ಬೆಂಗಳೂರು, ನವೆಂಬರ್ 13: ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಸ್ಟ್ 15 ರಂದು ಜಿಎಸ್ಟಿ (ಜಿಎಸ್‌ಟಿ) ಕಡಿಮೆ ಮಾಡುವ ಬಗ್ಗೆ ಘೋಷಿಸಿದರು. ಸೆಪ್ಟೆಂಬರ್ 22 ರಿಂದ ನೂತನ ಜಿಎಸ್ಟಿ ದರ ಜಾರಿಯಾಗಿದೆ. 350 ಸಿಸಿ ದ್ವಿಚಕ್ರ ವಾಹನದ ಮೇಲಿನ ಜಿಎಸ್ಟಿಯನ್ನು ಶೇ 28 ರಿಂದ 18 ಕ್ಕೆ ಇಳಿಕೆ ಮಾಡಲಾಗಿದೆ. ಪೆಟ್ರೋಲ್ 1200 ಸಿಸಿ ವರೆಗೆ ಮತ್ತು ಡಿಸೆಲ್ 1,500 ಸಿಸಿ ವರೆಗೆ, 4 ಮೀಟರ್ ಉದ್ದದ ಕಾರುಗಳ ಮೇಲೂ ಜಿಎಸ್ಟಿ ಕಡಿಮೆ ಬೆಲೆ. ಈ ಹೊಸ ವಾಹನಗಳನ್ನು ಖರೀದಿ ಮಾಡಿದವರ ಸಂಖ್ಯೆ ದುಪ್ಪಟ್ಟಾಗಿದ್ದರೆ, ಕರ್ನಾಟಕದಲ್ಲಿ (ಕರ್ನಾಟಕ) ಹಿಂದೆಂದೂ ಇಲ್ಲದಷ್ಟು ಹೊಸ ವಾಹನಗಳ ಖರೀದಿ (ವಾಹನ ಮಾರಾಟ) ಅಕ್ಟೋಬರ್ ತಿಂಗಳಿನಲ್ಲಿದೆ.
ಜಿಎಸ್ ಟಿ ಪರಿಷ್ಕರಣೆ ಕರ್ನಾಟಕದಲ್ಲಿ ದುಪ್ಪಟ್ಟಾಯ್ತು ವಾಹನ ನೋಂದಣಿ
ಜಿಎಸ್ಟಿ ಕಡಿಮೆ ಮಾಡುವ ಮುನ್ನ ಕರ್ನಾಟಕದಲ್ಲಿ, ಅಂದರೆ ಆಗಸ್ಟ್ ತಿಂಗಳಿನಲ್ಲಿ 1,61,214 ಹೊಸ ವಾಹನಗಳು ರಸ್ತೆಗಿಳಿದಿವೆ. ಒಂದು 6,717 ವಾಹನಗಳು ರೋಡಿಗಿಳಿದಂತಾಗಿತ್ತು. ಪರಿಷ್ಕೃತ ಜಿಎಸ್ಟಿ ಜಾರಿಯಾದ ಮೇಲೆ, ಅಕ್ಟೋಬರ್ ತಿಂಗಳಿನಲ್ಲಿ 2,52,420 ವಾಹನಗಳು ನೋಂದಣಿ ಆಗಿವೆ. ಇದೀಗ ಪ್ರತಿದಿನ 10,517 ವಾಹನಗಳು ನೋಂದಣಿ ಆಗುತ್ತಿವೆ. ಅಂದರೆ 91,206 ವಾಹನಗಳು ಹೆಚ್ಚುವರಿಯಾಗಿ ರಿಜಿಸ್ಟ್ರೇಷನ್ ಆಗುತ್ತಿವೆ. ಇದರಲ್ಲಿ ಕಾರು, ಬೈಕು ಸೇರಿದಂತೆ ಎಲ್ಲಾ ರೀತಿಯ ವಾಹನಗಳು ಇವೆ. ಹೊಸ ಜಿಎಸ್ಟಿ ದರ ಜಾರಿಯಾದ ಮೇಲೆ ರಿಜಿಸ್ಟ್ರೇಷನ್ ದುಪ್ಪಟ್ಟು ಆಗಿದೆ ಎಂದು ಅಪರ ಸಾರಿಗೆ ಆಯುಕ್ತ ಸಿ. ಮಲ್ಲಿಕಾರ್ಜುನ.
ಬೆಂಗಳೂರಿನಲ್ಲಿ ಎಷ್ಟು ವಾಹನ ಖರೀದಿ?
ಬೆಂಗಳೂರಿನಲ್ಲಿ ಆಗಸ್ಟ್ ತಿಂಗಳಿನಲ್ಲಿ 68,446 ಹೊಸ ವಾಹನಗಳು ರಿಜಿಸ್ಟ್ರೇಷನ್ ಆಗಿವೆ, ಪ್ರತಿದಿನ 2,685 ವಾಹನಗಳು ರೋಡಿಗಿಳಿಯುತ್ತಿದ್ದವು. ನೂತನ ಜಿಎಸ್‌ಟಿ ಜಾರಿಯಾದ ಮೇಲೆ ಅಕ್ಟೋಬರ್ ತಿಂಗಳಿನಲ್ಲಿ 89,014 ವಾಹನಗಳು ರಿಜಿಸ್ಟ್ರೇಷನ್ ಆಗಿವೆ. ಇದೀಗ ಪ್ರತಿದಿನ ಸುಮಾರು 3,748 ಹೊಸ ವಾಹನಗಳು ರೋಡಿಗಿಳಿಯುತ್ತಿವೆ. ಅಂದರೆ ಪ್ರತಿದಿನ ಹೆಚ್ಚುವರಿಯಾಗಿ 1063 ವಾಹನಗಳು ರೋಡಿಗಿಳಿಯುತ್ತಿವೆ. ಒಂದು ತಿಂಗಳಿಗೆ ಸುಮಾರು 89,952 ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ.
ಈ ಬಗ್ಗೆ ಕಾಣಿಸಿಕೊಂಡಿರುವ ವಾಹನ ಸವಾರರು, ವಾಹನಗಳ ಮೇಲೆ ಜಿಎಸ್ಟಿ ದರ ಕಡಿಮೆ ಇರುವ ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಖರೀದಿಸಲು ಮುಂದಾಗಿದ್ದಾರೆ. ಇದರಿಂದ ವಾಹನಗಳ ಸಂಖ್ಯೆ ಹೆಚ್ಚಾಗಲಿದೆ ಮುಂದೆ ಸಂಚಾರ ಸಮಸ್ಯೆ ಕೂಡ ಹೆಚ್ಚಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಜಿಎಸ್ಟಿ ಪರಿಷ್ಕರಣೆ; ಈ ವಸ್ತುಗಳಿಗೆ ನೀವಿನ್ನು ತೆರಿಗೆಯೇ ಕೊಡಬೇಕಿಲ್ಲ!
ಒಟ್ಟಿನಲ್ಲಿ, ನೂತನ ಜಿಎಸ್ ಟಿ ದರ ಜಾರಿಯಾಗುತ್ತಿದೆ, ಸಿಲಿಕಾನ್ ಸಿಟಿ ಜನರು ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಖರೀದಿಸಲು ಮುಂದಾಗಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಟ್ರಾಫಿಕ್ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ