Headlines

ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್ ಗೆಹ್ಲೋಟ್​​​ ತಡೆದು ಹೈಡ್ರಾಮಾ

ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್ ಗೆಹ್ಲೋಟ್​​​ ತಡೆದು ಹೈಡ್ರಾಮಾ


ಬೆಂಗಳೂರು, ಜನವರಿ 22: ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಆಗಮಿಸಿದ ರಾಜ್ಯಪಾಲ ಗೆಹ್ಲೋಟ್ ಅವರು ಸರ್ಕಾರ ನೀಡಿದ್ದ ಭಾಷಣವನ್ನು ಕೇವಲ ಎರಡೇ ಮಾತುಗಳಲ್ಲಿ ಶುಭಾಶಯ ಕೋರಿ ಹೊರನಡೆದ ಘಟನೆ ಸದನದಲ್ಲಿ ಭಾರೀ ಹೈಡ್ರಾಮಾಗೆ ಕಾರಣವಾಯಿತು. ರಾಜ್ಯಪಾಲರ ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕರು, ಅವರನ್ನು ಬೀಳ್ಕೊಡುವ ಸಂದರ್ಭದಲ್ಲಿ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು. ಈ ಅನಿರೀಕ್ಷಿತ ನಡೆಯಿಂದ ತಪ್ಪಾದ ಶಾಸಕ ಬಿ.ಕೆ. ಹರಿಪ್ರಸಾದ್ ಅವರು, ರಾಜ್ಯಪಾಲರು ಹೊರಡುತ್ತಿದ್ದ ಸಂದರ್ಭದಲ್ಲಿ ಅವರು ಅಡ್ಡಗಟ್ಟಿ ಸಂಪೂರ್ಣ ಭಾಷಣವನ್ನು ಓದುವಂತೆ ಪಟ್ಟು ಹಿಡಿದರು. ಆದರೆ, ರಾಜ್ಯಪಾಲ ಗೆಹ್ಲೋಟ್ ಅವರು ಇದನ್ನು ಲೆಕ್ಕಿಸದೆ ತಮ್ಮ ಪೂರ್ವ ನಿರ್ಧಾರದಂತೆ ಸದನದಿಂದ ಹೊರನಡೆದರು. ಮುಖ್ಯಮಂತ್ರಿಗಳು, ಸ್ಪೀಕರ್, ಸಭಾಪತಿಗಳು ಮತ್ತು ಕಾನೂನು ಸಚಿವರು ಗೌರವಾರ್ಥವಾಗಿ ರಾಜ್ಯಪಾಲರನ್ನು ವಾಹನದವರೆಗೂ ಬೀಳ್ಕೊಟ್ಟರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *