
ಜನವರಿ 22: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು ಎಲ್ಪಿಜಿ ಪೂರೈಕೆಯನ್ನು ಶೇ 50ಕ್ಕೆ ಹೆಚ್ಚಿಸಿದೆ. ರೆಸ್ಟೋರೆಂಟ್, ಹೋಟೆಲ್, ಕೈಗಾರಿಕಾ ಕ್ಯಾಂಟೀನ್, ಆಹಾರ ಸಂಸ್ಕರಣ ಘಟಕಗಳು ಮತ್ತು ಸಮುದಾಯ ಅಡುಗೆಮನೆಗಳಿಗೆ ಆದ್ಯತೆ ನೀಡಿ ಕಮರ್ಷಿಯಲ್ ಎಲ್ಪಿಜಿ ನಿಯೋಜನೆ (LPG ಹಂಚಿಕೆ) ಶೇ. 20ಕ್ಕೆ ಏರಿಸಲಾಗಿದೆ. ಇದರೊಂದಿಗೆ ಒಟ್ಟು ನಿಯೋಜನೆ ಶೇ. 50ಕ್ಕೆ ಏರಿಕೆಯಾಗಿದೆ. ಅಂದರೆ, ಕಮರ್ಷಿಯಲ್ ಎಲ್ ಪಿಜಿಗೆ ಇರುವ ಬೇಡಿಕೆ ಮತ್ತು ಅವಶ್ಯಕತೆಯ ಶೇ. 50ರಷ್ಟನ್ನು ಪೂರೈಸದಿದ್ದರೆ.
ಎಲ್ ಪಿಜಿ ಬಿಕ್ಕಟ್ಟು ಉದ್ಭವವಾದಾಗ ಕಮರ್ಷಿಯಲ್ ಎಲ್ ಪಿಜಿ ಪೂರೈಕೆಯನ್ನು ನಿಲ್ಲಿಸಲಾಗಿದೆ. ಗೃಹಬಳಕೆಯ ಗ್ಯಾಸ್ ಸರಬರಾಜು ಮಾತ್ರ ಅಬಾಧಿತವಾಗಿತ್ತು. ನಂತರ, ಕಮರ್ಷಿಯಲ್ ಗ್ಯಾಸ್ ಬಳಕೆದಾರರಿಗೆ ಶೇ. 20ರಷ್ಟು ಪೂರೈಕೆಗೆ ವ್ಯವಸ್ಥೆ ಮಾಡಲು. ನಂತರ ಶೇ. 10 ಹೆಚ್ಚಿಸಲಾಗಿದೆ. ಇದೀಗ ಮತ್ತಷ್ಟು ಶೇ. 20 ಪೂರೈಕೆಯನ್ನು ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಟಿಕೆಟ್ ದರ ಮಿತಿ ಕ್ರಮ ಹಿಂತೆಗೆತ, ಜೆಟ್ ಫುಯಲ್ ಬೆಲೆ ಹೆಚ್ಚಳ ಪರಿಣಾಮ ಏ. 1ರಿಂದ ವಿಮಾನ ಟಿಕೆಟ್ ದರ ಏರಿಕೆ?
ರೆಸ್ಟೋರೆಂಟ್, ಕ್ಯಾಂಟೀನ್ ಇತ್ಯಾದಿಗಳಿಗೆ ಈ ಕಮರ್ಷಿಯಲ್ ಎಲ್ ಪಿಜಿ ಪೂರೈಕೆಗೆ ಆದ್ಯತೆ ನೀಡಲಾಗುತ್ತದೆ. ಆಯಾ ತೈಲ ಮಾರುಕಟ್ಟೆ ಕಂಪನಿಗಳು ಸರ್ಕಾರ ನಿಗದಿಪಡಿಸಿದ ಬ್ಯುಸಿನೆಸ್ ಅನ್ನು ಗುರುತಿಸಿ ಆ ಗ್ರಾಹಕರ ಸೀಮಿತ ಪ್ರಮಾಣದಲ್ಲಿ ಎಲ್ಪಿಜಿ ಪೂರೈಕೆ ಮಾಡುತ್ತವೆ.
ಪಿಎನ್ಜಿಗೆ ಒತ್ತು
ಸರ್ಕಾರವು ವಿವಿಧ ಕಮರ್ಷಿಯಲ್ ಕಂಪನಿಗಳಿಗೆ ಎಲ್ಪಿಜಿ ಬದಲಿಗೆ ಪಿಎನ್‌ಜಿಗೆ ವರ್ಗವಾಗುವಂತೆ ಉತ್ತೇಜಿಸುತ್ತದೆ. ಹೋಟೆಲ್, ರೆಸ್ಟೋರೆಂಟ್ ಇತ್ಯಾದಿ ಕಮರ್ಷಿಯಲ್ ಸಂಸ್ಥೆಗಳು ತೈಲ ಕಂಪನಿಗಳಿಗೆ ಪಿಎನ್ಜಿ ಕನೆಕ್ಷನ್ಗೆ ನೊಂದಾಯಿಸಿಕೊಳ್ಳಬಹುದು.
ಇದನ್ನೂ ಓದಿ: ಕೈಗಾರಿಕಾ ಡೀಸಲ್ ಬೆಲೆಯಲ್ಲಿ ಶೇ. 25% ಏರಿಕೆ; ಯಾರ ಮೇಲಾಗಲಿದೆ ಇದರ ಪರಿಣಾಮ?
ಎಲ್ಪಿಜಿ ಪೂರೈಕೆಯಲ್ಲಿ ಕೊರತೆ ಇಲ್ಲ ಎನ್ನುತ್ತಿದೆ ಸರ್ಕಾರ
ಸದ್ಯಕ್ಕೆ ಎಲ್ಪಿಜಿ ಪೂರೈಕೆ ಸ್ಥಿರವಾಗಿದೆ, ಎಲ್ಲಿಯೂ ಕೊರತೆ ಇಲ್ಲ ಎಂದು ಸರ್ಕಾರ ಹೇಳಿದೆ. ಪ್ಯಾನಿಕ್ ಬುಕಿಂಗ್ ಕಡಿಮೆ ಆಗಿವೆ. ಪೆಟ್ರೋಲ್ ಮತ್ತು ಡೀಸಲ್ ಪೂರೈಕೆಯು ಸ್ಥಿರವಾಗಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ, ಎಲ್ಪಿಜಿ ಸಿಲಿಂಡರ್ ಅಕ್ರಮವಾಗಿ ದಾಸ್ತಾನು ಮಾಡುತ್ತಿರುವವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಎಲ್ಪಿಜಿ ವಿತರಣೆ ಸರಿಯಾಗಿ ಆಗುತ್ತಿರುವುದನ್ನು ಖಚಿತಪಡಿಸಲು ರಾಜ್ಯ ಸರ್ಕಾರಗಳು ಮೇಲ್ವಿಚಾರಣಾ ಸಮಿತಿ ಮತ್ತು ಕಂಟ್ರೋಲ್ ರೂಮ್ಗಳನ್ನು ಸ್ಥಾಪಿಸಿವೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ