‘ನೀನು ಯಾವ ಕಾರಣಕ್ಕೂ ತಾಯಿ ಆಗಬಾರದು’: ಯುವತಿ ಖಾಸಗಿ ಅಂಗಕ್ಕೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಿದ ಯುವಕ

‘ನೀನು ಯಾವ ಕಾರಣಕ್ಕೂ ತಾಯಿ ಆಗಬಾರದು’: ಯುವತಿ ಖಾಸಗಿ ಅಂಗಕ್ಕೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಿದ ಯುವಕ


ಗುರುಗ್ರಾಮ, ಫೆ.23: ಹೆಣ್ಣು ಮತ್ತು ಗಂಡಿನ ಸಂಬಂಧ ದೈಹಿಕ ಸಂಬಂಧದಲ್ಲಿ ಮುಗಿಯುತ್ತದೆ, ಆ ಸಂಬಂಧಗಳಿಗೆ ಬೆಲೆಯೇ ಇರುವುದಿಲ್ಲ. ದೆಹಲಿ, ಬೆಂಗಳೂರು ಮುಂತಾದ ಮಹಾನಗರಗಳಲ್ಲಿ ಯುವಕ-ಯುವತಿಯರು ಮನಸ್ಸಿನ ಸಂಬಂಧಕ್ಕಿಂತ ದೈಹಿಕ ಸಂಬಂಧಕ್ಕೆ ಬೆಲೆ ಇದೆ ಎಂದು ಅನೇಕ ಘಟನೆಗಳು ವಿವರಿಸಿವೆ. ಅದಕ್ಕೆ ಸಾಕ್ಷಿ ಕೂಡ ಇದೆ. ಲಿವ್ ಇನ್ ರಿಲೇಶನ್ ಶಿಪ್ ಮೂಲಕ ಗೆಳತನ ಬೆಳಸಿಕೊಂಡು ದೈಹಿಕ ಸಂಪರ್ಕದ ನಂತರ ಇಬ್ಬರ ನಡುವೆಯೂ ಹೊಂದಾಣಿಕೆ ಇರುವುದಿಲ್ಲ. ಕೊನೆಗೆ ಒಬ್ಬರ ಮೇಲೆ ಸಂಪರ್ಕಿಸಿದ ಸಂದೇಹ ಪಡುತ್ತ, ಅಂತಿಮವಾಗಿ ಕೊಲೆಯಲ್ಲಿ ಅಂತ್ಯವಾಗುತ್ತದೆ. ಇದೀಗ ಇಂತಹದೇ ಘಟನೆಯೊಂದು ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ. ಯುವತಿಯರ ಮೇಲೆ ನಡೆದ ಸರಣಿ ದೌರ್ಜನ್ಯದ ಅಘಾತಕಾರಿ ಕೃತ್ಯವೊಂದು ಬೆಳಕಿಗೆ ಬಂದಿದೆ. ಲಿ ತನ್ನವ್ವ ಇನ್ ರಿಲೇಶನ್ ಶಿಪ್ ನಲ್ಲಿದ್ದ ಯುವತಿಯನ್ನು ಭೀಕರ ಹಲ್ಲೆ ಮಾಡಿದ್ದಾನೆ.

ಇದೀಗ ತ್ರಿಪುರಾ ಮೂಲದ 19 ವರ್ಷದ ಬಿ.ಎಸ್.ಸಿ ವಿದ್ಯಾರ್ಥಿನಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ತ್ರಿಪುರಾ ಮೂಲದ ಸಂತ್ರಸ್ತೆ ಗುರುಗ್ರಾಮದ ಸೆಕ್ಟರ್ 69 ರ ಪಿಜಿಯೊಂದರಲ್ಲಿ ವಾಸವಿದ್ದು, ಬಯೋಟೆಕ್ನಾಲಜಿ ಅಭ್ಯಾಸ ಮಾಡುತ್ತಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಆಯಪ್ ಒಂದರ ಮೂಲಕ ದೆಹಲಿಯ ನೇರಳಾ ಮೂಲದ ಶಿವಂ ಎಂಬಾತನ ಪರಿಚಯವಾಗಿತ್ತು. ಮದುವೆಯ ಆಮಿಷವೊಡ್ಡಿದ ಶಿವಂ, ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸದೆ, ಗುರುಗ್ರಾಮದ ಫ್ಲಾಟ್ ಒಂದರಲ್ಲಿ ಆಕೆಯಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದನು.

ಇಬ್ಬರ ನಡುವೆ ವಿಚಾರವಾಗಿ ಸಂದೇಹಗಳು ಮೂಡಿವೆ. ಶಿವಂ, ಯುವತಿಯ ಮೇಲೆ ಸತತವಾಗಿ ದೈಹಿಕ ದೌರ್ಜನ್ಯ ಎಸಗುತ್ತಿದ್ದ. ಆದರೆ ಕಳೆದ ಸೋಮವಾರ (ಫೆಬ್ರವರಿ 16) ಈ ಕ್ರೌರ್ಯ ಮಿತಿಮೀರಿತು. ಯುವತಿಯ ತಲೆಯನ್ನು ಗೋಡೆಗೆ ಜಜ್ಜಿ, ಸ್ಟೀಲ್ ಬಾಟಲಿ ಮತ್ತು ಮಣ್ಣಿನ ಮಡಕೆಯಿಂದ ಹಲ್ಲೆ ನಡೆಸಿದ್ದಾನೆ. ಯುವತಿಯ ಖಾಸಗಿ ಅಂಗಕ್ಕೆ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾನೆ. ಈ ಭೀಕರ ಕೃತ್ಯದ ವಿಡಿಯೋವನ್ನೂ ಸಹ ಆರೋಪಿ ಚಿತ್ರೀಕರಿಸಿದ್ದಾನೆ. ಯುವತಿಯ ಕಾಲುಗಳಿಗೆ ಚಾಕುವಿನಿಂದ ಇರಿದು, “ಇನ್ನು ಮುಂದೆ ನೀನು ತಾಯಿಯಾಗಲು ಅಥವಾ ನಡೆಯಲು ಸಾಧ್ಯವಾಗದಂತೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ.

ಇದನ್ನೂ ಓದಿ: ಮದುವೆ ಹಾಲ್ ನ ಶೌಚಾಲಯದ ಬಾಗಿಲಿನಲ್ಲಿ ಶಿವಾಜಿ ಮಹಾರಾಜ್, ಮಹಾರಾಣಿ ಪದ್ಮಿನಿ ಫೋಟೋ

ಎರಡು ದಿನಗಳ ಕಾಲಹಿಂಸೆ ಅನುಭವಿಸಿದ ಯುವತಿ, ಫೆಬ್ರವರಿ 18 ರಂದು ಆರೋಪಿಯ ಫೋನಿನಿಂದಲೇ ತನ್ನ ತಾಯಿಗೆ ಕರೆ ಮಾಡಿ ಸ್ಥಳೀಯ ಭಾಷೆಯಲ್ಲಿ ವಿಷಯ ತಿಳಿಸಿದ್ದಾಳೆ. ಇದರಲ್ಲಿ ಆರೋಪಿಗೆ ವಿಷಯ ಅರ್ಥವಾಗಲಿಲ್ಲ. ತಕ್ಷಣ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಯುವತಿಯನ್ನು ರಕ್ಷಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *