ಗೂಗಲ್ ಮ್ಯಾಪ್ ತಂದ ಆಪತ್ತು! ಕಬ್ಬಿಣದ ಸರಳುಗಳಿಂದ ತುಂಬಿದ್ದ ಲಾರಿ ಅಪಘಾತ, ಕ್ಯಾಬ್ ಚಾಲಕ ಸಾವು

ಗೂಗಲ್ ಮ್ಯಾಪ್ ತಂದ ಆಪತ್ತು! ಕಬ್ಬಿಣದ ಸರಳುಗಳಿಂದ ತುಂಬಿದ್ದ ಲಾರಿ ಅಪಘಾತ, ಕ್ಯಾಬ್ ಚಾಲಕ ಸಾವು


ಗೂಗಲ್ ಮ್ಯಾಪ್ ತಂದ ಆಪತ್ತು! ಕಬ್ಬಿಣದ ಸರಳುಗಳಿಂದ ತುಂಬಿದ್ದ ಲಾರಿ ಅಪಘಾತ, ಕ್ಯಾಬ್ ಚಾಲಕ ಸಾವು

ಬೆಂಗಳೂರು, ಮಾರ್ಚ್ 27: ಬೆಂಗಳೂರಿನ ಕುರುಬರಹಳ್ಳಿಯ ಪೈಪ್‌ಲೈನ್ ರಸ್ತೆಯಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕಬ್ಬಿಣದ ಸರಳುಗಳನ್ನು ತುಂಬಿದ ಲಾರಿ ಭೀಕರ ಅಪಘಾತಕ್ಕೀಡಾಗಿದೆ. ಆಂಧ್ರದಿಂದ ಸುಂಕದಕಟ್ಟೆ ಕಡೆಗೆ ಬರುತ್ತಿದ್ದ ಈ ಲಾರಿ ಗೂಗಲ್ ಮ್ಯಾಪ್ ದೋಷದಿಂದಾಗಿ ಇಳಿಜಾರು ರಸ್ತೆಯಲ್ಲಿ ಬಂದಿದೆ. ಅಸಲಿಗೆ ಲಾರಿ ಹೋಗಲು ಸೂಕ್ತವಲ್ಲದ ರಸ್ತೆ ಅದಾಗಿತ್ತು. ಅಲ್ಲಿ ಚಾಲಕನ ನಿಯಂತ್ರಣ ತಪ್ಪಿ ಎದುರಿಗಿದ್ದ ಎರ್ಟಿಗ ಕಾರಿಗೆ ಡಿಕ್ಕಿಯಾಗಿ ತುಸು ದೂರ ಎಳೆದುಕೊಂಡು ಹೋಗಿದ್ದು, ಸ್ಕ್ರ್ಯಾಪ್ ಗೋಡೌನ್‌ಗೆ ನುಗ್ಗಿದೆ. ಅಷ್ಟರಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ದುರಂತದಲ್ಲಿ 23 ವರ್ಷದ ಅಂಬಾದಾಸ್ ಎಂಬ ಕ್ಯಾಬ್ ಚಾಲಕ ಕಾರಿನಲ್ಲಿ ಸಜೀವ ದಹನವಾಗಿದ್ದಾರೆ.

ಅಪಘಾತದಲ್ಲಿ ಕಾರು ಸಂಪೂರ್ಣ ಸುತ್ತು ಕರಕಲಾಗಿದೆ. ಅದೃಷ್ಟವಶಾತ್ ಲಾರಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರೆ, ಆತನನ್ನು ರಕ್ಷಿಸಿ. ಮಹಾಲಕ್ಷ್ಮಿ ಲೇಔಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *