ಜಿ.ಟಿ. ದೇವೇಗೌಡರಿಗೆ ಭರ್ಜರಿ ಶಾಕ್​​ ಕೊಡುತ್ತಾ ಜೆಡಿಎಸ್​​? ವರಿಷ್ಠರ ನಡೆಯೇನು?

ಜಿ.ಟಿ. ದೇವೇಗೌಡರಿಗೆ ಭರ್ಜರಿ ಶಾಕ್​​ ಕೊಡುತ್ತಾ ಜೆಡಿಎಸ್​​? ವರಿಷ್ಠರ ನಡೆಯೇನು?


ಜಿ.ಟಿ. ದೇವೇಗೌಡ

ಮೈಸೂರು, ಜನವರಿ 18: ಜೆಡಿಎಸ್ ನಿಂದ ಸಾಕಷ್ಟು ಅಂತರ ಕಾಯ್ದುಕೊಂಡಿರುವ ಶಾಸಕ ಜಿ.ಟಿ. ದೇವೇಗೌಡಗೆ ಮತ್ತಷ್ಟು ಶಾಕ್ ಕೊಡಲು ಜಾತ್ಯತೀತ ಜನತಾದಳ ನಾಯಕರು ಮುಂದಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸಾ.ರಾ.ಮಹೇಶ್‌ಪ್ಲಾನ್‌ ಎಂದು ಮೈಸೂರಿನಲ್ಲಿ ಪರಿಷತ್‌ನ ಜೆಡಿಎಸ್‌ ಸದಸ್ಯ ಮಂಜೇಗೌಡ ಹೇಳಿದ್ದಾರೆ. ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಸಭೆ ಇದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಸಾ.ರಾ.ಮಹೇಶ್ ಒಪ್ಪಿದ್ದಾರೆ ಎಂದವರು.

ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡ ಪಕ್ಷಕ್ಕೆ ಮೋಸ ಮಾಡಿದ್ದಾರೆ . MLC ಚುನಾವಣೆಯಲ್ಲೂ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ. ಹೀಗಾಗಿ 2028ರ ಚುನಾವಣೆಯಲ್ಲಿ ಸಾ.ರಾ.ಮಹೇಶ್‌ರನ್ನು ಅಭ್ಯರ್ಥಿ ಮಾಡುತ್ತೇನೆ. ಎಲ್ಲಾ ವಿಚಾರವನ್ನು ಜೆಡಿಎಸ್ ವರಿಷ್ಠರ ಗಮನಕ್ಕೆ ತರುತ್ತೇವೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಇರುವ ವಿಷಯವನ್ನು ಅವರ ಗಮನಕ್ಕೆ ತರ ಆಗಷ್ಟೇ ಎಂದವರು. ಇನ್ನು ಈ ಹಿಂದೆಯೇ ಜಿಟಿಡಿಗೆ ಜೆಡಿಎಸ್ ಒಮ್ಮೆ ಶಾಕ್ ನೀಡಿತ್ತು. ಪಕ್ಷದ ಕೋರ್ ಕಮಿಟಿ ಪುನಾರಚನೆ ವೇಳೆ ಸಮಿತಿ ಅಧ್ಯಕ್ಷ ಸ್ಥಾನದಿಂದ ಜಿ.ಟಿ.ದೇವೇಗೌಡರಿಗೆ ಗೇಟ್ ಪಾಸ್ ನೀಡಲಾಯಿತು. ಆ ಸ್ಥಾನಕ್ಕೆ ಚಿಂತಾಮಣಿ ಮಾಜಿ ಶಾಸಕ ಹಾಗೂ ಮಾಜಿ ಉಪ ಸ್ಪೀಕರ್ ಎಂ. ಕೃಷ್ಣಾರೆಡ್ಡಿ ಅವರನ್ನು ನೇಮಿಸಲಾಯಿತು. ಇನ್ನು ಅರಕಲಗೂಡು ಶಾಸಕ ಎ. ಮಂಜು ಅವರನ್ನು ಕೋರ್ ಕಮಿಟಿಯ ಸಂಚಾಲಕ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ನೇಮಿಸಿದ್ದರು.

ಇದನ್ನೂ ಓದಿ: ಸಿಎಂ ಪರ ಜಿಟಿ ದೇವೇಗೌಡ ಬ್ಯಾಟಿಂಗ್; ಜೆಡಿಎಸ್ ನಾಯಕರಿಂದ ಕ್ರಮಕ್ಕೆ ಆಗ್ರಹ

ಜೆಡಿಎಸ್ ಶಾಸಕರಾಗಿದ್ದ ಜಿಟಿಡಿ ಪದೇ ಪದೇ ಸಿದ್ದರಾಮಯ್ಯ ಸೇರಿದಂತೆ ಇತರ ನಾಯಕರನ್ನು ಹೊಗಳುತ್ತಿದ್ದ ಪಕ್ಷದ ಮುಖಂಡ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜೊತೆಗೆ ಪಕ್ಷಕ್ಕೆ ಮುಜುಗರವನ್ನೂ ತಂದಿದೆ. ಈ ಹಿಂದೆಯೂ ಮಾಜಿ ಸಿಎಂ, ಈಗಿನ ಕೇಂದ್ರ ಸಚಿವ ಕಮಾರಸ್ವಾಮಿ ಮತ್ತು ಜಿ.ಟಿ. ದೇವೇಗೌಡರ ನಡುವಿನ ಮನಸ್ತಾಪಗಳು ರಾಜಕೀಯವಾಗಿ ಭಾರಿ ಸುದ್ದಿಯಾಗಿದ್ದವು. ಆದರೆ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ್ದ ದೇವೇಗೌಡರು ಜಿಟಿಡಿ ಮನವೊಲಿಸಿದ್ದರು. ಈ ನಡುವೆ ಮತ್ತೆ ಜಿ.ಟಿ. ದೇವೇಗೌಡರ ವರ್ತನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಹಿನ್ನೆಲೆ ದೊಡ್ಡ ಗೌಡರ ನಡೆ ಏನು ಎಂಬುದು ಸದ್ಯಕ್ಕಿರುವ ಕುತೂಹಲ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *