Headlines

ಜನವರಿಯಲ್ಲಿ 1.93 ಲಕ್ಷ ಕೋಟಿ ರೂ ಜಿಎಸ್​ಟಿ ಸಂಗ್ರಹ; ಈ ವರ್ಷ 18 ಲಕ್ಷ ಕೋಟಿ ರೂ ಟ್ಯಾಕ್ಸ್ ಕಲೆಕ್ಷನ್

ಜನವರಿಯಲ್ಲಿ 1.93 ಲಕ್ಷ ಕೋಟಿ ರೂ ಜಿಎಸ್​ಟಿ ಸಂಗ್ರಹ; ಈ ವರ್ಷ 18 ಲಕ್ಷ ಕೋಟಿ ರೂ ಟ್ಯಾಕ್ಸ್ ಕಲೆಕ್ಷನ್


ನವದೆಹಲಿ, ಫೆಬ್ರುವರಿ 1: ಭಾರತದ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ (GST ಸಂಗ್ರಹಣೆಗಳು) ಜನವರಿಯಲ್ಲಿ 1,93,384 ಕೋಟಿ ರೂ ಆಗಿದೆ. ಕಳೆದ ವರ್ಷದ ಇದೇ ತಿಂಗಳಿಗೆ ಜಿಎಸ್ ಟಿ ಸಂಗ್ರಹದಲ್ಲಿ ಶೇ. 6.2ರಷ್ಟು ಹೆಚ್ಚಿದೆ. 2025ರ ಜನವರಿಯಲ್ಲಿ ಜಿಎಸ್ ಟಿ ಸಂಗ್ರಹ 1,82,094 ಕೋಟಿ ರೂ ಇತ್ತು. ಪ್ರಸಕ್ತ ಹಣಕಾಸು ವರ್ಷ ಇಲ್ಲಿಯವರೆಗೆ, ಅಂದರೆ 2025ರ ಏಪ್ರಿಲ್‌ನಿಂದ 2026ರ ಜನವರಿ 10ರವರೆಗೆ ಒಟ್ಟು ಜಿಎಸ್‌ಟಿ 18,43,423 ಕೋಟಿ ರೂ. ಹಿಂದಿನ ವರ್ಷದ ಇದೇ ಅವಧಿಗೆ ಶೇ. 8.3ರಷ್ಟು ಸಂಗ್ರಹವಾಗಿದೆ.

2026ರ ಜನವರಿಯಲ್ಲಿ ಒಟ್ಟು ಸಂಗ್ರಹ 1,93,384 ಕೋಟಿ ರೂ ಇದ್ದರೆ, ನಿವ್ವಳ ಜಿಎಸ್ಟಿ ಆದಾಯ 1,70,719 ಕೋಟಿ ರೂ ಇದೆ. ಕಳೆದ ವರ್ಷಕ್ಕೆ ನಿವ್ವಳ ಜಿಎಸ್ಟಿ ಸಂಗ್ರಹದಲ್ಲಿ ಶೇ. 7.6ರಷ್ಟು. ಈ ಹಣಕಾಸು ವರ್ಷದ 10 ತಿಂಗಳಿನಲ್ಲಿ ನಿವ್ವಳ ಜಿಎಸ್ಟಿ 15,95,752 ಕೋಟಿ ರೂ ಸಂಗ್ರಹವಾಗಿದೆ.

ಇದನ್ನೂ ಓದಿ: ಯೂನಿಯನ್ ಬಜೆಟ್ 2026-27: ಯಾವ ಇಲಾಖೆಗೆ ಎಷ್ಟು ಅನುದಾನ? ಇಲ್ಲಿದೆ ಡಿಟೇಲ್ಸ್

ಜಿಎಸ್ಟಿ ರೀಫಂಡ್‌ಗಳಲ್ಲಿ ಶೇ 3.1ರಷ್ಟು ಇಳಿಕೆಯಾಗಿದೆ. ಜನವರಿಯಲ್ಲಿ 22,665 ಕೋಟಿ ರೂ ಮೊತ್ತದಷ್ಟು ರೀಫಂಡ್ ಅಗತ್ಯ. ದೇಶೀಯ ರೀಫಂಡ್‌ಗಳು 13,119 ಕೋಟಿ ರೂ ಇದ್ದು, ಶೇ. 7.1ರಷ್ಟು ಇಳಿಕೆಯಾಗಿದೆ. ರಫ್ತು ರೀಫಂಡ್‌ಗಳು 9,546 ಕೋಟಿ ರೂನಷ್ಟು ಇದ್ದು, ಇದರಲ್ಲಿ ಶೇ. 2.9ರಷ್ಟು ಏರಿಕೆಯಾಗಿದೆ.

ದೇಶೀಯ ಜಿಎಸ್ಟಿ ಸಂಗ್ರಹ 1,41,132 ಕೋಟಿ ರೂ ಇದೆ. ಆಮದು ಜಿಎಸ್ಟಿ ಸಂಗ್ರಹ ಶೇ. 10.1ರಷ್ಟು ಸರಾಸರಿ 52,253 ಕೋಟಿ ರೂ ಇದೆ.

ಇದನ್ನೂ ಓದಿ: ಬಜೆಟ್ 2026 ಪ್ರಕಟಣೆ; ಬಾಂಗ್ಲಾದೇಶದಿಂದ ಹಿಡಿದು ಮಾರಿಷಸ್ ವರೆಗೆ ವಿವಿಧ ದೇಶಗಳಿಗೆ ಭಾರತ ಮಾಡುವ ಧನಸಹಾಯವೆಷ್ಟು?

ಹರ್ಯಾಣ, ಮಹಾರಾಷ್ಟ್ರ, ಗುಜರಾತ್, ಹಿಮಾಚಲಪ್ರದೇಶ ಮತ್ತು ಪಂಜಾಬ್ ರಾಜ್ಯಗಳು ಶೇ 10ಕ್ಕಿಂತ ಹೆಚ್ಚು ಸೆಟಲ್ಮೆಂಟ್ ನಂತರದ ಜಿಎಸ್ಟಿ ಆದಾಯ ಗಳಿಸಿವೆ. ಕರ್ನಾಟಕ, ತಮಿಳುನಾಡು ರಾಜ್ಯಗಳೂ ಕೂಡ ಉತ್ತಮ ಆದಾಯ ಏರಿಕೆ ಕಂಡಿವೆ. ಮಧ್ಯಪ್ರದೇಶ, ಜಾರ್ಖಂಡ್, ಒಡಿಶಾ, ಛತ್ತೀಸ್ ಗಡ್, ಲಡಾಖ್, ಲಕ್ಷದ್ವೀಪ ರಾಜ್ಯಗಳಲ್ಲಿ ಜಿಎಸ್ಟಿ ಆದಾಯದಲ್ಲಿ ಇಳಿಕೆಯಾಗಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *