Headlines

ಸರಿಯಾದ ಸಮಯಕ್ಕೆ ಬ್ಲೌಸ್ ನೀಡಲು ವಿಫಲನಾದ ಟೈಲರ್, 7000 ರೂ ದಂಡ ವಿಧಿಸಿದ ಕೋರ್ಟ್

ಸರಿಯಾದ ಸಮಯಕ್ಕೆ ಬ್ಲೌಸ್ ನೀಡಲು ವಿಫಲನಾದ ಟೈಲರ್, 7000 ರೂ ದಂಡ ವಿಧಿಸಿದ ಕೋರ್ಟ್


ಗುಜರಾತ್, ಅಕ್ಟೋಬರ್ 28: ನೀವೇನಾದ್ರೂ ಟೈಲರ್ (ಟೈಲರ್) ಆಗಿದ್ದು ನಿಮ್ಮ ಬಳಿ ಬ್ಲೌಸ್ ಹೊಲಿಸಲು ಬರುವ ಮಹಿಳೆಯರಿಗೆ ಸರಿಯಾದ ಸಮಯಕ್ಕೆ ಬ್ಲೌಸ್ ತಲುಪಿಸುವುದು ಒಳ್ಳೆಯದು. ನಿಮ್ಮ ನಿರ್ಲಕ್ಷ್ಯ ಅಥವಾ ಕೆಲಸ ಮಾಡದಿದ್ದಲ್ಲಿ ನಿಮ್ಗೂ ಕೂಡ ಇಂತಹದ್ದೇ ಪರಿಸ್ಥಿತಿ ಬರಬಹುದು. ಹೌದು, ಮಹಿಳೆಗೆ ಸರಿಯಾದ ಸಮಯಕ್ಕೆ ಬ್ಲೌಸ್ ನೀಡದೇ ಇದ್ದದ್ದೇ ಟೈಲರ್‌ಗೆ ನುಂಗಲಾರದ ಬಿಸಿ ತುತ್ತಾಗಿ ಪರಿಣಮಿಸಿದೆ. ಗ್ರಾಹಕ ನ್ಯಾಯಾಲಯವು ಟೈಲರ್‌ಗೆ ಏಳು ಸಾವಿರ ರೂ ದಂಡ ವಿಧಿಸಿದ್ದು ಹಾಗೂ ಬ್ಲೌಸ್ ಹೊಲಿಯಲು ನೀಡಲಾಗಿದ್ದ ಪೂರ್ಣ ಮೊತ್ತವನ್ನು ಮರುಪಾವತಿಸುವಂತೆ ಸೂಚಿಸಲಾಗಿದೆ. ಈ ಘಟನೆಯೂ ನಡೆದಿರುವುದು ಗುಜರಾತ್‌ನ ಅಹಮದಾಬಾದ್‌ನಲ್ಲಿ (ಗುಜರಾತ್‌ನ ಅಹಮದಾಬಾದ್) ಸಂಯೋಜನೆ.

ಮಹಿಳಾ ಗ್ರಾಹಕರ ನಂಬಿಕೆಗೆ ಮೋಸ, ಏನಿದು ಘಟನೆ?

ಮದುವೆಯ ರವಿಕೆಯನ್ನು ಸಮಯಕ್ಕೆ ಸರಿಯಾಗಿ ತಲುಪಿಸುವಲ್ಲಿ ಟೈಲರ್ ವಿಫಲವಾಗಿದೆ, ಈ ಕಾರಣವೇ ಕೋರ್ಟ್‌ ಮೆಟ್ಟಿಲೇರಲು ಪ್ರಮುಖವಾಗಿದೆ. ಈ ಘಟನೆಯು ನಡೆದಿರುವುದು ಡಿಸೆಂಬರ್ 24, 2024 ರಲ್ಲಿ. ಮಹಿಳೆ ಯಾರೊಬ್ಬರ ಮದುವೆಗೆ ಹಾಜರಾಗಬೇಕಾಗಿತ್ತು. ಹೀಗಾಗಿ ಅಹಮದಾಬಾದ್‌ನ ಮಹಿಳಾ ಗ್ರಾಹಕಿ ಟೈಲರ್ ಬ್ಲೌಸ್ ಹೊಲಿಯಲು ನೀಡಿದ್ದಳು. ಅಷ್ಟೇ ಅಲ್ಲದೆ ಮಹಿಳೆ ಬ್ಲೌಸ್ ಹೊಲಿಯಲು ಟೈಲರ್‌ಗೆ ಮುಂಗಡವಾಗಿ 4,395 ರೂ.ಗಳನ್ನು ನೀಡಿದ್ದಳು. ಮದುವೆಗೆ ಮೊದಲು ಬ್ಲೌಸ್ ಸಿದ್ಧಪಡಿಸುವುದಾಗಿ ಟೈಲರ್ ಭರವಸೆ ನೀಡಿದ್ದರು. ಹೀಗಿರುವಾಗ ಡಿಸೆಂಬರ್ 14 ರಂದು ಬ್ಲೌಸ್ ತೆಗೆದುಕೊಂಡಾಗ ಬ್ಲೌಸ್ ಹೇಳಿದ್ದ ಅಳತೆ ಹಾಗೂ ವಿನ್ಯಾಸದ ಪ್ರಕಾರ ಹೊಲಿದಿರಲಿಲ್ಲ. ಟೈಲರ್ ಡಿಸೆಂಬರ್ 24 ದಾಟಿದರೂ ಮಹಿಳೆಯ ಕೈಗೆ ಬ್ಲೌಸ್ ತಲುಪಲಿಲ್ಲ.

ಇದನ್ನೂ ಓದಿ:ಮದುವೆಯಾದ ಕೆಲವೇ ನಿಮಿಷಗಳಲ್ಲಿ ವಿಡಿಯೋ KYC ಮೂಲಕ ಮದುವೆ ನೋಂದಣಿ ಮಾಡಿಕೊಂಡ ಕೇರಳದ ದಂಪತಿ

ಇದನ್ನೂ ಓದಿ

ಕೊನೆಗೆ ಮಹಿಳಾ ಗ್ರಾಹಕಿಯೂ ಟೈಲರ್‌ಗೆ ಕಾನೂನು ನೋಟಿಸ್ ಕಳುಹಿಸಿ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆದರೆ ಟೈಲರ್ ಅಹಮದಾಬಾದ್ ಗ್ರಾಹಕ ವಿವಾದ ಪರಿಹಾರ ಆಯೋಗದ ಮುಂದೆ ಹಾಜರಾಗಲಿಲ್ಲ. ಆಯೋಗವು ಟೈಟಬ್ ಬ್ರೌಸ್ ನೀಡಲು ವಿಫಲವಾಗಿರುವುದನ್ನು ಕಂಡು ಸೇವೆಯಲ್ಲಿ ಸ್ಪಷ್ಟವಾದ ಕೊರತೆ ಎಂದು ದೃಢಪಡಿಸಿದ್ದು ಹಾಗೂ ದೂರು ನೀಡಿದ್ದ ಮಹಿಳೆ ಮಾನಸಿಕ ಕಿರುಕುಳ ಅನುಭವಿಸಿದ್ದಾಳೆ. ನ್ಯಾಯಾಲಯವು ಟೈಲರ್‌ಗೆ 4,395 ಮೊತ್ತವನ್ನು ಮರುಪಾವತಿಸಲು ಹೇಳಿದೆ. 7% ವಾರ್ಷಿಕ ಬಡ್ಡಿ ಮತ್ತು ಮಾನಸಿಕ ಯಾತನೆ ಮತ್ತು ಮೊಕದ್ದಮೆ ವೆಚ್ಚಗಳಿಗೆ ಹೆಚ್ಚುವರಿ ಪರಿಹಾರವನ್ನು ನೀಡಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 4:47 pm, ಮಂಗಳವಾರ, 28 ಅಕ್ಟೋಬರ್ 25



Source link

Leave a Reply

Your email address will not be published. Required fields are marked *