Headlines

ಮುಂದಿನ ವರ್ಷ 5,000 ರೂ ಡಾಲರ್​ಗೆ ಏರಲಿದೆ ಚಿನ್ನದ ಬೆಲೆ; ಭಾರತದಲ್ಲಿ ಎಷ್ಟು ಹೆಚ್ಚಬಹುದು ಇದರ ಬೆಲೆ?

ಮುಂದಿನ ವರ್ಷ 5,000 ರೂ ಡಾಲರ್​ಗೆ ಏರಲಿದೆ ಚಿನ್ನದ ಬೆಲೆ; ಭಾರತದಲ್ಲಿ ಎಷ್ಟು ಹೆಚ್ಚಬಹುದು ಇದರ ಬೆಲೆ?


ಜನವರಿ, ನವೆಂಬರ್ 25: ಚಿನ್ನದ ಬೆಲೆ (ಚಿನ್ನದ ದರ) ಕಳೆದ ಒಂದು ಮತ್ತು ಎರಡು ವರ್ಷಗಳಿಂದ ಸಹಜಕ್ಕಿಂತ ಹೆಚ್ಚು ಏರಿದೆ. ಒಂದು ವರ್ಷದ ಅರ್ಧದಷ್ಟು ಬೆಲೆ ಆಗಿದೆ. ಕಳೆದ ಎರಡು ವಾರಗಳಿಂದ ಹೊಯ್ದಾಡುತ್ತಿದ್ದ ಸ್ವರ್ಣ ಬೆಲೆ ಮತ್ತೆ ಏರಿಕೆಯ ಹಾದಿಗೆ ಬಂದಂತಿದೆ. ಅಮೆರಿಕದ ಫೆಡರಲ್ ರಿಸರ್ವ್ ಈ ಬಾರಿಯ ಸಭೆಯಲ್ಲಿ ಬಡ್ಡಿದರ ಕಡಿತಗೊಳಿಸುವ ಸಾಧ್ಯತೆ ದಟ್ಟವಾಗಿರುವ ನಿಮ್ಮ ಹೂಡಿಕೆದಾರರು ಮತ್ತೊಮ್ಮೆ ಚಿನ್ನದ ಮೊರೆ ಹೋಗುತ್ತಿದ್ದಾರೆ. ಹಳದಿ ಲೋಹದ ಬೆಲೆ ಏರುವ ಸಾಧ್ಯತೆ ದಟ್ಟವಾಗಿದೆ.

ಅಂತಾರಾಷ್ಟ್ರೀಯ ಚಿನ್ನದ ಬೆಲೆ 4,175 ಡಾಲರ್ ಇದೆ. ಈ ವರ್ಷ ಸ್ವರ್ಣವು ಮೊತ್ತಮೊದಲ ಬಾರಿಗೆ 4,000 ಡಾಲರ್ ಗಡಿ ದಾಟಿತು. ಮುಂದಿನ ವರ್ಷ (2026) ಇದರ ಬೆಲೆ 5,000 ಡಾಲರ್ ಮೈಲಿಗಲ್ಲು ಮುಟ್ಟುವ ಸಾಧ್ಯತೆಯಿದೆ ಎಂದು ಪರಿಣಿತರು ಅಭಿಪ್ರಾಯಪಡುತ್ತಿದ್ದಾರೆ.

ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆ ಭರ್ಜರಿ; ಇಲ್ಲಿದೆ ಪಟ್ಟಿ

2025ರಲ್ಲಿ ಚಿನ್ನದ ಬೆಲೆ ಶೇ. 54ರಷ್ಟು ಹೆಚ್ಚಿದೆ. ಕಳೆದ ಹಲವು ವರ್ಷಗಳನ್ನು ಅವಲೋಕಿಸಿದರೆ, ಒಂದು ವರ್ಷದ ಚಿನ್ನದ ಬೆಲೆ ಕಂಡ ಗರಿಷ್ಠ ಇದು. ಬ್ಯಾಂಕ್ ಆಫ್ ಅಮೆರಿಕದ (ಬಿಒಎಫ್‌ಎ) ಪ್ರಕಾರ 2026ರಲ್ಲೂ ಚಿನ್ನದ ಬೆಲೆ ಈ ಏರಿಕೆ ಓಟ ಮುಂದುವರಿಯಬಹುದು. ಮುಂದಿನ ವರ್ಷದ ಚಿನ್ನದ ಸರಾಸರಿ ಬೆಲೆ 4,538 ಡಾಲರ್ ಆಗಬಹುದು.

ಅಮೆರಿಕ ಸಾಲ ಮತ್ತು ಹಣದುಬ್ಬರ ಹೆಚ್ಚಿನ ಮಟ್ಟದಲ್ಲಿ ಇರುವುದು, ಹಾಗೂ ಬಡ್ಡಿದರ ಕಡಿಮೆಯಾಗುವುದು ಇತ್ಯಾದಿ ಅಂಶಗಳು ಚಿನ್ನಕ್ಕೆ ಹೆಚ್ಚಿನ ಬೇಡಿಕೆಯನ್ನು ತಂದುಕೊಡಬಹುದು.

ಇದನ್ನೂ ಓದಿ: ವಿಶ್ವದ ಪ್ರಬಲ ಉದ್ಯಮಿ ಲಕ್ಷ್ಮಿ ಮಿಟ್ಟಲ್ ದೇಶ ಬಿಟ್ಟು ಹೋಗುವಂತೆ ಮಾಡಿದ ಬ್ರಿಟನ್ ಹೊಸ ಟ್ಯಾಕ್ಸ್ ನಿಯಮಗಳೇನು?

ಭಾರತದಲ್ಲಿ ಎಷ್ಟಾಗಬಹುದು ಚಿನ್ನದ ಬೆಲೆ

ಪ್ರಕಾರ 2026ರಲ್ಲಿ ಚಿನ್ನದ ಬೆಲೆ 1 ಔನ್ಸ್‌ಗೆ 5,000 ಡಾಲರ್ ಮುಟ್ಟಬಹುದು. ಒಂದು ಔನ್ಸ್‌ಗೆ 28.35 ಗ್ರಾಮ್ ಆಗುತ್ತದೆ. ಈ ಲೆಕ್ಕಾಚಾರದಲ್ಲಿ ಒಂದು ಗ್ರಾಮ್ ಚಿನ್ನದ ಬೆಲೆ 2026ರಲ್ಲಿ ಸುಲಭವಾಗಿ 15,000-16,0000 ರೂ ಶ್ರೇಣಿಯಲ್ಲಿ ಇರಬಹದು. ಸದ್ಯ ಭಾರತದಲ್ಲಿ ಚಿನ್ನದ ಬೆಲೆ 12,700 ರೂ ಇದೆ. ಇನ್ನೊಂದು ವರ್ಷದ ಬೆಲೆ ಗ್ರಾಮಕ್ಕೆ 3,000 ರೂನಷ್ಟಾದರೂ ಏರಬಹುದು. 10 ಗ್ರಾಮ್ ಒಡವೆ ಮಾಡಿಸಲು ಮುಂದಿನ ವರ್ಷ 30,000 ರೂ ಹೆಚ್ಚಿಗೆ ಕೊಡಬೇಕಾಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *