Headlines

ಬೆಂಗಳೂರಿಗರಿಗೆ ಸಿಹಿಸುದ್ದಿ: ಗ್ಯಾಸ್ ಬಗ್ಗೆ ಜಿಲ್ಲಾಧಿಕಾರಿ ಮಹತ್ವದ ಸ್ಪಷ್ಟನೆ, ಹೋಟೆಲ್​ಗಳು ಬಂದ್ ಆಗಲ್ಲ

ಬೆಂಗಳೂರಿಗರಿಗೆ ಸಿಹಿಸುದ್ದಿ: ಗ್ಯಾಸ್ ಬಗ್ಗೆ ಜಿಲ್ಲಾಧಿಕಾರಿ ಮಹತ್ವದ ಸ್ಪಷ್ಟನೆ, ಹೋಟೆಲ್​ಗಳು ಬಂದ್ ಆಗಲ್ಲ


ಬೆಂಗಳೂರಿಗರಿಗೆ ಸಿಹಿಸುದ್ದಿ: ಗ್ಯಾಸ್ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ, ಹೋಟೆಲ್ ಬಂದ್ ಆಗಲ್ಲ

ಬೆಂಗಳೂರು, ಮಾರ್ಚ್ 12: ಗಲ್ಫ್ ರಾಷ್ಟ್ರಗಳ ಯುದ್ಧದಿಂದಾಗಿ ದೇಶದ ಜನಸಾಮಾನ್ಯರಿಗೆ ಬಿಸಿ ತಟ್ಟಿದೆ. ಅದರಲ್ಲೂ ಗ್ಯಾಸ್ ಪೂರೈಕೆಯಲ್ಲಿನ ವ್ಯತ್ಯಯವೂ ರಾಜ್ಯದ ಜನ ಜೀವನದ ದಿಕ್ಕೇ ತೋಚದಂತಾಗಿದೆ. ಹೋಟೆಲ್‌ಗಳು ಬಂದ್ ಆಗುತ್ತಿವೆ. ಇನ್ನು ಈ ಮಧ್ಯೆ ಬೆಂಗಳೂರಿನಲ್ಲಿ ಎಲ್.ಪಿ.ಜಿಸಿಲಿಂಡರ್ ಕೊರತೆಯ ಸುದ್ದಿ ಕೂಡ ಹರಿದಾಡುತ್ತಿದೆ, ಎಲ್ ಪಿಜಿ ದಾಸ್ತಾನು ಕೊರತೆ ಇಲ್ಲ. ಸುಳ್ಳು ವದಂತಿಗೆ ಕಿವಿಕೊಡಬೇಡಿ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ.ಜಿ ಹೇಳಿದ್ದಾರೆ. ಹೋಟೆಲ್ ಸಂಘದ ಅಧ್ಯಕ್ಷರು ಕೂಡ ಯಾವುದೇ ಹೋಟೆಲ್ ಬಂದ್ ಆಗಿಲ್ಲ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರೋ ಯುದ್ಧದಿಂದಾಗಿ ಜಗತ್ತಿನಾದ್ಯಂತ ಅಸ್ಥಿರತೆ ಉಂಟಾಗಿದೆ. ಯುದ್ಧದ ಮೋಹದಿಂದ ಜಗತ್ತಿಗೆ ತೈಲದ ಹೊರೆ ಬಿದ್ದಿದೆ. ಅದರಲ್ಲೂ, ಭಾರತದಲ್ಲಂತೂ ಗ್ಯಾಸ್ ಗಂಡಾಂತರವನ್ನೇ ಸೃಷ್ಟಿಸಿದೆ. ಮರ್ಷಿಯಲ್ ಗ್ಯಾಸ್ ಪೂರೈಕೆ ಆಗದೆ ಹೋಟೆಲ್‌ಗಳು ಬಂದ್ ಆಗುತ್ತಿವೆ.

ಎಲ್ ಪಿಜಿ ದಾಸ್ತಾನು ಕೊರತೆ ಇಲ್ಲ: ಸುಳ್ಳು ವದಂತಿಗೆ ಕಿವಿಕೊಡಬೇಡಿ: ಜಿಲ್ಲಾಧಿಕಾರಿ

ಬೆಂಗಳೂರು ನಗರದ ಎಲ್ಲಾ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಾರ್ವಜನಿಕ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ.ಜಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಎಲ್ಪಿಜಿ ಸಿಲಿಂಡರ್ ಸಿಗದೆ ಪರದಾಟ: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕೆ

ಜಿಲ್ಲೆಯಲ್ಲಿ ಗೃಹಬಳಕೆಯ ಅಡುಗೆ ಅನಿಲವು ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುತ್ತದೆ, ಅನಿಲದ ಕೊರತೆ ಇರುವುದಿಲ್ಲವಾದ್ದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಹಾಗೂ ಗೃಹಬಳಕೆಯ ಅಡುಗೆ ಅನಿಲಗಳಿಗೆ ಯಾವುದೇ ಕುಂದುಕೊರತೆಗಳು ಇದಲ್ಲಿ ಸಹಾಯವಾಣಿ 9611404384 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯಾವುದೇ ಹೋಟೆಲ್‌ಗಳು ಬಂದ್ ಆಗಲ್ಲ: ಪಿಸಿ ರಾವ್

ಈ ಬೆಂಗಳೂರು ಹೋಟೆಲ್ ಉದ್ಯಮದ ಗೌರವಾಧ್ಯಕ್ಷ ಪಿಸಿ ರಾವ್ ಹೇಳಿಕೆ ನೀಡಿದ್ದು, ನಮಗೆ ಉಳಿಯಬೇಕು. ಕಾರ್ಮಿಕರಿಗೆ, ಗ್ರಾಹಕರಿಗೆ ತೊಂದರೆ ಆಗಬಾರದು. ಗ್ರಾಹಕರ ನಂಬಿಕೆ ಉಳಿಸಿಕೊಳ್ಳಬೇಕು. ಯಾರೂ ಕೂಡ ಹೋಟೆಲ್ ಬಾಗಿಲು ಹಾಕಬಾರದು. ಬೆಂಗಳೂರಿನಲ್ಲಿ ಯಾವುದೇ ಹೋಟೆಲ್‌ಗಳು ಬಂದ್ ಆಗಲ್ಲ. ಬಂದ್ ಆಗಿರುವ ಹೋಟೆಲ್‌ಗಳನ್ನು ಮತ್ತೆ ತೆರೆಯುವ ನಿರ್ಧಾರ.

ಹೋಟೆಲ್ ಬಾಗಿಲು ಹಾಕಿದರೆ ಎಲ್ಲರಿಗೂ ತೊಂದರೆ

ಪಿಜಿಯಲ್ಲಿರುವ ಬ್ಯಾಚುಲರ್ಸ್, ಐಟಿ ಕಂಪನಿ, ಹೋಟೆಲ್‌ಗಳಿಗೆ ಹೆಚ್ಚಿನ ನೆರವು ನೀಡಲಾಗುತ್ತಿದೆ. ಬಾಗಿಲು ಹಾಕಿದರೆ, ಕಾರ್ಮಿಕರು, ಜನರಿಗೂ ತೊಂದರೆ ಆಗುತ್ತೆ. ಕೇವಲ 20% ಕಡಿಮೆ ಬಳಕೆಯಾಗಿದೆ. ನಮಗೆ ಒದಗಿಸುವ ಗ್ಯಾಸ್ ನಲ್ಲಿ 50% ಕೊಡಿ ಸಾಕು. ಪೆಟ್ರೋಲಿಯಂ ಕಂಪನಿಗಳ ಮುಖ್ಯಸ್ಥರ ಜೊತೆ, ಸರ್ಕಾರದ ಕಾರ್ಯದರ್ಶಿಗಳ ಜೊತೆ ಪರ್ಯಾಯ ಮಾರ್ಗಗಳ ಕುರಿತು ಚರ್ಚೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಲ್ಲಿಲ್ಲ ಗ್ಯಾಸ್ ಸಿಲಿಂಡರ್ ಟೆನ್ಶನ್! ಪ್ರತಿನಿತ್ಯ 70 ಸಾವಿರ ಮಕ್ಕಳಿಗೆ ಸಿಗುತ್ತೆ ಬಿಸಿ ಬಿಸಿ ಊಟ

ಸದ್ಯಕ್ಕೆ ಬಂದ ಮಾಹಿತಿ ಪ್ರಕಾರ ಎರಡು ಹಡಗು ಭಾರತ ತಲುಪಿದೆ. ಇನ್ನೂ ನಮಗೆ ಕೈಗೆ ಬರಬೇಕಿದೆ. ಯುಗಾದಿ, ರಂಜಾನ್ ಸಮಯದಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. 50% ಗ್ಯಾಸ್ ಸಿಗಬಹುದು ಎಂಬ ವಿಶ್ವಾಸ ಇದೆ. ನಾಳೆಯಿಂದ ಹೋಟೆಲ್ ಎಲ್ಲವೂ ತೆರೆದಿರುತ್ತೆ. ಮೆಜೆಸ್ಟಿಕ್‌ನಲ್ಲಿ ಬಂದ್ ಆಗಿರುವ ಹೋಟೆಲ್ ಓಪನ್ ಆಗುತ್ತೆ. 13% ಗ್ಯಾಸ್ ಬೆಂಗಳೂರಿಗೆ ಅಗತ್ಯ ಇದೆ. ಆದರೆ 7% ಗ್ಯಾಸ್ ಸಿಕ್ಕಿದ್ರೂ ನಿರ್ವಹಣೆ ಮಾಡಬಹುದು ಎಂದರು.

ಇನ್ನು ಗ್ಯಾಸ್ ಸಿಲಿಂಡರ್ ಕೊರತೆಯಿಂದ ಹೋಟೆಲ್ ನಲ್ಲಿ ಬೆಲೆ ಏರಿಕೆಯಾಗುತ್ತಿಲ್ಲ. ವೈಯಕ್ತಿಕವಾಗಿ ಅವರ ಬೆಲೆ ಏರಿಸಿದರೆ ಸಂಘ ಜವಾಬ್ದಾರವಲ್ಲ. 98% ಹೋಟೆಲ್‌ಗಳು ಈ ಸಂದರ್ಭದಲ್ಲಿ ಬೆಲೆ ಏರಿಕೆಯಾಗುವುದಿಲ್ಲ ಎಂದು ಪಿಸಿ ರಾವ್ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *