Headlines

ಇ.ಡಿ ಹೆಸರಲ್ಲಿ ಚಿನ್ನದ ವ್ಯಾಪಾರಿ ದರೋಡೆ ಕೇಸ್​: ಆರೋಪಿಗಳಿಗೆ ಖಾಕಿ ಶಾಕ್​, ನಾಲ್ವರು ಅರೆಸ್ಟ್​​

ಇ.ಡಿ ಹೆಸರಲ್ಲಿ ಚಿನ್ನದ ವ್ಯಾಪಾರಿ ದರೋಡೆ ಕೇಸ್​: ಆರೋಪಿಗಳಿಗೆ ಖಾಕಿ ಶಾಕ್​, ನಾಲ್ವರು ಅರೆಸ್ಟ್​​


ಬಂಧಿತರಿಂದ ವಶಪಡಿಸಿಕೊಳ್ಳಲಾಗದ ವಸ್ತುಗಳು.

ಹುಬ್ಬಳ್ಳಿ, ಡಿಸೆಂಬರ್ 02: ಐ.ಡಿ ಹೆಸರಿನಲ್ಲಿ ಚಿನ್ನದ ವ್ಯಾಪಾರಿ ದರೋಡೆ ಪ್ರಕರಣ ಸಂಬಂಧ 4 ಜನ ಆರೋಪಿಗಳು ಸಿಸಿಬಿ ಬಂಧಿಸಿದ್ದಾರೆ. ಮುಂಬೈನ ಅಂಕುಶ ಕದಂ, ಚಂದ್ರಶೇಖರ, ವಿಲಾಸ ಮೋಹಿತೆ ಹಾಗೂ ಗುಜರಾತ್ ನ ವಡೋದರಾದ ಜಿಜ್ಞೇಶ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 6,65,284 ರೂ. ಬೆಲೆಬಾಳುವ 56.26 ಗ್ರಾಂ ಚಿನ್ನದ ಒಡವೆಗಳು, 60 ಸಾವಿರ ರೂ. ನಗದು ಮತ್ತು 7 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.

ಐ.ಡಿ ಅಧಿಕಾರಿಗಳು ಸೋಗಿನಲ್ಲಿ ಚಿನ್ನಾಭರಣ ಅಂಗಡಿಗಳಿಗೆ ಆಭರಣ ಪೂರೈಸುವ ವ್ಯವಹಾರ ಮಾಡುವ ಕೇರಳದ ವ್ಯಾಪಾರಿ ಸುದೀನ್ ಎಂ.ಆರ್. ಅವರನ್ನು ಹೆದರಿಸಿ, ಬರೋಬ್ಬರಿ 3 ಕೋಟಿ ರೂ. ಹೆಚ್ಚಿನ ಮೌಲ್ಯದ ಚಿನ್ನಾಭರಣ ದೋಚಿ ಗ್ಯಾಂಗ್ ಒಂದು ಪರಾರಿಯಾಗಿತ್ತು. ಹುಬ್ಬಳ್ಳಿಯ ಚೆನ್ನಮ್ಮ ವೃತ್ತಕ್ಕೆ ಹೊಂದಿಕೊಂಡಿರುವ ನೀಲಿಜನ್ ರಸ್ತೆಯಲ್ಲಿ ಘಟನೆ ನಡೆದಿತ್ತು. ನ. 15 ರಂದು ಮಂಗಳೂರಿನಿಂದ ಬೆಳಗಾವಿಗೆ ಕೆಲಸಗಾರ ವಿವೇಕ್ ಜೊತೆ ಬಂದಿದ್ದ ಸುದೀನ್ ಅವರ ಬಳಿ ಇದ್ದ ಚೈನ್, ಬ್ರಾಸ್ಲೈಟ್, ಉಂಗುರ, ಕಿವಿಯೋಲೆ, ನೆಕ್ಲೆಸ್, ಲಾಕೆಟ್, ಬಳೆ ಸೇರಿ ಒಟ್ಟು 3.2 ಕೋಟಿ ರೂ. ಮೌಲ್ಯದ ಆಭರಣಗಳನ್ನು ಖದೀಮರು ದೋಚಿದ್ದರು.

ಇದನ್ನೂ ಓದಿ: ಇಡಿ ಅಧಿಕಾರಿ ಸೋಗಿನಲ್ಲಿ ಬಂದು 3 ಕೋಟಿ ರೂ ಹೆಚ್ಚು ಮೌಲ್ಯದ ಚಿನ್ನಾಭರಣ ಲೂಟಿ

ಇಡಿ ಅಧಿಕಾರಿಗಳು ಹಿಂದಿಯಲ್ಲಿ ಮಾತನಾಡಿದ್ದ ಆರೋಪಿಗಳು, ಗುರುತಿನ ಪತ್ರ ತೋರಿಸಿ ವಿಚಾರಣೆಗೆ ಹಾಜರಾಗಿ ಕಚೇರಿಗೆ ಬನ್ನಿ ಎಂದು ಕಾರಿನಲ್ಲಿ ಕರೆದೊಯ್ದಿದ್ದರು. ಚಿನ್ನಾಭರಣಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ತಿಳಿದು ಬಂದಿದೆ ಎಂದು ಸುದೀನ್ ಅವರನ್ನು ಬೆದರಿಸಿತ್ತು. ಜೊತೆಗೆ, ಅವರ ಮೊಬೈಲ್ ಫೋನ್ ಪಡೆದು ಸಿಮ್ ತೆಗೆದಿದ್ದ ಆರೋಪಿಗಳು, ನಂತರ ಅವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣವಿದ್ದ ಬ್ಯಾಗ್ ಕಿತ್ತುಕೊಂಡಿದ್ದರು. ಬೆಳಗಾವಿಯ ಕಿತ್ತೂರು ಸಮೀಪ ಕೆಲಸಗಾರ ವಿವೇಕ್ ರನ್ನ ಕಾರಂದ ಇಳಿಸಿದ್ದ ಗ್ಯಾಂಗ್, ಸುದೀನ್ ಎಂ.ಕೆ. ಹುಬ್ಬಳ್ಳಿ ರಸ್ತೆಯ ಮಾರ್ಗ ಮಧ್ಯೆ ಬಿಟ್ಟಿತ್ತು. ಬಳಿಕ ನಗದು ಹಾಗೂ ಚಿನ್ನಾಭರಣಗಳ ಜೊತೆ ಎಸ್ಕೇಪ್ ಆಗುತ್ತಿದೆ. ಈ ಬಗ್ಗೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಬಳಿಕ ಸಿಸಿಬಿಗೆ ಕೇಸ್ ವಹಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 3:09 pm, ಮಂಗಳವಾರ, 2 ಡಿಸೆಂಬರ್ 25



Source link

Leave a Reply

Your email address will not be published. Required fields are marked *