ ಚಿನ್ನದ ಬೆಲೆ ಏರಿಕೆ ಕಂಡಿತ್ತು. ಇಂದೂ ಕೂಡಾ ಚಿನ್ನದ ಬೆಲೆ ಏರಿಕೆಯಾಗುವ ಭೀತಿಯಲ್ಲಿದ್ದ ಆಭರಣ ಖರೀದಿಸುವ ಗ್ರಾಹಕರಿಗೆ ಇದೀಗ ಶುಭ ಸುದ್ದಿ ಸಿಕ್ಕಿದೆ.

ಹೌದು, ಏಪ್ರಿಲ್ 09ರ ಇಂದು ಪ್ರತಿ 10 ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2340 ರುಪಾಯಿ ಇಳಿಕೆ ಕಂಡಿದೆ. ಈ ಮೂಲಕ ಇಂದು ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 15,148 ರುಪಾಯಿಗಳಾಗಿವೆ.

ಇನ್ನೊಂದೆಡೆ ಆಭರಣ ಚಿನ್ನವಾಗಿರುವ 22 ಕ್ಯಾರಟ್ ಪ್ರತಿ ಗ್ರಾಮ್ ಚಿನ್ನದ ಬೆಲೆ ನಿನ್ನೆ 14,100 ರುಪಾಯಿಗಳಾಗಿತ್ತು. ಆದರೆ ಇದೀಗ ಇಂದು 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 2150 ರುಪಾಯಿ ಇಳಿಕೆ ಕಂಡಿದ್ದು, ಗ್ರಾಮ್‌ಗೆ 13,885 ರುಪಾಯಿಗಳಾಗಿವೆ.

ಒಟ್ಟಿನಲ್ಲಿ ಇಂದು ಒಂದೇ ದಿನ 10 ಗ್ರಾಮ್ ಚಿನ್ನದ ಮೇಲೆ ಸರಾಸರಿ 2000 ರುಪಾಯಿ ಇಳಿಕೆ ಕಂಡಿರುವುದು ಮದುವೆಗೆ, ಶುಭ ಸಮಾರಂಭಗಳಿಗೆ ಆಭರಣ ಖರೀದಿಸುವವ ಮುಖದಲ್ಲಿ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ.

ಇನ್ನೊಂದೆಡೆ ನಿನ್ನೆ ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಒಂದೇ ದಿನದಲ್ಲಿ 10 ಸಾವಿರ ರುಪಾಯಿ ಏರಿಕೆ ಕಂಡಿತ್ತು. ಆದರೆ ಇದೀಗ ಇಂದು ಬೆಳ್ಳಿ ಬೆಲೆಯಲ್ಲಿ ಒಂದು ಕೆಜಿ ಮೇಲೆ 5000 ರುಪಾಯಿ ಇಳಿಕೆಯಾಗಿದ್ದು, ಇಂದು ಒಂದು ಕೆಜಿ ಬೆಳ್ಳಿಯ ಬೆಲೆ 2,55,000 ರುಪಾಯಿಗಳಾಗಿದೆ.

Source link

Leave a Reply

Your email address will not be published. Required fields are marked *