
ಜನವರಿ, ಏಪ್ರಿಲ್ 2: ಪಶ್ಚಿಮ ಏಷ್ಯಾದಲ್ಲಿ ಯುದ್ಧ ಭೀತಿ ತಪ್ಪದ ತೈಲ, ಅನಿಲ ಮತ್ತು ಪೆಟ್ರೋಕೆಮಿಕಲ್ ಪೂರೈಕೆ ವ್ಯವಸ್ಥೆಗೆ ಧಕ್ಕೆಯಾಗಿದೆ. ಪೆಟ್ರೋಕೆಮಿಕಲ್ (ಪೆಟ್ರೋಕೆಮಿಕಲ್ಸ್) ಆಮದು ವೆಚ್ಚ ಬಹಳ ಹೆಚ್ಚಾಗುತ್ತಿದೆ, ಇದರ ಮೇಲೆ ಮಾರಾಟ ಮಾಡುವ ಉದ್ಯಮಗಳಿಗೆ ರಿಲೀಫ್ ಸಲುವಾಗಿ ಸರ್ಕಾರ ಆಮದು ಸುಂಕ ವಿನಾಯಿತಿ ಕ್ರಮ ತೆಗೆದುಕೊಳ್ಳುತ್ತಿದೆ. ಇಂದು ಗುರುವಾರ (ಏ. 2) ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಕಾರ, ಕೆಲವು ಪ್ರಮುಖ ಪೆಟ್ರೋಮಿಕಲ್ ಉತ್ಪನ್ನಗಳ ಮೇಲೆ ಪೂರ್ಣ ಆಮದು ಸುಂಕ (ಕಸ್ಟಮ್ಸ್ ಡ್ಯೂಟಿ) ವಿನಾಯಿತಿ ಕೊಡಲಿದೆ.
2026 ರ ಜೂನ್ 30 ರವರೆಗೂ ಆಯ್ದ ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲೆ ಆಮದು ಸುಂಕ ಇರುವುದಿಲ್ಲ. ಈ ಕ್ರಮದಿಂದ ದೇಶೀಯ ಉತ್ಪಾದಕರಿಗೆ ಉತ್ಪಾದನಾ ವೆಚ್ಚ ಏರಿಕೆಯಾಗುವುದು ತಪ್ಪುವ ನಿರೀಕ್ಷೆಯಿದೆ.
ಇದನ್ನೂ ಓದಿ: ಟ್ರಂಪ್ ಹಾಕಿದ ಟ್ಯಾರಿಫ್ಗಳಿಗೆ ಬದಲಾಗಿ ಸಿಗಲಿದೆ ರೀಫಂಡ್; ಯಾರಿಗೆ ಸಿಗುತ್ತೆ ಆದ್ಯತೆ?
ಪೆಟ್ರೋಕೆಮಿಕಲ್ ಉತ್ಪನ್ನಗಳು ಮ್ಯಾನುಫ್ಯಾಕ್ಚರಿಂಗ್ ಉದ್ಯಮಗಳಿಗೆ ಕಚ್ಛಾ ಸಾಮಗ್ರಿಗಳಾಗಿ ಬಳಕೆಯಾಗುತ್ತವೆ. ಭಾರತದಲ್ಲಿ ಸಾಕಷ್ಟು ರಿಫೈನರಿಗಳು ಇವೆ, ಅದಕ್ಕೆ ಬೇಕಾದ ಹೆಚ್ಚಿನ ಪೆಟ್ರೋಕೆಮಿಕಲ್ ಸ್ಟಾಕ್ಗಳು ಗಲ್ಫ್ ರಾಷ್ಟ್ರಗಳಿಂದ ಪೂರೈಕೆಯಾಗುತ್ತವೆ. ಅದರಲ್ಲೂ ಬಹಳ ಮುಖ್ಯವಾದ ಶೇ. 45ರಷ್ಟು ಸರಕುಗಳು ಆಮದಾಗುತ್ತವೆ. ಇವುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಬೆಲೆಗಳೂ ಏರಿವೆ. ಈ ಬೆಲೆ ಏರಿಕೆ ಬಿಸಿ ಕಡಿಮೆ ಮಾಡಲು ಸರ್ಕಾರವು ಕಸ್ಟಮ್ಸ್ ಡ್ಯೂಟಿಯನ್ನು ಹಿಂಪಡೆದುಕೊಂಡಿದೆ.
ಪೆಟ್ರೋಕೆಮಿಕಲ್ ಉತ್ಪನ್ನಗಳಾದ ಮೆಥನಾಲ್, ಅಸಿಟಿಕ್ ಆಯಸಿಟ್, ಮಾನೊಎಥಿಲಿನ್ ಕ್ಲೈಕೋಲ್ (ಎಂಐಜಿ), ಪ್ಯೂರಿಫೈಡ್ ಟೆರೆಫ್ಟಾಲಿಕ್ ಆಯಸಿಡ್ (ಪಿಟಿಎ), ಪಾಲಿಥೀನ್, ಪಾಲಿಪ್ರೊಪಿಲೀನ್ ಮತ್ತು ಪಿವಿಸಿಗಳಿಗೆ ಆಮದು ಸುಂಕದಿಂದ ವಿನಾಯಿತಿ ನೀಡಲಾಗಿದೆ.
ಇದನ್ನೂ ಓದಿ: ಜೆಟ್ ಇಂಧನ: ವಿದೇಶೀ ಏರ್ಲೈನ್ಸ್ಗೆ ಡಬಲ್ ಬೆಲೆ ಏರಿಕೆ; ದೇಶೀಯ ವಿಮಾನಗಳಿಗೆ ಶೇ. 8.5 ಏರಿಕೆ
ಸರ್ಕಾರದ ಈ ಕ್ರಮದಿಂದ ಹಲವು ಉದ್ಯಮಗಳಿಗೆ ಅನುಕೂಲವಾಗಿದೆ. ಪ್ಲಾಸ್ಟಿಕ್ಸ್, ಪ್ಯಾಕೇಜಿಂಗ್, ಟೆಕ್ಸ್ ಟೈಲ್ಸ್, ಫಾರ್ಮಾ, ಕೆಮಿಕಲ್ಸ್, ಆಟೋಮೋಟಿವ್ ಕಾಂಪೋನೆಂಟ್ ಮತ್ತು ಇನ್ನೂ ಹಲವು ಮ್ಯಾನುಫ್ಯಾಕ್ಚರಿಂಗ್ ಉದ್ದಿಮೆಗಳಿಗೆ ಲಾಭದಾಯಕ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ