ಧಾರವಾಡ, ಫೆ.17: ಗುಳೇದಕೊಪ್ಪ ಗ್ರಾಮದಲ್ಲಿ ಫೆಬ್ರವರಿ 12ರಿಂದ 16ರವರೆಗೆ ಐದು ದಿನಗಳ ಕಾಲ ನಡೆದ ಅದ್ಧೂರಿ ಜಾತ್ರೆಗೆ ಭಕ್ತಿಪೂರ್ವಕ ತೆರೆ ಬಿದ್ದಿದೆ. ನಿರ್ಮಿಸಿದ ಸುದೀರ್ಘ ಕಾಯುವಿಕೆಯ ನಂತರ ಗ್ರಾಮದಲ್ಲಿ ಮೊದಲ ಬಾರಿಗೆ ನೂತನ ಶಿವರಥೋತ್ಸವ ನೆರವೇರಿತು.ರಥೋತ್ಸವದ ವಿಶೇಷ ಆಕರ್ಷಣೆಯಾಗಿ ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪಾರ್ಚನೆ. ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮಿ, ಹುಕ್ಕೇರಿಯ ಚಂದ್ರಶೇಖರ ಶಿವಸ್ವಾಮಿ, ಮುನವಳ್ಳಿಯ ಶಿವಪುತ್ರ ಮಹಾಸ್ವಾಮಿಗಳು, ಕಾದ್ರೋಳ್ಳಿಯ ಗುರುಪುತ್ರ ಮಹಾರಾಜರು ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ನೆರವೇರಿಸಿದರು. ಸ್ಯಾಂಡಲ್‌ವುಡ್ ನಟ ಶರಣ್ ಮತ್ತು ನಟಿ ಮಾಲಾಶ್ರೀ ಭಾಗವಹಿಸಿದ ಅಭಿಮಾನಿಗಳನ್ನು ರಂಜಿಸಿದರು. ರಾಜಾಸ್ಥಾನ, ಒರಿಸ್ಸಾ ವಿವಿಧ ಸೇರಿದಂತೆ ಹೊರರಾಜ್ಯಗಳ ಕಲಾತಂಡಗಳು ಮತ್ತು ಸ್ಥಳೀಯ ಕಲಾವಿದರು ತಮ್ಮ ಪ್ರದರ್ಶನದ ಮೂಲಕ ಜಾತ್ರೆಯ ಮೆರುಗು ಹೆಚ್ಚಿಸಿದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ