ಕದನ ವಿರಾಮ ಬಳಿಕ ಚಿನ್ನದ ಬೆಲೆ ಏರಿಕೆ, ಮತ್ತೆ ರಾಕೆಟ್ ವೇಗದಲ್ಲಿ ಹೆಚ್ಚುತ್ತಾ ಬಂಗಾರ ದರ?, ಕದನ ವಿರಾಮದಿಂದ ತೈಲ ಬೆಲೆ ಇಳಿಕೆಯಾಗಿದೆ. ಆದರೆ ಚಿನ್ನ ಬೆಲೆ ಮಾತ್ರ ಏರಿಕೆಯಾಗಿದ್ದೇಕೆ?

ಅಮೆರಿಕ ಇರಾನ್ ಯುದ್ಧದಲ್ಲಿ ದಿಢೀರ್ ಎದುರಾದ ತಿರುವಿನಿಂದ ಕದನವಿರಾಮ ಘೋಷಣೆಯಾಗಿದೆ. ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಷೇರು ಮಾರುಕಟ್ಟೆಯಿಂದ ಹಿಡಿದು, ತೈಲ ಮಾರುಕಟ್ಟೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಮಾಧಾನ ಮಾತ್ರವಲ್ಲ ಅಭಿವೃದ್ಧಿ ಕಾಣುತ್ತಿದೆ. ಆದರೆ ಚಿನ್ನದ ಬೆಲೆಯಲ್ಲಿ ಮಾತ್ರ ವ್ಯತಿರಿಕ್ತ ಪರಿಣಾಮ ಬೀರಿದೆ.

ಟ್ರಂಪ್ ಕದನ ವಿರಾಮ ಘೋಷಣೆ ಮಾಡಿದ ಬಳಿಕ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಶೇಕಡಾ 2.3 ರಿಂದ ಶೇಕಡಾ 3.3ರಷ್ಟು ಏರಿಕೆಯಾಗಿದೆ. ಪರ್ ಔನ್ಸ್ ಬೆಲೆ $4,811 ರಿಂದ $4,850 ರಷ್ಟಾಗಿತ್ತು.

ಕದನ ವಿರಾಮ ಘೋಷಣೆ ಬಳಿಕ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ವ್ಯತ್ಯಾಸವಾಗಿಲ್ಲ. ಇಂದು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1,49,840 ರೂಪಾಯಿ ಆಗಿದೆ. ಇನ್ನು ಕೆಲ ನಗರಗಳಲ್ಲಿ ಚಟಿನ್ನದ ಬೆಲೆಯಲ್ಲಿ 500 ರೂಪಾಯಿಯಿಂದ 800 ರೂಪಾಯಿವಗೆ ಇಳಿಕೆಯಾದ ಉದಾಹರಣೆಗಳಿವೆ. ಆದರೆ ನಾಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆ ಏರಿಕೆ ಭಾರತದ ಮಾರುಕಟ್ಟೆಗೂ ತಟ್ಟಿದೆ.

ಚಿನ್ನದ ಮಾರುಕಟ್ಟೆಯ ತಜ್ಞರ ಪ್ರಕಾರ 2026ರಲ್ಲಿ ಪರ್ ಔನ್ಸ್ ಚಿನ್ನಕ್ಕೆ 7000 ಅಮೆರಿಕನ್ ಡಾಲರ್ ತಲುಪಲಿದೆ ಎಂದು ಅಂದಾಜಿಸಿದ್ದರು. ಸದ್ಯ ಕದನ ವಿರಾಮದ ಬಳಿಕ ಗರಿಷ್ಠ ಶೇಕಡಾ 3.3ರಷ್ಟು ಏರಿಕೆ ಕಂಡಿದೆ. ನಾಳೆ ಭಾರತದ ಮಾರುಕಟ್ಟೆಗ ಅತ್ಯಂತ ಪ್ರಮುಖವಾಗಿದೆ. ನಾಳೆ ಮತ್ತೊಂದು ಸುತ್ತಿನ ಬೆಲೆ ಏರಿಕೆಯಾದರೆ ಭಾರತದ ಮಾರುಕಟ್ಟೆಯಲ್ಲೂ ತಳಮಳ ಆಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಇರಾನ್ ಅಮೆರಿಕ ಕದನ ವಿರಾಮ ಕೇವಲ ತಾತ್ಕಾಲಿಕ ಎಂದು ಘೋಷಣೆಯಾಗಿದೆ. 2 ವಾರಗಳ ತಾತ್ಕಾಲಿಕ ಕದನ ವಿರಾಮದ ಕಾರಣ ಚಿನ್ನದ ಮೇಲಿನ ಹೂಡಿಕೆ, ವ್ಯವಹಾರ ಹೆಚ್ಚಾಗಲಿಗೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆಗಳಿವೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಚಿನ್ನದ ಹೂಡಿಕೆ ಸಾಧ್ಯತೆಯಿಂದ ಬೆಲೆ ಏರಿಕೆ

Source link
ಕದನ ವಿರಾಮ ಬಳಿಕ ಚಿನ್ನದ ಬೆಲೆ ಏರಿಕೆ, ಮತ್ತೆ ರಾಕೆಟ್ ವೇಗದಲ್ಲಿ ಹೆಚ್ಚುತ್ತಾ ಬಂಗಾರ ದರ?