Headlines

ಎಸ್​ಜೆ-100 ಪ್ಯಾಸೆಂಜರ್ ವಿಮಾನ ತಯಾರಿಕೆ; ರಷ್ಯನ್ ಕಂಪನಿ ಜೊತೆ ಎಚ್​ಎಎಲ್​ನಿಂದ ಒಪ್ಪಂದ

ಎಸ್​ಜೆ-100 ಪ್ಯಾಸೆಂಜರ್ ವಿಮಾನ ತಯಾರಿಕೆ; ರಷ್ಯನ್ ಕಂಪನಿ ಜೊತೆ ಎಚ್​ಎಎಲ್​ನಿಂದ ಒಪ್ಪಂದ


ಜುಲೈ, ಅಕ್ಟೋಬರ್ 28: ಭಾರತದ ಸ್ವಾವಲಂಬನೆಯ ಹಾದಿ ಮತ್ತಷ್ಟು ಸುಗಮಗೊಳ್ಳಲು ಸಹಕಾರಿಯಾಗುವಂತಹ ಬೆಳವಣಿಗೆಯಾಗಿದೆ. ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆ ಮತ್ತು ರಷ್ಯಾದ ಯುನೈಟೆಡ್ ಏರ್ ಕ್ರಾಫ್ಟ್ ಕಾರ್ಪೊರೇಶನ್ ಸಂಸ್ಥೆ ನಡುವೆ ತಿಳಿವಳಿಕೆ ಒಪ್ಪಂದ (MoU) ಏರ್ಪಟ್ಟಿದೆ. ಇದರ ಪ್ರಕಾರ ಭಾರತದಲ್ಲಿ ಎಸ್ಜೆ-100 (SJ-100 ಪ್ರಯಾಣಿಕರ ವಿಮಾನ) ಎಂಬ ಪ್ಯಾಸೆಂಜರ್ ವಿಮಾನವನ್ನು ಹೊಂದಿದೆ. ಮಾಸ್ಕೋದಲ್ಲಿ ಅಕ್ಟೋಬರ್ 27 ರಂದು ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಎಚ್‌ಎಲ್‌ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದರೊಂದಿಗೆ ಭಾರತೀಯ ಕಂಪನಿಯೊಂದು 3-4 ನಂತರ ಮೊದಲ ಬಾರಿಗೆ ಪರಿಪೂರ್ಣ ಪ್ರಯಾಣಿಕ ವಿಮಾನ ತಯಾರಿಕೆಗೆ ಅವಕಾಶ ಸಿಕ್ಕಂತಾಗಿದೆ. 1961 ರಿಂದ 1988 ರವರೆಗೂ ಯುನೈಟೆಡ್ ಕಿಂಗ್ಡನ್ನ ಆವ್ರೋ ಕಂಪನಿಯ ಎಚ್‌ಎಸ್‌748 ಎಂಬ ವಿಮಾನವನ್ನು ಇದೇ ಎಚ್‌ಎಎಲ್ ಕಂಪನಿಯಲ್ಲಿ ಭಾರತದಲ್ಲಿ ತಯಾರಿಸಲಾಯಿತು. 1988ರಲ್ಲಿ ಈ ವಿಮಾನದ ಉತ್ಪಾದನೆ ನಿಂತುಹೋಗಿತ್ತು. ಈಗ ಕಂಪನಿಯ ಕಂಪನಿಯಲ್ಲಿ ಇದೆ ಎಚ್ಎಎಲ್ ಮತ್ತೊಂದು ವಿಮಾನ ತಯಾರಿಕೆಯಲ್ಲಿ ಕೈಹಾಕಿರುವುದು ಗಮನಾರ್ಹವಾಗಿದೆ.

ಇದನ್ನೂ ಓದಿ: ಅಮೆರಿಕದಿಂದ ತೈಲ ಆಮದು ಹೆಚ್ಚಿಸಿದ ಭಾರತ; ಕಡಿಮೆಗೊಳ್ಳುತ್ತಾ ಟ್ರಂಪ್ ತಾಪ?

ಯಾವುದಿದು ಎಸ್ಜೆ-100 ವಿಮಾನ?

ಎಸ್ಜೆ-100 ಅಥವಾ ಸುಖೋಯ್ ಸೂಪರ್ ಜೆಟ್-100 ವಿಮಾನದ ತಯಾರಿಕೆ ಕಳೆದ 20 ವರ್ಷಗಳಿಂದ ಆಗುತ್ತಿದೆ. ಸದ್ಯ 200ಕ್ಕೂ ಹೆಚ್ಚು ಈ ವಿಮಾನಗಳನ್ನು ತಯಾರಿಸಲಾಗಿದೆ. 16ಕ್ಕೂ ಅಧಿಕ ವಿಮಾನ ಕಂಪನಿಗಳು ಈ ವಿಮಾನಗಳನ್ನು ಬಳಸುತ್ತಿವೆ.

ಈ ಎಸ್ಜೆ-100 ವಿಮಾನದಲ್ಲಿ ಸುಮಾರು 87 ರಿಂದ 101 ಪ್ರಯಾಣಿಕರು ಕೂರಬಹುದು. ಈ ಲಘು ವಿಮಾನಗಳು ಭಾರತದ ಪ್ರಾದೇಶಿಕ ವೈಮಾನಿಕ ನೆಟ್ವರ್ಕ್ ವೃದ್ಧಿಸಲು ಸಹಕಾರಿಯಾಗಲಿವೆ. ಸರ್ಕಾರದ ಉಡಾನ್ ಸ್ಕೀಮ್ನಲ್ಲಿ ವಿವಿಧ ಪಟ್ಟಣಗಳ ನಡುವೆ ವಿಮಾನ ಸಂಪರ್ಕ ಸಾಧಿಸುವ ಗುರಿ ಇದೆ. ಈ ಇಂತಹ ಸಣ್ಣ ವಿಮಾನಗಳಿಗೆ ಬೇಡಿಕೆ ಇದೆ. ಒಂದು ಅಂದಾಜಿನ ಪ್ರಕಾರ ಮುಂದಿನ ದಿನಗಳಲ್ಲಿ 200ಕ್ಕೂ ಅಧಿಕ ಸಣ್ಣ ವಿಮಾನಗಳು ಭಾರತದಲ್ಲಿ ಬೀಳಲಿವೆ.

ಇದನ್ನೂ ಓದಿ: ಪ್ರಚಂಡ ವೇಗದಲ್ಲಿ ಹೆಚ್ಚುತ್ತಿರುವ ಭಾರತದ ಉತ್ಪಾದನೆಸ್ ರಫ್ತು; ಪೆಟ್ರೋಲಿಯಂ ಉತ್ಪನ್ನಗಳನ್ನೂ ಹಿಂದಿಕ್ಕುತ್ತಿದೆ

ಈ ಕಾರಣಕ್ಕೆ ಎಚ್‌ಎಎಲ್‌ನಿಂದ ಎಸ್‌ಜೆ-100 ವಿಮಾನ ತಯಾರಿಕೆಯಲ್ಲಿ ಮಹತ್ವದ ಸಂಗತಿ. ಆದಾಗ್ಯೂ, ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಸರ್ಕಾರದ ಕನಸು ಇದು ಒಂದು ಪ್ರಮುಖ ಹೆಜ್ಜೆಯೂ ಹೌದು. ಭಾರತದ ವಿಮಾನಯಾನ ಉದ್ಯಮದ ಇತಿಹಾಸದಲ್ಲಿ ಹೊಸ ಅಧ್ಯಾಯ ಎನಿಸುತ್ತದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *