Headlines

ಹುಡ್ಗಿನ ಲವ್ವಲ್ಲಿ ಬೀಳಿಸ್ಕೊಳ್ಳೋಕೆ Bigg Boss ಗಿಲ್ಲಿಗೆ ಟಿಪ್ಸ್ ಕೇಳಿದ ಯುವಕ ಸುಸ್ತೋ ಸುಸ್ತು

ಹುಡ್ಗಿನ ಲವ್ವಲ್ಲಿ ಬೀಳಿಸ್ಕೊಳ್ಳೋಕೆ Bigg Boss ಗಿಲ್ಲಿಗೆ ಟಿಪ್ಸ್ ಕೇಳಿದ ಯುವಕ ಸುಸ್ತೋ ಸುಸ್ತು

ಹುಡ್ಗಿನ ಲವ್ವಲ್ಲಿ ಬೀಳಿಸ್ಕೊಳ್ಳೋಕೆ Bigg Boss ಗಿಲ್ಲಿಗೆ ಟಿಪ್ಸ್ ಕೇಳಿದ ಯುವಕ ಸುಸ್ತೋ ಸುಸ್ತು

ಬಿಗ್​ಬಾಸ್​ ಖ್ಯಾತಿಯ ಗಿಲ್ಲಿ ನಟ ‘ಗೌರಿ ಕಲ್ಯಾಣ’ ಸೀರಿಯಲ್ ಸಂತೆಯಲ್ಲಿ ಭಾಗವಹಿಸಿದ್ದರು. ಈ ವೇಳೆ, ಪ್ರೀತಿಯಲ್ಲಿ ಸೋತ ಯುವಕನೊಬ್ಬ ಸಲಹೆ ಕೇಳಿದಾಗ, ತನಗಾದ ಐದು ಬ್ರೇಕಪ್​ಗಳ ಬಗ್ಗೆ ಹೇಳಿ ತಮಾಷೆಯಾಗಿ ಉತ್ತರಿಸಿದ್ದಾರೆ.

ಬಿಗ್​ಬಾಸ್​ 12 (Bigg Boss 12) ಮೂಲಕ ಎಲ್ಲರ ಮನಸ್ಸನ್ನು ಗೆದ್ದು ಕದ್ದವರು ಗಿಲ್ಲಿ ನಟ. ಸಾಮಾನ್ಯವಾಗಿ ಬಿಗ್​ಬಾಸ್​​ ಮುಗಿದ ಮೇಲೆ ಸ್ಪರ್ಧಿಗಳ ಕ್ರೇಜ್​ ಕಡಿಮೆಯಾಗುತ್ತಾ ಸಾಗುತ್ತದೆ. ಅದರೆ ಸದ್ಯ ಗಿಲ್ಲಿನಟನಿಗೆ ಇನ್ನೂ ಡಿಮಾಂಡ್​ ಇದ್ದು, ರಿಯಾಲಿಟಿ ಷೋಗಳಲ್ಲಿ ಆಫರ್​ ಬರುತ್ತಲೇ ಇವೆ.

ಇದೀಗ ಅವರನ್ನು ಮತ್ತೊಮ್ಮೆ ಗೌರಿ ಕಲ್ಯಾಣ ಸೀರಿಯಲ್ ಸಂತೆಗೆ ಆಹ್ವಾನಿಸಲಾಗಿದೆ. ಅಲ್ಲಿ ಅವರು ಸೀರಿಯಲ್​ ವೀಕ್ಷಕರ ಜೊತೆ ಸಂವಾದ ನಡೆಸಿದ್ದಾರೆ. ಅಲ್ಲಿ ಕೆಲವೊಂದು ತಮಾಷೆಗೆ ಘಟನೆಗಳು ನಡೆದಿವೆ.

ವೀಕ್ಷಕರಲ್ಲಿ ಒಬ್ಬ ಯುವಕ ಒಬ್ಬ ಹುಡುಗಿಯನ್ನು ಲವ್​ ಮಾಡ್ತಿರೋ ವಿಷ್ಯ ತಿಳಿಸಿದ್ದಾರೆ. ನಾನು ಒಬ್ಬಳನ್ನು ಲವ್​ ಮಾಡ್ತಿದ್ದೇನೆ ಎಂದಾಗ ಗಿಲ್ಲಿ ನಟ ಕಂಗ್ರಾಟ್ಸ್​ ಎಂದು ಕೂಡಲೇ ಅವಳು ಮಾಡ್ತಿದ್ದಾಳಾ ಎಂದು ಕೇಳಿದ್ದಾರೆ. ಅದಕ್ಕೆ ಆ ಯುವಕ ಆ ಹುಡುಗಿ ಒಪ್ಪುತ್ತಿಲ್ಲ, ಯಾವ ರೀತಿಯಲ್ಲಿ ಒಪ್ಪಿಸಬೇಕು, ನಿಮ್ಮ ಸಲಹೆ ಕೊಡಿ ಎಂದು ಕೇಳಿದ್ದಾರೆ.

ಅದಕ್ಕೆ ಗಿಲ್ಲಿ ನಟ, ನೀನು ಪ್ರಶ್ನೆ ಕೇಳೋದು ತಪ್ಪಲ್ಲ, ಆದರೆ ಯಾರ ಹತ್ತಿರ ಕೇಳ್ತಾ ಇದ್ದಿಯಾ ಎನ್ನೋದು ತಪ್ಪು ಎಂದು ತಮಾಷೆ ಮಾಡಿದ್ದಾರೆ.

ನಾನು ಐದು ಲವ್​ ಮಾಡಿ ಬ್ರೇಕಪ್​ ಆಗಿ ಕೂತಿದ್ದೇನೆ. ಈ ಪ್ರಶ್ನೆಗೆ ನಿನಗೆ ಜೀವನಪೂರ್ತಿ ಉತ್ತರನೇ ಸಿಗಲ್ಲ. ಸಿಕ್ಕಿದ್ರೆ ನಾನ್ಯಾಕೆ ಇಲ್ಲಿ ಒಬ್ಬನೇ ಬಂದು ನಿತ್ಕೊತಿದ್ದೆ ಎಂದು ಪ್ರಶ್ನಿಸಿದ್ದಾರೆ.

ಕೊನೆಗೆ ಆ ಹುಡುಗಿ ನಿಮ್ಮ ಕಾಲೇಜೇನಾ ಎಂದು ಪ್ರಶ್ನಿಸಿದಾಗ, ಯುವಕ ಹೌದು ಎಂದಿದ್ದಾರೆ. ಆಗ ಆ್ಯಂಕರ್​ ಸುಷ್ಮಾ ತಾಳಿ ಕಟ್ಟುಬಿಡು ಎಂದು ಹೇಳಬಿಡಬೇಡಾ ಮತ್ತೆ ಎಂದು ತಮಾಷೆ ಮಾಡಿದಾಗ, ಗಿಲ್ಲಿ ಹಾಗೆಲ್ಲಾ ಮಾಡ್ಬೇಡಪ್ಪಾ ಮತ್ತೆ ನನ್ನ ತಲೆ ಮೇಲೆ ಬರುತ್ತೆ ಎಂದಿದ್ದಾರೆ.

ಕೊನೆಗೆ ಆ ಹುಡುಗಿ ನಿನ್ನ ಹಣೆಯಲ್ಲಿ ಬರೆದಿದ್ದರೆ ಸಿಕ್ತಾಳೆ, ಇಲ್ಲಂದ್ರೆ ಸಿಗಲ್ಲ, ಇದೇ ಸತ್ಯ ಎಂದಿದ್ದಾರೆ. ಇದನ್ನು ಕೇಳಿ ಯುವಕ ಉತ್ತರ ಸಿಗದೇ ಬೆಪ್ಪಾಗಿದ್ದಾನೆ!

Source link

Leave a Reply

Your email address will not be published. Required fields are marked *