Headlines

ತಿಂಗಳಿಗೆ 7 ಲಕ್ಷ ರೂ. ಸಂಬಳದ ಕೆಲಸ ಬಿಟ್ಟ ಬೆಂಗಳೂರಿನ ಗೂಗಲ್ ಉದ್ಯೋಗಿ, ಇಲ್ಲಿದೆ ಕಾರಣ

ತಿಂಗಳಿಗೆ  7 ಲಕ್ಷ ರೂ. ಸಂಬಳದ ಕೆಲಸ ಬಿಟ್ಟ ಬೆಂಗಳೂರಿನ ಗೂಗಲ್ ಉದ್ಯೋಗಿ, ಇಲ್ಲಿದೆ ಕಾರಣ


ಯುಎಇಯಲ್ಲಿ ತಿಂಗಳಿಗೆ ಏಳು ಲಕ್ಷಕ್ಕೂ ಹೆಚ್ಚು ಸಂಬಳ ಪಡೆಯುತ್ತಿದ್ದ ಬೆಂಗಳೂರಿನ ಗೂಗಲ್ (ಗೂಗಲ್ ಉದ್ಯೋಗಿ) ಉದ್ಯೋಗಿಯೊಬ್ಬರು ಅಲ್ಲಿ ಕೆಲಸ ತ್ಯಜಿಸಿ ಬಂದಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆಗಳು ಕೂಡ ನಡೆದಿವೆ. ಅಷ್ಟಕ್ಕೂ ಈ ವ್ಯಕ್ತಿ ದೊಡ್ಡ ಸಂಬಳದ ಕೆಲಸ ಬಿಟ್ಟು ಬರಲು ಏನು ಕಾರಣವಿರಬಹುದು? ಇದಕ್ಕೆ ಅವರೇ ಉತ್ತರ ನೀಡಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ಕೆಲಸ ಸ್ಥಳದಲ್ಲಾದ ಘಟನೆಗಳನ್ನು ಅಡ್ವಿನ್ ನೆಟ್ಟೊ ತಮ್ಮ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ನಟಿಗರು ಕೂಡ ಅವರ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಡ್ವಿನ್ ನೆಟ್ಟೊ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಯುಎಇಗೆ ಹೋಗುವುದು ನನ್ನ ಕನಸಾಗಿತ್ತು. ಕೊನೆಗೂ ನನ್ನ ಕನಸು ನನಸಾಯಿತು. ಯುಎಐಗೆ ಬಂದ್ಮೇಲೆ ಗೊತ್ತಾಯಿತು, ಈ ದೇಶಕ್ಕೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂದು ಮೂರು ತಿಂಗಳಿನಲ್ಲಿ ಎಲ್ಲವೂ ತಿಳಿಯಿತು. ಇಲ್ಲಿ ಮ್ಯಾನೇಜರ್ ನಮ್ಮನ್ನು ನಡೆಸಿಕೊಂಡು ಹೋಗುವುದು, ಎಲ್ಲವೂ ಹಿಂಸೆಯಾಗುವುದು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಅಲ್ಲಿ ಅತ್ಯುತ್ತಮ ಆಹಾರ ಸೇವನೆ ಮಾಡುತ್ತಿದ್ದೇನೆ” ಎಂದು ಹೇಳಿದರು.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ:

ನೆಟ್ಟಿಗರು ಪ್ರತಿಕ್ರಿಯೆ ಏನಿತು ?

ಒಬ್ಬ ನೆಟ್ಟಿಗ, ನಾನು ಇದನ್ನು ಒಪ್ಪುತ್ತೇನೆ. ಏಕೆಂದರೆ ಅಬುಧಾಬಿಯಲ್ಲಿ ನಾನು ಕೂಡ ಕೆಲಸ ಮಾಡಿದ್ದೇನೆ. 7 ರಿಂದ ರಾತ್ರಿ 8 ರವರೆಗೆ ಕೆಲಸ, 3 ಗಂಟೆಗಳ ಊಟದ ವಿರಾಮ, ವಾರಕ್ಕೆ 6 ದಿನ ಕೆಲಸ, ಆದರೆ ಅಲ್ಲಿರುವ ಕೆಲಸದ ವ್ಯವಸ್ಥೆಗಳು ತುಂಬಾ ಹಿಂಸೆಯಾಗಿರುತ್ತದೆ ಎಂದು ಹೇಳಿದರು. ಮತ್ತೊಬ್ಬರು, ದೇಶದ ಸಂಸ್ಕೃತಿ ವಿಭಿನ್ನ ಎಂದು ಹೇಳಿದ್ದಾರೆ, ಮತ್ತೊಬ್ಬ ನೆಟ್ಟಿಗ ಹಣದ ಅವಶ್ಯಕತೆಗಾಗಿ ವಿದೇಶಕ್ಕೆ ಹೋಗುತ್ತೇವೆ. ಆದರೆ ಅಲ್ಲಿ ಪಡುವ ಕಷ್ಟ ಯಾರಿಗೂ ಬೇಡ ಎಂದು ಹೇಳಿದರು.

ಇದನ್ನೂ: ಈ ರೈತ 62 ಓದಿ ಒಮ್ಮೆಯೂ ನಿದ್ದೆ ಮಾಡಿಲ್ಲ, ಇದು ವಿಜ್ಞಾನ ಲೋಕಕ್ಕೆ ಅಚ್ಚರಿ

ಅಡ್ವಿನ್ ನೆತ್ತೋ ಯಾರು?

ಅಡ್ವಿನ್ ನೆಟ್ಟೊ 2007 ರಲ್ಲಿ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಿಂದ ಅನಿಮೇಷನ್ ಮತ್ತು ಗ್ರಾಫಿಕ್ ಪದವಿಯನ್ನು ಪಡೆದರು, 2008 ರಲ್ಲಿ ವೆಬ್ ಡಿಸೈನರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2019ರಲ್ಲಿ ಅಬುಧಾಬಿ ಮೂಲದ ಕಂಪನಿಗೆ ಸೇರುವ ಮೊದಲು ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದೆ. ಮುಂಬೈ ಮೂಲದ ಕಂಪನಿಯಲ್ಲಿ ಕೆಲಸ ಮಾಡಿದ ನಂತರ ಅವರಿಗೆ ಜರ್ಮನ್ ನಲ್ಲಿ ಕೆಲಸದ ಆಫರ್ ಬಂತು. ಸ್ವಲ್ಪ ಸಮಯ ಅಲ್ಲಿ ಕೆಲಸ ಮಾಡಿದ್ರು, ಇದೀಗ ಗೂಗಲ್‌ನ ಬೆಂಗಳೂರು ಕ್ಯಾಂಪಸ್‌ನಲ್ಲಿ ಯುಎಕ್ಸ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *