
ಜನವರಿ, ಮಾರ್ಚ್ 27: ಜನರಿಗೆ ತೈಲ ಬೆಲೆ ಏರಿಕೆ ಬಿಸಿ ತಾಗದಿರಲೆಂದು ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು (ಅಬಕಾರಿ ಸುಂಕ) ಕಡಿಮೆ ಮಾಡಿದೆ. ಪೆಟ್ರೋಲ್ ಮತ್ತು ಡೀಸಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು 10 ರೂ ಇಳಿಸಿದೆ. ಇದರಿಂದ ತೈಲ ಮಾರುಕಟ್ಟೆ ಕಂಪನಿಗಳಿಗೆ ಆಗಬಹುದಾಗಿದ್ದ ನಷ್ಟದ ಹೊರೆ ಕಡಿಮೆ ಆಗಲಿದೆ. ಜನಸಾಮಾನ್ಯರಿಗೆ ಪೆಟ್ರೋಲ್, ಡೀಸಲ್ ಬೆಲೆ (ಪೆಟ್ರೋಲ್ ಬೆಲೆ) ಏರಿಕೆಯ ಭಾರವೂ ತಪ್ಪಿದಂತಾಗುತ್ತದೆ.
ಅಬಕಾರಿ ಸುಂಕ ಇಳಿಕೆಯಿಂದ ಸರ್ಕಾರದ ಆದಾಯಕ್ಕೆ ಸಾಕಷ್ಟು ನಷ್ಟ ಆಗಲಿದೆ. ಕೇಂದ್ರೀಯ ನೇರ ತೆರಿಗೆ ಮತ್ತು ಸುಂಕ ಮಂಡಳಿ ಛೇರ್ಮನ್ ವಿವೇಕ್ ಚತುರ್ವೇದಿ ಪ್ರಕಾರ, ಕೇವಲ 15 ದಿನದಲ್ಲಿ ಸರ್ಕಾರಕ್ಕೆ ಆಗುವ ಆದಾಯ ನಷ್ಟ ಬರೋಬ್ಬರಿ 7,000 ಕೋಟಿ ರೂ.
ಇದನ್ನೂ ಓದಿ: ಎಲ್‌ಎನ್‌ಜಿಯನ್ನು ಖರೀದಿಸುವ ಭಾರತ; ಎಲ್ಪಿಜಿ, ಪಿಎನ್ಜಿ, ಎಲ್ಎನ್ ಜಿಗಿರುವ ವ್ಯತ್ಯಾಸಗಳೇನು?
ಆದರೆ, ತೈಲ ಮಾರುಕಟ್ಟೆ ಸಂಸ್ಥೆಗಳು ವಿಪರೀತ ನಷ್ಟ ಎದುರಿಸುವುದನ್ನು ತಡೆಯುವುದನ್ನು ತಪ್ಪಿಸಲು ಅಬಕಾರಿ ಸುಂಕ ಇಳಿಸುವುದು ಅನಿವಾರ್ಯವಾಗಿತ್ತು. ಇಲ್ಲದಿದ್ದರೆ ಪೆಟ್ರೋಲ್, ಡೀಸಲ್ ಬೆಲೆಗಳನ್ನು ಏರಿಸಲು ಅವಕಾಶ ಕೊಡುವ ಒಂದು ಮಾರ್ಗ ಇತ್ತಾದರೂ ಜನಸಾಮಾನ್ಯರಿಗೆ ನೇರವಾಗಿ ಬಿಸಿ ತಗುಲುತ್ತದೆ. ಹೀಗಾಗಿ, ಅಬಕಾರಿ ಸುಂಕವನ್ನು ಇಳಿಸಲು ಸರ್ಕಾರ ನಿರ್ಧರಿಸಿದೆ.
ಜಾಗತಿಕ ಕಚ್ಛಾ ತೈಲ ಬೆಲೆ ಇರಾನ್ ಯುದ್ಧಕ್ಕೆ ಮುನ್ನ ಒಂದು ಬ್ಯಾರಲ್ಗೆ ಸುಮಾರು 60 ಡಾಲರ್ ಇತ್ತು. ಈಗ ಅದು 100 ಡಾಲರ್ ದಾಟಿ ಹೋಗಿದೆ. ಒಂದು ಹಂತದಲ್ಲಿ ಅದು 120 ಡಾಲರ್ ಗಡಿ ಮುಟ್ಟಿತ್ತು. ತೈಲ ಬೆಲೆ ಹೆಚ್ಚಿದಷ್ಟೂ ಒಎಂಸಿಗಳಿಗೆ ನಷ್ಟದ ಹೊರೆ ಹೆಚ್ಚುತ್ತಾ ಹೋಗುತ್ತದೆ. ಸರ್ಕಾರ ಪ್ರತೀ 15 ದಿನಗಳಿಗೊಮ್ಮೆ ಅಬಕಾರಿ ಸುಂಕಗಳನ್ನು ಪರಿಷ್ಕರಿಸಲೂ ನಿರ್ಧರಿಸಿದೆ.
ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಆಪರೇಷನ್ ಸುರಕ್ಷಾ; ಏನಿದು ವಿಶೇಷ ಕಾರ್ಯಾಚರಣೆ?
ಕೆಲವು ದಿನಗಳ ಹಿಂದೆ ಖಾಸಗಿ ಪೆಟ್ರೋಲಿಯಂ ರೀಟೇಲ್ ಮಾರಾಟ ಸಂಸ್ಥೆಯಾದ ನಯಾರಾ ಎನರ್ಜಿ ತನ್ನ ಪೆಟ್ರೋಲ್ ಮತ್ತು ಡೀಸಲ್ ದರಗಳನ್ನು ಹೆಚ್ಚಿಸಿದೆ. ಪೆಟ್ರೋಲ್ ಬೆಲೆ ಲೀಟರ್‌ಗೆ 5 ರೂ ಹೆಚ್ಚಾದರೆ, ಡೀಸಲ್ ಬೆಲೆ 3 ರೂ ಹೆಚ್ಚಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ