ಬೆಂಗಳೂರು: ಅಕ್ಷಯ ತೃತೀಯಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಚಿನ್ನ ಖರೀದಿಸುವವರ ಪಾಲಿಗೆ ಶುಭ ಶುಕ್ರವಾರವಾಗಿ ಪರಿಣಮಿಸಿದೆ. ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಯಾಗಿದೆ. ಏಪ್ರಿಲ್ 17ರಂದು ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.

ಒಂದು ಕಡೆ ಕಳೆದ ಮೂರು ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಾ ಸಾಗಿತ್ತು. ಇನ್ನೊಂದೆಡೆ ಅಕ್ಷಯ ತೃತೀಯ ಸಮೀಪಿಸುತ್ತಿತ್ತು. ಹೀಗಿರುವಾಗಲೇ ಚಿನ್ನ ಖರೀದಿಸುವವರ ಪಾಲಿಗೆ ಇದೀಗ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.

ಹೌದು, 24 ಕ್ಯಾರಟ್ ಪ್ರತಿ 10 ಗ್ರಾಮ್ ಚಿನ್ನದ ಮೇಲೆ ಶುಕ್ರವಾರವಾದ ಇಂದು ಬರೋಬ್ಬರಿ 1370 ರುಪಾಯಿ ಇಳಿಯಾಗಿದೆ. ನಿನ್ನೆ 24 ಕ್ಯಾರಟ್ ಒಂದು ಗ್ರಾಮ್‌ಗೆ 15,557 ಇದ್ದ ರೇಟ್ ಇಂದು 15,420 ರುಪಾಯಿಗೆ ಇಳಿಕೆಯಾಗಿದೆ.

ಇನ್ನು ಇದಷ್ಟೇ ಅಲ್ಲದೇ ಆಭರಣ ಚಿನ್ನವಾಗಿರುವ 22 ಕ್ಯಾರಟ್ ಗೋಲ್ಡ್ ರೇಟ್‌ನಲ್ಲೂ ಇಂದು ಭಾರೀ ಇಳಿಕೆಯಾಗಿದೆ. ಇಂದು 22 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಬರೋಬ್ಬರಿ 1250 ರುಪಾಯಿ ಇಳಿಕೆಯಾಗಿದೆ.

ನಿನ್ನೆ 22 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ 14,260 ರುಪಾಯಿ ಆಗಿತ್ತು. ಈ ಮೂಲಕ ಮೇ ತಿಂಗಳ ಗರಿಷ್ಠ ಮೊತ್ತ ತಲುಪಿತ್ತು. ಆದರೆ ಇದೀಗ ಪ್ರತಿ ಗ್ರಾಮ್ ಮೇಲೆ 125 ರುಪಾಯಿ ಕುಸಿತವಾಗಿದ್ದು, ಇಂದು ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 14,135 ರುಪಾಯಿಗಳಾಗಿದೆ.

ಒಟ್ಟಿನಲ್ಲಿ ಅಕ್ಷಯ ತೃತೀಯ ಸಮೀಪಿಸುತ್ತಿರುವಾಗಲೇ ಚಿನ್ನದ ಬೆಲೆಯಲ್ಲಿ ಇಳಿಮುಖ ಕಾಣುತ್ತಿರುವುದು ಬಂಗಾರ ಖರೀದಿಸುವವರ ಮುಖದಲ್ಲಿ ಕೊಂಚ ಸಮಾಧಾನ ಮೂಡುವಂತೆ ಮಾಡಿರುವಂತೆ ಮಾಡಿರುವುದಂತೂ ಸುಳ್ಳಲ್ಲ.

ಇನ್ನು ಚಿನ್ನ ಮಾತ್ರವಲ್ಲದೇ ಬೆಳ್ಳಿಯ ಬೆಲೆಯಲ್ಲೂ ಇಳಿಕೆಯಾಗಿದೆ. ನಿನ್ನೆಯ ದಿನಕ್ಕೆ ಹೋಲಿಸಿದರೆ ಇಂದು ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 5000 ರುಪಾಯಿ ಇಳಿಕೆಯಾಗಿದ್ದು, ಪ್ರತಿ ಕೆಜಿ ಬೆಳ್ಳಿ ಬೆಲೆ 2,65,000 ರುಪಾಯಿಗಳಾಗಿದೆ.

Source link
ಅಕ್ಷಯ ತೃತೀಯಗೂ ಮುನ್ನ ಭಾರೀ ಕುಸಿತ ಕಂಡ ಚಿನ್ನದ ದರ! ಇವತ್ತಿನ ಗೋಲ್ಡ್ ರೇಟ್ ಎಷ್ಟು?