ಜನವರಿ 29: ಡಿಜಿಟಲ್ ಟ್ರಾನ್ಸಾಕ್ಷನ್ ವ್ಯಾಪಕವಾಗಿ ಹೆಚ್ಚಾಗಿದ್ದರೂ ಕ್ಯಾಷ್ ವಹಿವಾಟು (ನಗದು ವಹಿವಾಟು) ಕೂಡ ಸಾಕಷ್ಟು ನಡೆಯುತ್ತಿದೆ. 10, 20, 50 ಇತ್ಯಾದಿ ಸಣ್ಣ ಮೊತ್ತದ ನೋಟುಗಳು ಕೆಲವೊಮ್ಮೆ ಬಹಳ ಅಗತ್ಯ ಬೀಳುತ್ತವೆ. ಚಿಲ್ಲರೆ ಅಂಗಡಿಯಲ್ಲಿ 500 ರುಪಾಯಿಗೋ ಅಥವಾ ನೂರು ರೂಪಾಯಿಗೋ ಚಿಲ್ಲರೆ ನಿರಾಕರಿಸುತ್ತಾರೆ. ಯುಪಿಐ ಮೂಲಕ ತಪ್ಪಿಸಿಕೊಂಡವರಿಗೆ ಈ ಸಂದರ್ಭ ಕಷ್ಟವಾಗಬಹುದು. ಇದನ್ನು ತಪ್ಪಿಸಲು ಸರ್ಕಾರ ಹೈಬ್ರಿಡ್ ಎಟಿಎಂ ಮೆಷೀನ್‌ಗಳನ್ನು ಅಳವಡಿಸಲು ಯೋಜಿಸಲಾಗಿದೆ ಎಂದು ವರದಿಗಳು ಹೇಳುತ್ತಿವೆ.
ಈಗಿರುವ ಎಟಿಎಂ ಮೆಷೀನ್‌ಗಳಲ್ಲಿ 500 ರೂ ಮತ್ತು 100 ರೂ ನೋಟುಗಳು ಸಿಗುತ್ತವೆ. ಸರ್ಕಾರಿ ಯೋಜನೆ ಮಾಡಿರುವ ಹೊಸ ಎಟಿಎಂ ಮೆಷೀನ್‌ಗಳು 10 ರೂ, 20 ರೂ ಮತ್ತು 50 ರೂ ನೋಟುಗಳನ್ನು ಡಿಸ್ಪೆನ್ಸ್ ಮಾಡುತ್ತವೆ.
ಇದನ್ನೂ ಓದಿ: ಎಐ ಕ್ಷೇತ್ರದ ಭಾರತೀಯ ಕಂಪನಿಗಳ ಸಿಐಒಗಳು, ಪರಿಣಿತರ ಜೊತೆ ಪ್ರಧಾನಿ ಮೋದಿ ಸಭೆ
ಆದಾಗ್ಯೂ, ಈ ಎಟಿಎಂಗಳಲ್ಲಿ ನೋಟು ವಿನಿಮಯಕ್ಕೂ ಅವಕಾಶ ಕೊಡುವ ಪ್ರಸ್ತಾಪವೂ ಸರ್ಕಾರದ ಮುಂದಿದೆ. ಈ ಪ್ರಸ್ತಾಪದ ಪ್ರಕಾರ, ನೀವು ನಿಮ್ಮಲ್ಲಿರುವ 100 ರೂ ಅಥವಾ 500 ರೂ ನೋಟುಗಳನ್ನು ಎಟಿಎಂಗೆ ಫೀಡ್ ಮಾಡಿದರೆ, ಆ ಮೌಲ್ಯದ ಸಣ್ಣ ನೋಟುಗಳನ್ನು ಮರಳಿಸುತ್ತದೆ. ಇಂತಹ ಹೈಬ್ರಿಡ್ ಎಟಿಎಂಗಳನ್ನು ಸ್ಥಾಪಿಸುವ ಉದ್ದೇಶ ಸರ್ಕಾರಕ್ಕೆ ಇದೆ.
ವರದಿಗಳ ಪ್ರಕಾರ ಮುಂಬೈನಲ್ಲಿ ಈ ಹೈಬ್ರಿಡ್ ಎಟಿಎಂಗಳನ್ನು ಕೆಲವೆಡೆ ಪ್ರಾಯೋಗಿಕವಾಗಿ ಸ್ಥಾಪಿಸಿ ಪರೀಕ್ಷಿಸಲಾಗುತ್ತಿದೆ. ಸ್ಥಳೀಯ ಮಾರುಕಟ್ಟೆ, ಆಸ್ಪತ್ರೆ, ಆಸ್ಪತ್ರೆ, ಬಸ್ ಡಿಪೋ, ಸರ್ಕಾರಿ ಕಚೇರಿ ಇತ್ಯಾದಿ ಕ್ಯಾಶ್ ಬಳಕೆ ಹೆಚ್ಚಿರುವ ಪ್ರದೇಶಗಳಲ್ಲಿ ಇಂತಹ ಪ್ರಾಯೋಗಿಕ ಹೈಬ್ರಿಡ್ ಎಟಿಎಂಗಳನ್ನು ಸ್ಥಾಪಿಸಲಾಗಿದೆ.
ಇದನ್ನೂ ಓದಿ: ಇಲಿಕ್ ಕಾರು ಬ್ಯಾಟರಿ ದೀರ್ಘ ಬಾಳಿಕೆ ಬರಬೇಕಾ? ಇಲ್ಲಿದೆ ಏಳು ಟಿಪ್ಸ್
ಹೈಬ್ರಿಡ್ ಎಟಿಎಂಗಳ ಬಳಕೆಗೆ ಶುಲ್ಕ ಇರುತ್ತದಾ?
ಎಟಿಎಂಗಳನ್ನು ಸ್ಥಾಪಿಸಲು ಬ್ಯಾಂಕುಗಳಿಗೆ ವೆಚ್ಚವಾಗುತ್ತದೆ. ಸ್ಥಾಪನೆ ಹಾಗೂ ಮೈಂಟನೆನ್ಸ್ ವೆಚ್ಚವೂ ಇರುತ್ತದೆ. ಹೀಗಾಗಿ, ಗ್ರಾಹಕರಿಂದ ಇಂತಿಷ್ಟು ಶುಲ್ಕ ಪಡೆಯುವ ಸಾಧ್ಯತೆ ಇಲ್ಲದಿಲ್ಲ. ಸಣ್ಣ ಮೊತ್ತದ ನೋಟುಗಳನ್ನು ಸರ್ಕಾರ ಹೆಚ್ಚೆಚ್ಚು ಮುದ್ರಿಸಬಹುದು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ