ಬೆಂಗಳೂರು, ಜನವರಿ 15: ನಮ್ಮ ಮೆಟ್ರೋ (ನಮ್ಮ ಮೆಟ್ರೋ) ಯೆಲ್ಲೋ ಲೈನ್‌ನಲ್ಲಿ ಇಂದಿನಿಂದ ಮತ್ತೊಂದು ಮೆಟ್ರೋ ರೈಲು ವಾಣಿಜ್ಯ ಸಂಚಾರ ಆರಂಭವಾಗಿದೆ. ಆರ್.ವಿ.ರೋಡ್–ಬೊಮ್ಮಸಂದ್ರ ಮಾರ್ಗದಲ್ಲಿ 7ನೇ ಮೆಟ್ರೋ ರೈಲು ಸೇವೆಗೆ ಸೇರ್ಪಡೆ, ಪ್ರಯಾಣಿಕರಿಗೆ ಸಂಚಾರ ಇನ್ನಷ್ಟು ಸುಗಮ ಸಂಚಾರ. ಬೆಳಗ್ಗೆ 6 ಗಂಟೆಯಿಂದಲೇ ಎಲ್ಲೋ ಮಾರ್ಗದಲ್ಲಿ 7ನೇ ಮೆಟ್ರೋ ರೈಲು ಸಂಚಾರ ಆರಂಭವಾಗಿದ್ದು, ರೈಲು ಸಂಚಾರದ ನಡುವಿನ ಅಂತರ ಕಡಿಮೆಯಾಗಿದೆ. ಈವರೆಗೆ ಈ ಮಾರ್ಗದಲ್ಲಿ ಪ್ರತಿ 13 ನಿಮಿಷಕ್ಕೊಮ್ಮೆ ಒಂದು ಮೆಟ್ರೋ ರೈಲು ಸಂಚರಿಸುತ್ತದೆ. ಇದೀಗ 7ನೇ ಪ್ರತಿ ರೈಲು ಸೇರ್ಪಡೆಯೊಂದಿಗೆ ಸೋಮವಾರದಿಂದ ಶನಿವಾರದವರೆಗೆ 10 ನಿಮಿಷಕ್ಕೆ ಒಂದು ರೈಲು ಸಂಚಾರ ನಡೆಸಲಿದೆ ಎಂದು ಬಿಎಂಆರ್ ಸಿಎಲ್ (BMRCL) ಹೆಚ್ಚಿನ
ಭಾನುವಾರಗಳಂದು ಈ ಹಿಂದೆ 15 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಸಂಚರಿಸುತ್ತಿದೆ, ಈಗ ಹೊಸ ರೈಲು ಸೇರ್ಪಡೆಯಿಂದ 14 ನಿಮಿಷಕ್ಕೊಮ್ಮೆ ಸೇವೆ ಲಭ್ಯ. ಆದರೆ ಮೊದಲ ಮತ್ತು ಕೊನೆಯ ಮೆಟ್ರೋ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಹೊಂದಿದೆ.
ಯೆಲ್ಲೋ ಲೈನ್‌ಗೆ 2025ರ ಆಗಸ್ಟ್ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಇದೀಗ ರೈಲು ಸೇರ್ಪಡೆಯೊಂದಿಗೆ ಪ್ರಯಾಣಿಕರ ಒತ್ತಡ ಕಡಿಮೆಯಾಗುವ ನಿರೀಕ್ಷೆಯಿದೆ. ಯೆಲ್ಲೋ ಲೈನ್‌ನಲ್ಲಿ ಸಂಚಾರ ಮಾಡುವುದಕ್ಕೆ 7ನೇ ಚಾಲಕರಹಿತ ರೈಲು ಡಿಸೆಂಬರ್‌ನಲ್ಲೇ ಬೆಂಗಳೂರಿಗೆ ಆಗಮಿಸಿತ್ತು. ನಂತರ ಪರೀಕ್ಷೆ ಕಾರ್ಯಗಳು ನಡೆದವು.
ಇದನ್ನೂ ಓದಿ: ನಮ್ಮ ಮೆಟ್ರೋ ಹಳದಿ ಮಾರ್ಗ ಪ್ರಯಾಣಿಕರಿಗೆ ಶುಭಸುದ್ದಿ: ಬೆಂಗಳೂರು ತಲುಪಿದ ಡ್ರೈವರ್ಲೆಸ್ 7ನೇ ರೈಲು
ಬೆಂಗಳೂರು ಮೆಟ್ರೋ ಹಳದಿ ಮಾರ್ಗವು 19.15 ಕಿಮೀ ಇದ್ದು, ಇದು ಸಂಪೂರ್ಣ ಎಲಿವೇಟೆಡ್ ಕಾರಿಡಾರ್ ಆಗಿದೆ. ರಾಷ್ಟ್ರೀಯ ವಿದ್ಯಾಲಯ (ಆರ್‌ವಿ) ರಸ್ತೆಯನ್ನು ಬೊಮ್ಮಸಂದ್ರಕ್ಕೆ ಸಂಪರ್ಕಿಸುತ್ತದೆ ಮತ್ತು ಈ ಮಾರ್ಗದಲ್ಲಿ 16 ನಿಲ್ದಾಣಗಳಿವೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ