ಸಿಎಂ ಸಿದ್ದರಾಮಯ್ಯಗೆ ಹೆಚ್​​.ಡಿ. ಕುಮಾರಸ್ವಾಮಿ ಸವಾಲ್​: ಕೇಂದ್ರ ಸಚಿವ ಹೇಳಿದ್ದೇನು?

ಸಿಎಂ ಸಿದ್ದರಾಮಯ್ಯಗೆ ಹೆಚ್​​.ಡಿ. ಕುಮಾರಸ್ವಾಮಿ ಸವಾಲ್​: ಕೇಂದ್ರ ಸಚಿವ ಹೇಳಿದ್ದೇನು?


ಸಿಎಂ ಸಿದ್ದರಾಮಯ್ಯಗೆ ಹೆಚ್.ಡಿ. ಕುಮಾರಸ್ವಾಮಿ ಸವಾಲ್ : ಕೇಂದ್ರ ಸಚಿವ ಹೇಳಿದ್ದೇನು?

ದಾವಣಗೆರೆ, ಏಪ್ರಿಲ್ 05: ಜೆಡಿಎಸ್ ಬಗ್ಗೆ ಟೀಕಿಸುವ ಸಿಎಂ ಸಿದ್ದರಾಮಯ್ಯ ಅವರು ಪ್ರಾದೇಶಿಕ ಪಕ್ಷ ಸ್ಥಾಪಿಸಿ ಚುನಾವಣೆಗೆ ಸ್ಫರ್ಧಿಸಲಿ. ಆಗ ಅವರು ಎಷ್ಟು ಕ್ಷೇತ್ರ ಗೆಲ್ಲುತ್ತಾರೆ ಎಂಬುದು ಗೊತ್ತಾಗಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಕುಟುಂಬ ರಾಜಕಾರಣದ ವಿಷಯವನ್ನು ಪ್ರಸ್ತಾಪಿಸಿದ ಅವರು, ತಮ್ಮ ಕುಟುಂಬದ ರಾಜಕೀಯ ಪ್ರವೇಶವು ಜನರ ಬೆಂಬಲದಿಂದ ಆದದ್ದು, ಆದರೆ ಸಿದ್ದರಾಮಯ್ಯರ ಮಗನ ರಾಜಕೀಯ ಪ್ರವೇಶವು ರಾಜ್ಯದ ಉದ್ದಾರಕ್ಕಲ್ಲ, ಬದಲಾಗಿ ವಸೂಲಿಗಾಗಿ ಎಂದು ಆರೋಪಿಸಿದ್ದಾರೆ. ಜೆಡಿಎಸ್ 40 ಸೀಟುಗಳನ್ನು ಗೆದ್ದಿದ್ದು ಸ್ವಂತ ಶಕ್ತಿಯಿಂದ. 130-140 ಸೀಟು ಗೆದ್ದಿದ್ದೀವಿ ಎಂಬ ಅಹಂಕಾರ ಶಾಶ್ವತವಲ್ಲ. ತಮಿಳುನಾಡಲ್ಲಿ ಡಿಎಂಕೆ ಬಳಿಯಿಂದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ 28 ಸೀಟುಗಳನ್ನು ಪಡೆದಿದ್ದು, ಆ ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳಿಲ್ಲದೆ ಬೀದಿಯಲ್ಲಿ ಹೋಗುವವರನ್ನು ತಂದು ನಿಲ್ಲಿಸಿದ್ದಾರೆ ಎಂದು ಹೆಚ್ಡಿಕೆ ವ್ಯಂಗ್ಯವಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *