ಅಮರಾವತಿ, ನವೆಂಬರ್ 12: ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವರನಿಗೆ ವೇದಿಕೆಯಲ್ಲಿಯೇ ಚಾಕುವಿನಿಂದ ಇರಿಯಲಾಗಿದೆ. ಇದರಿಂದ ಸಂಭ್ರಮ ತುಂಬಿರಬೇಕಿದ್ದ ಮದುವೆ ಮಂಟಪದಲ್ಲಿ ಆತಂಕ ನಿರ್ಮಾಣವಾಯಿತು. ತಕ್ಷಣ ವರನನ್ನು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಈ ವೇಳೆ ಮದುವೆಯ ಸಂಭ್ರಮವನ್ನು ಕವರ್ ಮಾಡುತ್ತಿರುವ ಡ್ರೋನ್ ಕ್ಯಾಮೆರಾ (ಡ್ರೋನ್ ವಿಡಿಯೋ) ಬೈಕ್‌ನಲ್ಲಿ ಪರಾರಿಯಾಗುತ್ತಿದ್ದ ಇಬ್ಬರು ದಾಳಿಕೋರರನ್ನು 2 ಕಿ.ಮೀ. ವರೆಗೆ ಬೆನ್ನಟ್ಟಿದೆ. ಆ ಡ್ರೋನ್ ಕ್ಯಾಮೆರಾದಿಂದಾಗಿ ಚಾಕುವಿನಿಂದ ಹಲ್ಲೆ ನಡೆಸಿದವರು ಸಿಕ್ಕಿಬಿದ್ದಿದ್ದಾರೆ.
22 ವರ್ಷದ ಸುಜಲ್ ರಾಮ್ ಸಮುದ್ರ ಅವರ ವಿವಾಹ ಸಮಾರಂಭದ ಸಂದರ್ಭದಲ್ಲಿ ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ರಾಘೋ ಜಿತೇಂದ್ರ ಬಕ್ಷಿ ಎಂಬ ಆರೋಪಿ ವೇದಿಕೆಯಲ್ಲಿ ವರನ ಬಳಿಗೆ ಬಂದು ಚಾಕುವಿನಿಂದ ಮೂರು ಬಾರಿ ಇರಿದು, ಅವನ ತೊಡೆ ಮತ್ತು ಮೊಣಕಾಲಿಗೆ ಗಾಯಗೊಳಿಸಿದ್ದಾನೆ. ಈ ವೇಳೆ ಮದುವೆಗೆ ಕರೆಸಲಾಗಿದ್ದ ಕ್ಯಾಮೆರಾಮನ್ ತನ್ನ ಡ್ರೋನ್ ಕ್ಯಾಮೆರಾದಲ್ಲಿ ಈ ಪೂರ್ತಿ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ನಂತರ ಆ ದಾಳಿಕೋರರು ಹೋದ ದಿಕ್ಕಿನಲ್ಲಿ 2 ಕಿ.ಮೀವರೆಗೆ ಆತನ ಡ್ರೋನ್ ಕ್ಯಾಮೆರಾದ ಮೂಲಕ ಫಾಲೋ ಮಾಡಲಾಗಿದೆ. ಇದರಿಂದ ಆರೋಪಿಯನ್ನು ಪತ್ತೆಹಚ್ಚಲು ಸಾಧ್ಯವಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ