Headlines

ಹೈ ಹೀಲ್ಸ್ ಧರಿಸೋದನ್ನು ನಿಷೇಧಿಸಿದ ಸರ್ಕಾರ; ನಿಯಮ ಉಲ್ಲಂಘನೆಗೆ 80 ಸಾವಿರ ರೂಪಾಯಿ ದಂಡ

ಹೈ ಹೀಲ್ಸ್ ಧರಿಸೋದನ್ನು ನಿಷೇಧಿಸಿದ ಸರ್ಕಾರ; ನಿಯಮ ಉಲ್ಲಂಘನೆಗೆ 80 ಸಾವಿರ ರೂಪಾಯಿ ದಂಡ

ಹೈ ಹೀಲ್ಸ್ ಧರಿಸೋದನ್ನು ನಿಷೇಧಿಸಿದ ಸರ್ಕಾರ; ನಿಯಮ ಉಲ್ಲಂಘನೆಗೆ 80 ಸಾವಿರ ರೂಪಾಯಿ ದಂಡ

ಪಾರಂಪರಿಕ ಸ್ಥಳಗಳನ್ನು ಸಂರಕ್ಷಿಸುವ ಉದ್ದೇಶದಿಂದ ಹೈ ಹೀಲ್ಸ್ ಧರಿಸುವುದನ್ನು ನಿಷೇಧಿಸಿದೆ.  ಈ  ದೇಶದಲ್ಲಿ ನಿಯಮವನ್ನು ಉಲ್ಲಂಘಿಸಿದರೆ, ಪ್ರವಾಸಿಗರಿಗೆ ಸುಮಾರು 80,000 ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ.

ಕೆಲವೊಂದು ದೇಶಗಳು ಹಲವು ಉದ್ದೇಶಗಳನ್ನಿಟ್ಟುಕೊಂಡು ವಿಶೇಷ ನಿಯಮಗಳನ್ನು ಜಾರಿಗೆ ತಂದಿರುತ್ತದೆ. ಈ ನಿಯಮಗಳು ಕೇಳುಗರಿಗೆ ವಿಚಿತ್ರ ಅನ್ನಿಸಿದರೂ ಅವುಗಳ ಹಿಂದಿನ ಕಾರಣ ಕೇಳಿದ್ರೆ ಒಳ್ಳೆಯ ರೂಲ್ಸ್ ಅಂತ ನಿಮಗೂ ಗೊತ್ತಾಗುತ್ತದೆ. ದೇಶವೊಂದು ತನ್ನ ಕೆಲವೊಂದು ಪ್ರದೇಶದಲ್ಲಿ ಹೈ ಹೀಲ್ಸ್ ಧರಿಸೋದನ್ನು ಕಡ್ಡಾಯವಾಗಿ ನಿಷೇಧಿಸಿದೆ. ನಿಯಮ ಉಲ್ಲಂಘನೆಗೆ 80 ಸಾವಿರ ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ.

ಗ್ರೀಸ್‌ನ ಸುಂದರ ಸ್ಥಳಗಳಿಗೆ ಭೇಟಿ ನೀಡಬೇಕು ಅನ್ನೋದು ಹಲವರ ಆಸೆಯಾಗಿರುತ್ತದೆ. ಈ ದೇಶಕ್ಕೆ ತೆರಳುವ ಮುನ್ನ ಪ್ರವಾಸಿಗರು ಇಲ್ಲಿಯ ನಿಯಮಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಒಂದು ವೇಳೆ ನೀವು ಹೈಹೀಲ್ಸ್ ಧರಿಸಿದ್ರೆ ಪ್ರವಾಸಿ ತಾಣಕ್ಕೆ ನಿಷೇಧಿಸಲಾಗುತ್ತದೆ. ಗ್ರೀಸ್ ತೆಗೆದುಕೊಂಡ ಕ್ರಮ ಏನು? ಯಾವ ಸ್ಥಳಗಳಲ್ಲಿ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.

ಗ್ರೀಸ್ ಸರ್ಕಾರ 2009ರಲ್ಲಿ ಪಾರಂಪರಿಕ ಸ್ಥಳಗಳಲ್ಲಿ ಹೈ ಹೀಲ್ಸ್ ಧರಿಸೋದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಗ್ರೀಸ್‌ನ ಪ್ರಮುಖ ಐತಿಹಾಸಿಕ ಸ್ಮಾರಕಗಳಲ್ಲಿ ಹೈ ಹೀಲ್ಸ್ ಧರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇಲ್ಲಿಯ ಪಾರಂಪರಿಕ ತಾಣಗಳಲ್ಲಿ ಹೈಹೀಲ್ ಧರಿಸಿ ಫೋಟೋಗೆ ಪೋಸ್ ನೀಡಲು ನಿರ್ಧರಿಸಿದ್ರೆ ನಿಮ್ಮ ಆಸೆ ಎಂದಿಗೂ ಈಡೇರಲ್ಲ.

ಈ ನಿಯಮ ಗ್ರೀಸ್ ದೇಶದ ದೊಡ್ಡ ಪರಂಪರೆಯ ಸಂರಕ್ಷಣಾ ಕ್ರಮದ ಭಾಗವಾಗಿದೆ. ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಪ್ರಾಚೀನ ಸ್ಮಾರಕಗಳಿಗೆ ಭೇಟಿ ನೀಡುತ್ತಾರೆ. ಹೈಹೀಲ್ಸ್ ಧರಿಸಿದ್ರೆ ಸೂಕ್ಷ್ಮವಾದ ಕಲ್ಲಿನ ರಚನೆಗಳಿಗೆ ದೀರ್ಘಕಾಲೀನ ಹಾನಿಯನ್ನುಂಟುಮಾಡಬಹುದು ಎಂದು ಇಲ್ಲಿಯ ಅಧಿಕಾರಿಗಳು ಹೇಳುತ್ತಾರೆ.

ಗ್ರೀಸ್‌ನ ಅಥೆನ್ಸ್‌ನಲ್ಲಿರುವ ಅಕ್ರೊಪೊಲಿಸ್, ಪಾರ್ಥೆನಾನ್ ದೇವಾಲಯ, ಡಯೋನೈಸಸ್‌ನ ರಂಗಮಂದಿರ ಮತ್ತು ಹೆರೋಡ್ಸ್ ಅಟಿಕಸ್‌ನ ಓಡಿಯನ್ ಪ್ರವಾಸಿ ತಾಣಗಳಲ್ಲಿ ಹೈ ಹೀಲ್ಸ ಧರಿಸುವಂತಿಲ್ಲ. ಈ ಎಲ್ಲಾ ತಾಣಗಳು ಪ್ರಾಚೀನ ಅಮೃತಶಿಲೆ ಮತ್ತು ಕಲ್ಲಿನ ನೆಲಹಾಸುಗಳನ್ನು ಹೊಂದಿವೆ.

ಚೂಪಾದ ಹಿಮ್ಮಡಿಗಳು ವ್ಯಕ್ತಿಯ ಇಡೀ ದೇಹದ ತೂಕವನ್ನು ಬಹಳ ಸಣ್ಣ ಮೇಲ್ಮೈ ಪ್ರದೇಶದ ಮೇಲೆ ಕೇಂದ್ರೀಕರಿಸುತ್ತವೆ. ಈ ತೀಕ್ಷ್ಣವಾದ ಒತ್ತಡ ಶಿಲೆಗಳ ಮೇಲೆ ಬೀಳುವ ಅಪಾಯವಿರುತ್ತದೆ. ಚೂಪಾದ ಹಿಮ್ಮಡಿಗಳು ಶತಮಾನಗಳಷ್ಟು ಹಳೆಯದಾದ ಅಮೃತಶಿಲೆಯಲ್ಲಿ ಸಣ್ಣ ಬಿರುಕುಗಳನ್ನು ಉಂಟುಮಾಡಬಹುದು ಎಂದು ಪುರಾತಾತ್ವ ಇಲಾಖೆ ಹೇಳುತ್ತದೆ.

ಇದನ್ನೂ ಓದಿ: ಪ್ರೀ ವೆಡ್ಡಿಂಗ್​ ಶೂಟ್​ನಲ್ಲಿ ಭಾವಿ ಪತ್ನಿಯ ಎತ್ತಿದ್ದೇ, ಆಗಬಾರದ್ದು ಆಗೋಯ್ತು- ವಿಡಿಯೋನೂ ವೈರಲ್ ​ಆಯ್ತು

ಈ ನಿಯಮಗಳನ್ನು ಉಲ್ಲಂಘಿಸುವ ಪ್ರವಾಸಿಗರಿಗೆ 900 ಯುರೋಗಳವರೆಗೆ (ಭಾರತೀಯ ಕರೆನ್ಸಿಯಲ್ಲಿ ₹80,000 ಗೆ ಸಮಾನ) ದಂಡ ವಿಧಿಸಬಹುದು. ನಿರ್ಲಕ್ಷ್ಯವನ್ನು ತಡೆಯಲು ಮತ್ತು ಪರಂಪರೆಯನ್ನು ಸಂರಕ್ಷಿಸುವ ಉದ್ದೇಶದಿಂದ ಇಷ್ಟು ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತದೆ. ಭದ್ರತಾ ಸಿಬ್ಬಂದಿ ಪ್ರವೇಶದ್ವಾರದಲ್ಲಿಯೇ ಪ್ರವಾಸಿಗರು ಧರಿಸಿರುವ ಶೂಗಳನ್ನು ಪರಿಶೀಲನೆ ನಡೆಸುತ್ತಾರೆ.

ಇದನ್ನೂ ಓದಿ: ತಂತಾನೇ ಚಲಿಸುವ ಪಾರ್ಕ್​ನ ಉಪಕರಣ: ತನಿಖೆಗೆ ಬಂದ ಪೊಲೀಸರೇ ಬೆಚ್ಚಿಬಿದ್ದರು! ಏನಿದು ನಿಗೂಢ

Source link

Leave a Reply

Your email address will not be published. Required fields are marked *