
ಚಿಕ್ಕಬಳ್ಳಾಪುರ, ಏಪ್ರಿಲ್ 03: ವಾಣಿಜ್ಯ ಸಿಲಿಂಡರ್ ಕೊರತೆಯಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹಲವು ಹೋಟೆಲ್‌ಗಳು ಬಂದ್ ಆಗಿವೆ. ಇತ್ತ ಚಿಕ್ಕಬಳ್ಳಾಪುರದಲ್ಲೂ ಗ್ಯಾಸ್ ಅಭಾವ ಮುಂದುವರೆದಿದೆ. ಹೋಟೆಲ್‌ಗಳು ಬಂದ್ ಆಗುತ್ತಿವೆ. ಹೀಗಾಗಿ ಸದ್ಯಕ್ಕೆ ತರಕಾರಿಗೆ (ತರಕಾರಿ) ಬೆಲೆಯಂತಾಗಿದ್ದರೆ, ರಾಶಿ-ರಾಶಿ ಇಲ್ಲದ ತರಕಾರಿಗಳು ಕೊಳೆಯದಿವೆ.
ಚಿಕ್ಕಬಳ್ಳಾಪುರದಲ್ಲಿ ತರಕಾರಿಗಿಲ್ಲ ಬೆಲೆ
ಚಿಕ್ಕಬಳ್ಳಾಪುರ ಹೂವು, ಹಣ್ಣು, ತರಕಾರಿಗೆ ಖ್ಯಾತಿ ಪಡೆದಿದೆ. ಅಲ್ಲಿ ಬೆಳೆಯುವ ತರಕಾರಿಗಳು ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಮೆಟ್ರೋ ನಗರಗಳಿಗೆ ದಿನನಿತ್ಯ ರಫ್ತಾಗುತ್ತದೆ. ಆದರೆ ವಾಣಿಜ್ಯ ಸಿಲಿಂಡರ್‌ಗಳ ಕೊರತೆಯಿಂದ ಬೆಂಗಳೂರು ಸೇರಿದಂತೆ ವಿವಿಧ ಹೋಟೆಲ್‌ಗಳು ಬಂದ್ ಆಗಿವೆ.
ಇದನ್ನೂ ಓದಿ: ಚಿಯಾ, ಕಲ್ಲಂಗಡಿ ಬೆನ್ನಲ್ಲೇ ಕರಬೂಜಕ್ಕೂ ತಟ್ಟಿದ ಯುದ್ಧದ ಬಿಸಿ: ದರ ಕುಸಿತ, ಹೊಲದಲ್ಲೇ ಕೊಳೆಯುತ್ತಿರುವ ಹಣ್ಣು
ಇದರಿಂದ ಚಿಕ್ಕಬಳ್ಳಾಪುರದ ತರಕಾರಿಗೆ ಬೆಲೆ ಇಲ್ಲ. ತರಕಾರಿಗಳ ಬೆಲೆ ತೀವ್ರವಾಗಿ ಕುಸಿದಿದೆ. ಬೆಸಿಗೆ ಕೆ.ಜಿ ಬೀನ್ಸ್ ಬೆಲೆ ಬರೋಬ್ಬರಿ 80 ರೂಪಾಯಿಯಿಂದ 100 ರೂಪಾಯಿವರೆಗೂ ಇರುತ್ತೆ, ಆದರೆ ಈ ಭಾರಿ ಮೂಟೆ ಬೀನ್ಸ್ ಬೆಲೆ 300 ರೂಪಾಯಿಯಿಂದ 400 ನೂರು ರೂಪಾಯಿಗೆ ಬಿಕಾರಿಯಾಗುತ್ತಿದೆ.
ಯಾವ ತರಕಾರಿಗೆ ಎಷ್ಟು ಬೆಲೆ?
ಇರಾನ್, ಇಸ್ರೇಲ್-ಅಮೇರಿಕ ಯುದ್ಧ ಪ್ರಾರಂಭವಾಗುವುದಕ್ಕೂ ಮುನ್ನ ತರಕಾರಿಗಳಿಗೆ ಒಳ್ಳೆಯ ಬೆಲೆಯಿತ್ತು. ಕಳೆದ 20 ದಿನಗಳಿಂದ ತರಕಾರಿಗಳ ಬೆಲೆ ತೀವ್ರ ಕುಸಿದಿದೆ. ಬೀನ್ಸ್ ಕೆಜಿಗೆ 20 ರೂ, ಕ್ಯಾರೆಟ್ 8 ರೂ, ಸೋರೆಕಾಯಿ 5 ರೂ, ಆಲೂಗಡ್ಡೆ 6 ರೂ, ಬೆಂಡೆಕಾಯಿ 10 ರೂ, ಈರುಳ್ಳಿ 12 ರೂ, ಮೂಲಂಗಿ 5 ರೂ, ಆಗಲಕಾಯಿ 15 ರೂ, ಕ್ಯಾಪ್ಸಿಕಂ 20 ರೂ, ಬದನೇಕಾಯಿ 2 ರೂ, ಕುಸಿದಿದೆ. ಇನ್ನು ಹಗಲು-ರಾತ್ರಿ ಕಷ್ಟಪಟ್ಟು ತರಕಾರಿ ಬೆಳೆದ ರೈತರು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಮಧ್ಯಪ್ರಾಚ್ಯದ ವಾರ್ ಎಫೆಕ್ಟ್ : ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ; ಪಾತಾಳಕ್ಕಿಳಿದ ಬೆಲೆ
ಒಟ್ಟಿನಲ್ಲಿ ಗಲ್ಫ್ ಯುದ್ಧ ಎಫೆಕ್ಟ್ ನಿಂದ ವಾಣಿಜ್ಯ ಸಿಲಿಂಡರ್ ಸಿಗದೇ ಹೋಟೆಲ್ ಉದ್ಯಮ ಕುಂಟುತ್ತಾ ಸಾಗಿದೆ. ಈ ಹೋಟೆಲ್ ಉದ್ಯಮವನ್ನು ನಂಬಿರುವ ತರಕಾರಿ ವ್ಯಾಪಾರಕ್ಕೂ ಭಾರಿ ಹೊಡೆತ ಬಿದ್ದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.