ಕರ್ನಾಟಕ ರಾಜ್ಯ ‘ಗುರುಧರ್ಮ ಪ್ರಚಾರಣ ಯುವಜನ ಸಭಾ’ಕ್ಕೆ ನೂತನ ಸಾರಥಿ; ಗೋಪಿ ಕೃಷ್ಣಪ್ಪ ಅಧ್ಯಕ್ಷರಾಗಿ ನೇಮಕ!

ಕರ್ನಾಟಕ ರಾಜ್ಯ ‘ಗುರುಧರ್ಮ ಪ್ರಚಾರಣ ಯುವಜನ ಸಭಾ’ಕ್ಕೆ ನೂತನ ಸಾರಥಿ; ಗೋಪಿ ಕೃಷ್ಣಪ್ಪ ಅಧ್ಯಕ್ಷರಾಗಿ ನೇಮಕ!


ಕರ್ನಾಟಕ ರಾಜ್ಯ ‘ಗುರುಧರ್ಮ ಪ್ರಚಾರಣ ಯುವಜನ ಸಭಾ’ಕ್ಕೆ ನೂತನ ಸಾರಥಿ

ಬೆಂಗಳೂರು, ಡಿಸೆಂಬರ್ 31: ಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಪಸರಿಸುವ ಕೇರಳದ ಶಿವಗಿರಿ ಮಠದ ಶ್ರೀ ನಾರಾಯಣ ಧರ್ಮ ಸಂಘ ಟ್ರಸ್ಟ್ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ರಾಜ್ಯ ಗುರುಧರ್ಮ ಪ್ರಚಾರಣ ಯುವಜನ ಸಭಾದ ನೂತನ ಅಧ್ಯಕ್ಷರಾಗಿ ಗೋಪಿ ಕೃಷ್ಣಪ್ಪ ಅವರನ್ನು ಅಧಿಕೃತವಾಗಿ ನೇಮಿಸಲಾಗಿದೆ.

ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳನ್ನು ಯುವಜನತೆಯಲ್ಲಿ ಮೂಡಿಸುವ ಶಿವಗಿರಿ ಮಠದ ಗುರುಧರ್ಮ ಪ್ರಚಾರಣ ಸಭಾ (GDPS) ಈಗ ರಾಜ್ಯದಲ್ಲಿ ಹೊಸ ಹೆಜ್ಜೆ ಇಟ್ಟಿದೆ. ಸಮಾಜಸೇವೆ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಗೋಪಿ ಕೃಷ್ಣಪ್ಪ ಅವರಿಗೆ ಈಗ ದೊಡ್ಡ ಜವಾಬ್ದಾರಿ ಹೆಗಲಿಗೇರಿದೆ. ಕರ್ನಾಟಕ ರಾಜ್ಯ ಗುರುಧರ್ಮ ಪ್ರಚಾರಣ ಯುವಜನ ಸಭಾದ ಅಧ್ಯಕ್ಷರು ಇವರನ್ನು ನೇಮಿಸಿ ಮಠ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಶ್ರೀ ನಾರಾಯಣ ಗುರುಗಳ ದೃಷ್ಟಿಕೋನ ಮತ್ತು ಆದರ್ಶಗಳ ಬಗ್ಗೆ ಗೋಪಿ ಕೃಷ್ಣಪ್ಪ ಅವರ ಬದ್ಧತೆಯನ್ನು ಪರಿಗಣಿಸಿ ಈ ನೇಮಕಾತಿ ಮಾಡಲಾಗಿದೆ. ಸಾಮಾಜಿಕ ಮತ್ತು ಆಧ್ಯಾತ್ಮಿಕ ಉನ್ನತಿಗಾಗಿ ಅವರು ನೀಡುತ್ತಿರುವ ಸತತ ಕೊಡುಗೆಯೇ ಈ ಉನ್ನತ ಸ್ಥಾನಕ್ಕೆ ಕಾರಣವಾಗಿದೆ. ಅವರ ನಾಯಕತ್ವದಲ್ಲಿ ಕರ್ನಾಟಕದ ಯುವಜನತೆಯಲ್ಲಿ ಗುರುಗಳ ತತ್ವಗಳು ಮತ್ತಷ್ಟು ಆಳವಾಗಿ ಬೇರೂರಲಿವೆ ಎಂಬ ವಿಶ್ವಾಸವನ್ನು ಮಠ ವ್ಯಕ್ತಪಡಿಸಿದೆ. ಶಿವಗಿರಿ ಮಠದ ಈ ನಿರ್ಧಾರದಿಂದ ಕರ್ನಾಟಕದಲ್ಲಿ ಗುರುಧರ್ಮ ಪ್ರಚಾರದ ಕಾರ್ಯಕ್ಕೆ ಹೊಸ ವೇಗ ಸಿಕ್ಕಂತಾಗಿದೆ. ತನ್ನ ಸಾಮಾಜಿಕ ಕಾಳಜಿಯ ಮೂಲಕ ಗುರುತಿಸಲ್ಪಟ್ಟ ಗೋಪಿ ಕೃಷ್ಣಪ್ಪ ಅವರು ಈಗ ಯುವಜನತೆಯನ್ನು ಸಂಘಟಿಸುವ ಸವಾಲನ್ನು ಸ್ವೀಕರಿಸಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *