ಗಣೇಶ್ ಅವರು ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ ನಟಿಸಿದ್ದರು. ಆ ಬಳಿಕ ಅವರು ‘ಪಿನಾಕ’ ಹೆಸರಿನ ಸಿನಿಮಾ ಒಪ್ಪಿಕೊಂಡರು. ಈಗ ಬ್ಯಾಕ್ ಟು ಬ್ಯಾಕ್ ಹೊಸ ಸಿನಿಮಾನ ಅವರು ಘೋಷಿಸಿದ್ದಾರೆ.
ಇತ್ತೀಚೆಗೆ ‘ತಮ್ಮ ಸುಖಾಗಮನ’ ಹೆಸರಿನ ಹೊಸ ಚಿತ್ರವನ್ನು ಗಣೇಶ್ ಅನೌನ್ಸ್ ಮಾಡಿದ್ದರು. ಈಗ ಅವರು ‘ಬೃಂದಾವಿಹಾರಿ’ ಹೆಸರಿನ ಚಿತ್ರವನ್ನು ಘೋಷಿಸಿದ್ದಾರೆ. ಯುಗಾದಿಗೆ ಈ ಚಿತ್ರ ಅನೌನ್ಸ್ ಆಗಿದೆ.
ಶ್ರೀನಿವಾಸ್ ರಾಜು ಅವರು ‘ಬೃಂದಾವಿಹಾರಿ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಮೃದ್ಧಿ ಮಂಜುನಾಥ್ ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಗಣೇಶ್ ಅವರ ಲುಕ್ ಗಮನ ಸೆಳೆಯೋ ರೀತಿಯಲ್ಲಿದೆ.
‘ಬೃಂದಾವಿಹಾರಿ’ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ. ಈ ಸಿನಿಮಾದ ಯುಗಾದಿ ಅನೌನ್ಸ್ ಆಗಲಿದೆ ಎಂಬ ವಿಷಯವನ್ನ ಗಣೇಶ್ ಇತ್ತೀಚೆಗೆ ರಿವೀಲ್ ಮಾಡಿದ್ದಾರೆ. ಫನ್ ವಿಡಿಯೋ ಮೂಲಕ ತಿಳಿಸಲಾಗಿದೆ.
ಕಳೆದ ವರ್ಷ ಗಣೇಶ್ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿರಲಿಲ್ಲ. ಈ ವರ್ಷ ಅವರ ನಟನೆಯ ಎರಡು ಚಿತ್ರಗಳು ರಿಲೀಸ್ ಆಗಲಿವೆಯೇ ಎಂಬ ಪ್ರಶ್ನೆ ಮೂಡಿದೆ.




