
ಬೆಂಗಳೂರು, (ಡಿಸೆಂಬರ್ 21): ವಿಪಕ್ಷ ಬಿಜೆಪಿ-ಜೆಡಿಎಸ್ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಗೃಹಲಕ್ಷ್ಮಿ ಯೋಜನೆ 24ನೇ ಕಂತಿನ ಹಣ ಬಿಡುಗಡೆಗೆ ಸರ್ಕಾರ ಮುಂದಾಗಿದೆ. ಬರುವ ಶನಿವಾರದೊಳಗೆ 24ನೇ ಕಂಟಿನ ದುಡ್ಡು ಗ್ರಾಹಕರ ಖಾತೆಗೆ ಸೇರುತ್ತದೆ. ಪಂಚ ಗ್ಯಾರಂಟಿಯಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ ಗ್ರಹಣ ಹಿಡಿದಿತ್ತು. ಚಳಿಗಾಲದ ಅಧಿವೇಶನದಲ್ಲಿ ಫೆಬ್ರವರಿ, ಮಾರ್ಚ್ ತಿಂಗಳ ಹಣ ಬಿಟ್ಟು ಬೇರೆ ತಿಂಗಳ ಹಣ ಹಾಕಿದ್ದಾರೆ ಎಂದು ಬಿಜೆಪಿ ಹೋರಾಟ ನಡೆಸಿತ್ತು. 5 ಸಾವಿರ ಕೋಟಿ ರೂಪಾಯಿ ಎಲ್ಲಿ ಹೋಯ್ತು ಎಂದು ಬಿಜೆಪಿ ಪ್ರಶ್ನಿಸಿತ್ತು. ಫೆಬ್ರುವರಿ, ಮಾರ್ಚ್ ಕಂತು ಬಿಡುಗಡೆದಿರೋದನ್ನ TV9 ರಿಯಾಲಿಟಿ ಚೆಕ್ ಮೂಲಕ ಬಯಲು ಮಾಡಿತ್ತು. ಆದರೆ, ಫೆಬ್ರವರಿ, ಮಾರ್ಚ್ ಕತ್ತಿನ ಬಗ್ಗೆ ಸಚಿವೆ ಸ್ಪಷ್ಟನೆ ಕೊಟ್ಟಿಲ್ಲ. ಈ ವಿಪಕ್ಷಗಳು ಮಧ್ಯೆ ವಾಗ್ದಾಳಿ ಮುಂದುವರಿದಿದ್ದು, ಹಿಂದಿನ ಎರಡು ತಿಂಗಳ ಬಾಕಿ ಹಣದ ಕಥೆ ಏನು ಎನ್ನುವುದೇ ಇನ್ನೂ ನಿಗೂಢವಾಗಿದೆ.