ಬೆಂಗಳೂರು, (ಫೆಬ್ರವರಿ 27): ಕುರಿ ವ್ಯಾಪಾರ (ಕುರಿ ಮಾರುವ ವ್ಯಾಪಾರಿ) ಮಾಡಿಕೊಂಡಿದ್ದ ವ್ಯಕ್ತಿ ಬಳಿ ಪಿಸ್ತೂಲ್ ಇದೆ. ಕುರಿ ವ್ಯಾಪಾರ ಮಾಡಿಕೊಂಡಿದ್ದ ಬೆಂಗಳೂರಿನ (ಬೆಂಗಳೂರು) ಸೈಯದ್ ಮಸೂದ್ ಎಂಬಾತ ಪಿಸ್ತೂಲ್ ಇಟ್ಟುಕೊಂಡಿದ್ದ. ಈ ಮಾಹಿತಿ ಪಡೆದಿರುವ ಸಿಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆಕ್ಟ್‌ಯಡಿ ಕೇಸ್ ದಾಖಲಿಸಿ ಸೈಯದ್ ಮಸೂದ್ ಹಾಗೂ ಜಾವೇದ್ ಆಲಂ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಭೋಪಾಲ್ ಮೂಲದ ವ್ಯಕ್ತಿಯಿಂದ ಪಿಸ್ತೂಲ್ ತರಿಸಿಕೊಂಡಿರುವ ಮಸೂದ್ ಬಾಯ್ಬಿಟ್ಟಿದ್ದಾನೆ. ಸದ್ಯ ಸಿಸಿಬಿ, ಬಂಧಿತರಿಂದ 0.32 ಎಂಎಂ ಪಿಸ್ತೂಲ್, 50 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದೆ, ಆದರೆ, ಮಸೂದ್ ಯಾವ ಕಾರಣಕ್ಕೆ ಗನ್ ತರಿಸಿಕೊಂಡಿದ್ದ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.