ಇನ್ನಷ್ಟು ಕುಸಿತ ಕಾಣುತ್ತಾ ಚಿನ್ನದ ದರ; ಎಲ್ಲಿಯವರೆಗೆ ಇಳಿಯಬಹುದು ಬಂಗಾರದ ಬೆಲೆ?

ಇನ್ನಷ್ಟು ಕುಸಿತ ಕಾಣುತ್ತಾ ಚಿನ್ನದ ದರ; ಎಲ್ಲಿಯವರೆಗೆ ಇಳಿಯಬಹುದು ಬಂಗಾರದ ಬೆಲೆ?


ನವದೆಹಲಿ, ಫೆಬ್ರುವರಿ 17: ಚಿನ್ನ ಮತ್ತು ಬೆಳ್ಳಿ ಬೆಲೆ ಕಳೆದ ತಿಂಗಳು (ಜನವರಿ) ಯದ್ವಾತದ್ವಾ ಏರಿಕೆ ಕಂಡಿವೆ. ಈ ಅಮೂಲ್ಯ ಲೋಹಗಳ ಬೆಲೆ ಏರಿಕೆಗೆ ಕಡಿವಾಣವೇ ಇಲ್ಲ ಎಂಬಂತೆ ನಾಗಾಲೋಟ ನಡೆದಿತ್ತು. ಈಗ ಏರಿದಷ್ಟೇ ವೇಗವಾಗಿ ಕುಸಿತವೂ ಆಗುತ್ತಿದೆ. ಬೆಲೆ ಏರಿದಷ್ಟೂ ಕಂಗಾಲಾದ ಜನಸಾಮಾನ್ಯರು, ದುಬಾರಿ ಬೆಲೆಯಲ್ಲೂ ಆಭರಣ ಖರೀದಿಸಲು ಮುಗಿಬಿದ್ದದ್ದು ವಿಪರ್ಯಾಸ ಎನಿಸಿತ್ತು. ಸದ್ಯ ಚಿನ್ನದ ಬೆಲೆ (ಚಿನ್ನದ ದರ) ಇಳಿಕೆ ಆಗುತ್ತಿರುವುದು ಬಹಳಷ್ಟು ಭಾರತೀಯ ಜನಸಾಮಾನ್ಯರಿಗೆ ಉಸಿರು ಸಿಕ್ಕಂತಾಗಿದೆ.

ಜನವರಿ 29 ರಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗರಿಷ್ಠ ಮಟ್ಟ ಮುಟ್ಟಿದ್ದವು. ಚಿನ್ನದ ಬೆಲೆ 24 ಕ್ಯಾರಟ್ ನದ್ದು 17,885 ರೂ ತಲುಪಿತ್ತು. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 16,395 ರೂಗೆ ಏರಿತ್ತು. ಇವತ್ತು ಈ ಆಭರಣ ಚಿನ್ನದ ಬೆಲೆ 14,200 ರೂಗೆ ಇಳಿದಿದೆ. ಮುಂದಿನ ದಿನದಲ್ಲಿ ಬಂಗಾರದ ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ತಜ್ಞರು.

ಇದನ್ನೂ ಓದಿ: ಇಂದು ಚಿನ್ನದ ದರ: ಮುಂದುವರಿದಿದೆ ಚಿನ್ನ, ಬೆಳ್ಳಿ ಬೆಲೆಗಳ ಕುಸಿತ

ಚಿನ್ನದ ಬೆಲೆ ಇಳಿಕೆಯಾಗುತ್ತಿರುವುದು ಯಾಕೆ?

ಚಿನ್ನದ ಬೆಲೆ ಇಳಿಯುತ್ತಿರುವುದು ಯಾಕೆ ಎಂದು ತಿಳಿಯುವ ಮೊದಲು ಅದರ ಬೆಲೆ ಏರಿದ್ದು ಯಾಕೆ ಎಂದು ತಿಳಿಯುವುದು ಮುಖ್ಯ. ಜಾಗತಿಕ ರಾಜಕೀಯ ಅನಿಶ್ಚಿತ ಪರಿಸ್ಥಿತಿಯಿಂದಾಗಿ ಬಹಳಷ್ಟು ಹೂಡಿಕೆದಾರರು ಚಿನ್ನ ಮತ್ತು ಸಿಲ್ವರ್ ಐಟಿಎಫ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಜೊತೆಗೆ, ವಿವಿಧ ಸೆಂಟ್ರಲ್ ಬ್ಯಾಂಕುಗಳು ಚಿನ್ನದ ಖರೀದಿಗೆ ಮುಗಿದಿದ್ದವು. ಇವೆರಡು ಪ್ರಮುಖ ಕಾರಣಗಳು ಬಂಗಾರ ದುಬಾರಿಯಾಗಲು.

ಇನ್ನು, ಚಿನ್ನದ ಬೆಲೆ ಈಗ ಇಳಿಯಲೂ ಕೆಲ ಕಾರಣಗಳಿವೆ. ಗೋಲ್ಡ್ ಐಟಿಎಫ್‌ಗಳಲ್ಲಿ ಹೂಡಿಕೆ ಮಾಡಿದವರು ಪ್ರಾಫಿಟ್ ಬುಕ್ ಮಾಡುತ್ತಿರುವುದಕ್ಕೆ ಒಂದು ಕಾರಣ. ಸಹ, ರಷ್ಯಾ ದೇಶವು ಅಮೆರಿಕದ ಕೆಲ ಅಣತಿಗಳನ್ನು ಪಾಲಿಸಲು ಮನಸ್ಸು ಮಾಡಿದೆ. ರಷ್ಯಾ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಏರ್ಪಡಬಹುದು ಎಂಬ ಸುದ್ದಿ ಇದೆ. ಇವು ಚಿನ್ನದ ಬೆಲೆ ಇಳಿಯಲು ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ: ಹೂಡಿಕೆಗಳು ಎಷ್ಟು..? ಕುಗ್ಗಿದ ಈಕ್ವಿಟಿ ಮ್ಯೂಚುವಲ್ ಫಂಡ್ಗಳು; ಹಿಗ್ಗಿದ ಗೋಲ್ಡ್ ಐಟಿಎಫ್ಗಳು

10,000 ರೂಗೆ ಇಳಿಯುತ್ತಾ ಚಿನ್ನದ ಬೆಲೆ?

ಡಾಲರುಗಳಲ್ಲಿ ವಹಿವಾಟು ನಡೆಸಲು ಒಪ್ಪಿದ ರಷ್ಯಾ ಇದೀಗ ತನ್ನ ನಿಲುವು ಬದಲಿಸಿದೆ. ತನ್ನಲ್ಲಿರುವ ಚಿನ್ನವನ್ನು ಮಾರಿ ಡಾಲರ್ ಕರೆನ್ಸಿಯನ್ನು ಖರೀದಿಸಲು ರಷ್ಯಾ ಮುಂದಾಗಬಹುದು ಎಂಬ ಸುದ್ದಿ ಇದೆ. ಅಮೆರಿಕ ಮತ್ತು ರಷ್ಯಾ ನಡುವೆ ವ್ಯಾಪಾರ ಒಪ್ಪಂದ ಏರ್ಪಡುವ, ಮತ್ತು ರಷ್ಯಾ ಉಕ್ರೇನ್ ಯುದ್ಧ ಕೊನೆಗೊಳ್ಳುವ ಸಾಧ್ಯತೆ ಎಲ್ಲೋ ಕಾಣುತ್ತಿದೆ. ಇವೇನಾದರೂ ನಿಜವೇ ಆದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ತೀವ್ರ ಕುಸಿತ ಕಾಣುತ್ತಿದೆ. ಚಿನ್ನದ ಬೆಲೆ ಗ್ರಾಮಕ್ಕೆ 10,000 ರೂಗೆ ಇಳಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *